ಜಾತಕದಲ್ಲಿ ಶುಕ್ರನ ಸ್ಥಾನ ಬಲವಾಗಿದ್ದರೆ ಆ ವ್ಯಕ್ತಿ ಜೀವನದ ಸಕಲ ಸುಖ, ಸೌಕರ್ಯ, ಸಿರಿ ಸಂಪತ್ತು ಅನುಭವಿಸುತ್ತಾನೆ. ಹೆಜ್ಜೆ ಹೆಜ್ಜೆಗೂ ಗೆಲುವು ಒಲಿಯುವುದು.
ಶುಕ್ರ ಮಹಾ ದಶಾ ಬರೋಬ್ಬರಿ 20 ವರ್ಷಗಳವರೆಗೆ ಇರುತ್ತದೆ. ಹಾಗಾಗಿ 20 ವರ್ಷ ಈ ರಾಶಿಯವರ ಜೀವನದಲ್ಲಿ ಅತ್ಯಂತ ಮುಖ್ಯ ಘಟ್ಟ ಆಗಿರಲಿದೆ.
ಮೇಷ ರಾಶಿ : ಅಂದು ಕೊಂಡ ಕೆಲಸ ಅಂದುಕೊಂಡಂತೆ ಸರಾಗವಾಗಿ ನಡೆಯುವುದು. ಆರ್ಥಿಕ ಸ್ಥಿತಿ ಬಲವಾಗುವುದು. ಉದ್ಯೋಗದಲ್ಲಿ ಬಡ್ತಿ ಸಿಗುವುದು. ಮನೆಯಲ್ಲಿ, ಕಚೇರಿಯಲ್ಲಿ ನಿಮ್ಮ ಮಾತೇ ನಡೆಯುವುದು.
ತುಲಾ ರಾಶಿ : ಕಷ್ಟಗಳೆಲ್ಲಾ ಒಂದೊಂದಾಗಿ ಕಳೆದು ಹೋಗುವುದು. ನಿರ್ಧಾರ ಯಶಸಿನತ್ತಲೇ ಕೊಂಡೊಯ್ಯುವುದು. ಹಣಕಾಸಿನ ಸಮಸ್ಯೆ ಬಾಧಿಸುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆ ಬಂದರೂ ಪರಿಹಾರವೂ ಜೊತೆಯಲ್ಲಿಯೇ ಇರುತ್ತದೆ.
ಕನ್ಯಾ ರಾಶಿ : ಏನೇ ಕೆಲಸ ಮಾಡಿದರೂ ತಾಳ್ಮೆಯಿಂದ ಮಾಡಬೇಕು. ಆಗ ಸೋಲು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುವಿರಿ.ಆಸ್ತಿ ಖರೀದಿಸಬೇಕು ಎನ್ನುವ ಯೋಚನೆ ಇದ್ದರೆ ಇದು ಸಕಾಲ.
ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. Zee News ಅದನ್ನು ಖಚಿತಪಡಿಸುವುದಿಲ್ಲ.