Actress Life : ನಟಿ ಶ್ವೇತಾ ತಿವಾರಿ ತಮ್ಮ ಸಿನಿಮಾ ಸಿರೀಯಲ್‌ಗಿಂತಲೂ ತಮ್ಮ ವಯಕ್ತಿಕ ಜೀವನದ ವಿಚಾರದಲ್ಲಿ ಸದಾ ಸುದ್ದಿಯಲ್ಲಿದ್ದಾರೆ. ಈ ನಟಿ ಎರಡು ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ. ಮೊದಲ ಪತಿ ತೊರೆದ ನಂತರ ಶ್ವೇತಾ ಮತ್ತೊಂದು ಮದುವೆಯಾದರು. ನಟಿಯ ಎರಡನೇ ಮದುವೆಯೂ ಹೆಚ್ಚು ಕಾಲ ಉಳಿಯಲಿಲ್ಲ.
ಶ್ವೇತಾ ತಿವಾರಿಯವರ ಎರಡನೇ ಪತಿಯೂ ಅವರನ್ನು ತೊರೆದರು. ಇಂದು ಶ್ವೇತಾ ಇಬ್ಬರು ಮಕ್ಕಳನ್ನು ಒಂಟಿ ತಾಯಿಯಾಗಿ ಬೆಳೆಸುತ್ತಿದ್ದಾರೆ.
ಶ್ವೇತಾ ತನ್ನ ಮಕ್ಕಳೊಂದಿಗೆ ಇರುವ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ..
ವಿಚ್ಛೇದನದ ನಂತರ, ಶ್ವೇತಾ ತನ್ನ ಇಬ್ಬರೂ ಪತಿಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಇಂದಿಗೂ ಈ ವಿಚಾರಗಳು ವೈರಲ್ ಆಗುತ್ತಿರುತ್ತವೆ.
ನಟಿಯ ಮೊದಲ ಮದುವೆಯ ಬಗ್ಗೆ ಹೇಳುವುದಾದರೆ ಶ್ವೇತಾ ಮೊದಲು ರಾಜಾ ಚೌಧರಿ ಅವರನ್ನು ಮದುವೆಯಾದರು. ಈ ಜೋಡಿಗೆ ಒಬ್ಬಳು ಮಗಳಿದ್ದಾಳೆ. ಮಗಳು ಜನಿಸಿದ ನಂತರ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕೊನೆಗೆ ಡಿವೋರ್ಸ್ ಪಡೆದರು.
ಸಂದರ್ಶನವೊಂದರಲ್ಲಿ ಶ್ವೇತಾ ತಿವಾರಿ ತಮ್ಮ ಮೊದಲ ಪತಿಯ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. "ರಾಜಾ ಚೌಧರಿ ನನಗೆ ಒಮ್ಮೆ ಅಲ್ಲ, ಹಲವು ಬಾರಿ ಮೋಸ ಮಾಡಿದ್ದಾರೆ." ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು ಅಂತ ನಟಿ ದೂರಿದ್ದರು.
ಶ್ವೇತಾ ತಿವಾರಿ ಹೇಳುವಂತೆ.. 'ನಾನು ಮೊದಲು ರಾಜಾನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಾಗ.' ಅವನು ನನ್ನಲ್ಲಿ ಕ್ಷಮೆಯಾಚಿಸಿದ, ಇನ್ನೋಮ್ಮೆ ಈ ರೀತಿ ಮಾಡಲ್ಲ ಎಂದ ಆಗ ನಾನು ಅವನನ್ನ ಕ್ಷಮಿಸಿದ್ದೇನೆ. ಆದರೆ ಅವನು ನನಗೆ ಮೋಸ ಮಾಡುತ್ತಲೇ ಇದ್ದ ಎಂದ ನಟಿ ಹೇಳಿದ್ದಾರೆ.
ಮೊದಲ ವಿಚ್ಛೇದನದ ನಂತರ, ಶ್ವೇತಾ ತಿವಾರಿ ಅಭಿನವ್ ಕೊಹ್ಲಿಯನ್ನು ಎರಡನೇ ಬಾರಿಗೆ ವಿವಾಹವಾದರು. ಆದರೆ ನಟಿಯ ಎರಡನೇ ಮದುವೆಯೂ ಹೆಚ್ಚು ಕಾಲ ಉಳಿಯಲಿಲ್ಲ. ಅಭಿನವ್ ಕೊಹ್ಲಿ ಮತ್ತು ಶ್ವೇತಾ ತಿವಾರಿ ದಂಪತಿಗೆ ಒಬ್ಬ ಮಗನಿದ್ದಾನೆ. ಸದ್ಯ ನಟಿ ಒಂಟಿಯಾಗಿ ಮಕ್ಕಳ ಜೊತೆ ಸಂತೋಷದ ಜೀವನ ಸಾಗಿಸುತ್ತಿದ್ದಾರೆ.