Shweta Tiwari: ಶ್ವೇತಾ ತಿವಾರಿ ಟಿವಿ ಉದ್ಯಮದಲ್ಲಿ ಪ್ರಸಿದ್ಧ ಮತ್ತು ಯಶಸ್ವಿ ನಟಿ. ತಮ್ಮ ನಟನಾ ಕೌಶಲ್ಯದಿಂದ ಪ್ರೇಕ್ಷಕರ ಹೃದಯಗಳನ್ನು ಆಳುತ್ತಿರುವ ಈ ಚೆಲುವೆ, ಆಗಾಗ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಸದ್ಯ ಈ ಹೀರೋಯಿನ್‌ಗಾಗಿ ವ್ಯಕ್ತಿಯೊಬ್ಬ ಸಾಯಲು ಹೊರಟಿದ್ದ ವಿಚಾರ ವೈರಲ್ ಆಗುತ್ತಿದೆ.
ಶ್ವೇತಾ ತಿವಾರಿ ಎರಡು ಬಾರಿ ವಿವಾಹವಾದರು. ಎರಡೂ ಮದುವೆಗಳು ಬಹುಕಾಲ ಉಳಿಯಲಿಲ್ಲ, ಎರಡು ಬಾರಿ ವಿಚ್ಛೇದನದ ಮೂಲಕ ಅಂತ್ಯ ಕಂಡವು.. 44ನೇ ವಯಸ್ಸಿನಲ್ಲೂ ತಮ್ಮ ಫಿಟ್ನೆಸ್ ಮತ್ತು ಸೌಂದರ್ಯದಿಂದ ಶ್ವೇತಾ ಸಾಕಷ್ಟು ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ..
ಶ್ವೇತಾ ತಿವಾರಿ ತಮ್ಮ ವೃತ್ತಿಜೀವನವನ್ನು ಭೋಜ್‌ಪುರಿ ಸಿನಿಮಾದಿಂದ ಪ್ರಾರಂಭಿಸಿದರು. ಆದಾಗ್ಯೂ, ಅವರು ಟಿವಿ ಕಾರ್ಯಕ್ರಮದಿಂದ ನಿಜವಾದ ಮನ್ನಣೆ ಪಡೆದರು. 'ಕಸೌತಿ ಜಿಂದಗಿ ಕಿ' ಟಿವಿ ಸರಣಿಯಲ್ಲಿ ಪ್ರೇರಣಾ ಬಸು ಪಾತ್ರದಿಂದಾಗಿ ಅವರು ಮನೆಮಾತಾದರು.
ಈ ಕಾರ್ಯಕ್ರಮದ ಆರಂಭದಲ್ಲಿ, ಅವರಿಗೆ 5,000 ರೂ. ಸಂಭಾವನೆ ನೀಡಲಾಗುತ್ತಿತ್ತು, ಆದರೆ ಕಾರ್ಯಕ್ರಮದ ಯಶಸ್ಸಿನ ನಂತರ, ಅವರ ಶುಲ್ಕ ಪ್ರತಿ ಸಂಚಿಕೆಗೆ 2.25 ಲಕ್ಷ ರೂ.ಗಳಿಗೆ ಏರಿತು.
ಶ್ವೇತಾ 1998 ರಲ್ಲಿ ರಾಜಾ ಚೌಧರಿ ಅವರನ್ನು ವಿವಾಹವಾದರು. ಅದೇನಾಯ್ತೋ ಗೊತಿಲ್ಲ ಶ್ವೇತಾ ರಾಜಾ ವಿರುದ್ಧ ಕೌಟುಂಬಿಕ ಹಿಂಸಾಚಾರದ ಆರೋಪ ಹೊರಿಸಿದ ನಂತರ 2007 ರಲ್ಲಿ ಅವರ ವಿವಾಹ ಮುರಿದುಬಿತ್ತು. ಈ ಜೋಡಿಗೆ ಪಾಲಕ್ ತಿವಾರಿ ಎಂಬ ಮಗಳಿದ್ದಾಳೆ.
ರಾಜಾ ಚೌಧರಿಯಿಂದ ಬೇರ್ಪಟ್ಟ ನಂತರ, ಶ್ವೇತಾ 2013 ರಲ್ಲಿ ಅಭಿನವ್ ಕೊಹ್ಲಿಯನ್ನು ಎರಡನೇ ಬಾರಿಗೆ ವಿವಾಹವಾದರು. ಸ್ವಲ್ಪ ಸಮಯದವರೆಗೆ, ಇಬ್ಬರ ನಡುವಿನ ಸಂಬಂಧ ಚೆನ್ನಾಗಿತ್ತು, ಆದರೆ ಕೆಲವು ವರ್ಷಗಳ ನಂತರ, ಈ ಸಂಬಂಧವೂ ದೂರವಾಯಿತು.
ಅಭಿನವ್ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಮತ್ತು ನನ್ನ ಮಗಳ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಶ್ವೇತಾ ಆರೋಪಿಸಿದ್ದರು. ಅವರು 2019 ರಲ್ಲಿ ವಿಚ್ಛೇದನ ಪಡೆದರು. ಈ ಮದುವೆಯಿಂದ ಅವರಿಗೆ ರೇಯಾನ್ಶ್ ಎಂಬ ಮಗನಿದ್ದಾನೆ.
ಶ್ವೇತಾ ಮಾಡಿದ ಆರೋಪಗಳಿಂದ ಅಭಿನವ್ ಕೊಹ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಅವರು ಮಾನಸಿಕವಾಗಿ ತುಂಬಾ ಒತ್ತಡಕ್ಕೊಳಗಾಗಿದ್ದರು, 22 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರು ಎಂದು ಅಭಿನವ್ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ..