Shukra Gochar 2026: ವೈದಿಕ ಜ್ಯೋತಿಷ್ಯದಲ್ಲಿ ಪ್ರೀತಿ, ಸುಖ-ಸಂಪತ್ತಿನ ಅಂಶ, ಧನಕಾರಕ ಎನ್ನಲಾಗುವ ಶುಕ್ರ ಗ್ರಹ 2026ರಲ್ಲಿ ರಾಶಿ ಚಕ್ರವನ್ನು ಬದಲಾಯಿಸುವುದರೊಂದಿಗೆ ಕೆಲವು ರಾಶಿಯವರ ಅದೃಷ್ಟವನ್ನು ಕೂಡ ಬದಲಾಯಿಸಲಿದ್ದಾನೆ. 2026 ರಲ್ಲಿ ಕೆಲವರ ಬಾಳಲ್ಲಿ ಶುಕ್ರದೆಸೆ ಆರಂಭವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದು ತಿಳಿಯೋಣ.
1/6ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರೀತಿ, ಸಂಪತ್ತು, ಸೌಕರ್ಯ, ಐಶ್ವರ್ಯಕಾರಕ ಎನ್ನಲಾಗುವ ಶುಕ್ರ ಗ್ರಹದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮವನ್ನು ಬೀರುತ್ತದೆ. 2026 ರ ಮಾರ್ಚ್ 02ರಂದು ಶುಕ್ರ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಇದರೊಂದಿಗೆ ಕೆಲವು ರಾಶಿಯವರ ಜಾತಕದಲ್ಲಿ ಶುಕ್ರದೆಸೆ ಆರಂಭವಾಗಲಿದೆ.
2/62026 ರಲ್ಲಿ ನಾಲ್ಕು ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದ್ದು ಅವರ ಬದುಕಿನಲ್ಲಿ ಸುಖ-ಸೌಕರ್ಯಗಳು ವೃದ್ದಿಯಾಗಲಿವೆ. ಹಣಕಾಸಿನ ಹರಿವು ಹೆಚ್ಚಾಗಿ ಸ್ವಂತ ಮನೆ, ಐಶಾರಾಮಿ ವಾಹನ ಖರೀದಿ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
3/6ಶುಕ್ರ ವೃಷಭ ರಾಶಿಯವರ ಅಧಿಪತಿ ಗ್ರಹವೂ ಆಗಿದ್ದು 2026 ರಲ್ಲಿ ಇವರ ಮೇಲೆ ಧನಕಾರಕನ ವಿಶೇಷ ಅನುಗ್ರಹವಿರಲಿದೆ. ಹಣಕಾಸಿನ ಸ್ಥಿತಿಯಲ್ಲಿ ಹಿಂದೆಂದಿಗಿಂತಲೂ ಉತ್ತಮ ಸುಧಾರಣೆ ಕಂಡು ಬರಲಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯುವಿರಿ. ಉದ್ಯೋಗ ರಂಗದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ. ಸಮಾಜದಲ್ಲಿ ಖ್ಯಾತಿ, ಗೌರವ ದೊರೆಯಲಿದೆ. ವ್ಯವಹಾರದಲ್ಲಿ ನಿರೀಕ್ಷೆಗಿಂತಲೂ ಉತ್ತಮ ಲಾಭವನ್ನು ಪಡೆಯುವಿರಿ.
4/62026 ರಲ್ಲಿ ಈ ರಾಶಿಯವರು ಶುಕ್ರದೆಸೆಯಿಂದ ತಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವರು. ದೀರ್ಘಕಾಲದ ನಿಮ್ಮ ಕನಸುಗಳಿಗೆ ರೆಕ್ಕೆ ದೊರೆಯುವ ಸಮಯ ಇದಾಗಿದೆ. ಐಶಾರಾಮಿ ವಾಹನ ಖರೀದಿಸುವ ನಿಮ್ಮ ಬಯಕೆ ಈಡೇರುತ್ತವೆ. ಕೃಷಿಕರಿಗೆ ಭಾರೀ ಲಾಭಾಂಶ ದೊರೆಯಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಮನೆಯಲ್ಲಿ ಸುಖ-ಸಮೃದ್ಧಿ ಕಾಣುವಿರಿ.
5/62026 ರಲ್ಲಿ ವೃಶ್ಚಿಕ ರಾಶಿಯವರಿಗೆ ಶುಕ್ರನ ವಿಶೇಷ ಆಶೀರ್ವಾದ ಇರಲಿದ್ದು, ಜೀವನದಲ್ಲಿ ಸುಖ-ಸಂಪತ್ತು ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಲಿವೆ. ಉದ್ಯೋಗಸ್ಥರಿಗೆ ಬಡ್ತಿ ಅವಕಾಶಗಳು ದೊರೆಯಲಿವೆ. ಸಂಬಂಧಿಕರೊಂದಿಗಿನ ಮನಸ್ಥಾಪ ದೂರವಾಗಲಿದೆ. ವಿವಾಹಿತರ ನಡುವೆ ಪರಸ್ಪರ ಪ್ರೀತಿ ಹೆಚ್ಚಾಗಲಿದ್ದು ಹಣಕಾಸಿ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.
6/62026 ರಲ್ಲಿ ಶುಕ್ರನ ಸ್ಥಾನ ಬದಲಾವಣೆ ಸ್ವ ರಾಶಿಯಲ್ಲಿಯೇ ಆಗುವುದರಿಂದ ಈ ರಾಶಿಯವರಿಗೆ ದಿಢೀರ್ ಲಾಭವಾಗಲಿದೆ. ಆರ್ಥಿಕ ಸಮೃದ್ಧಿಯನ್ನು ಕಾಣುವ ದಿನ. ದಾಂಪತ್ಯದಲ್ಲಿದ್ದ ಮಾಧುರ್ಯತೆ ಹೆಚ್ಚಾಗಲಿದೆ. ದೀರ್ಘಕಾಲದಿಂದ ತಡೆಯಾಗಿದ್ದ ಕೆಲಸಗಳಿಗೆ ಚಾಲನೆ ದೊರೆಯಲಿದೆ. ಮನೆಯಲ್ಲಿ ಸುಖ-ಸಂತೋಷ ಇರಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಉದ್ಯೋಗದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಮನ್ನಣೆ ದೊರೆಯಲಿದೆ. ಹೊಸ ವಾಹನ ಖರೀದಿಸುವ ಯೋಗವಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.