Dharmasthala Case: ಕೇಸ್‌ ಹಿಂಪಡೆಯುವಂತೆ ಅನಾಮಿಕನಿಗೆ ಇನ್ಸ್​​ಪೆಕ್ಟರ್​ನಿಂದ ಬೆದರಿಕೆ!? ಒತ್ತಡ ಹೇರಿದ ಆ ಎಸ್‌ಐ ಯಾರು ಗೊತ್ತಾ?

Published: Aug 02, 2025, 01:26 PM IST|Updated: Aug 02, 2025, 01:26 PM IST

Dharmasthala news update: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಗಳ ತನಿಖೆ ತೀವ್ರಗೊಂಡಿದೆ. ಈಗಾಗಲೇ ಅನಾಮಿಕ ವ್ಯಕ್ತಿ ಗುರುತಿಸಿದ ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆಸಲಾಗಿದೆ. 

1/5

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಗಳ ತನಿಖೆ ತೀವ್ರಗೊಂಡಿದೆ. ಈಗಾಗಲೇ ಅನಾಮಿಕ ವ್ಯಕ್ತಿ ಗುರುತಿಸಿದ ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆಸಲಾಗಿದೆ. ಈಗಾಗಲೇ 8 ಸ್ಥಳಗಳಲ್ಲಿ ಅಗೆದು ಪರಿಶೀಲಿಸಲಾಗಿದ್ದು, 8 ನೇ ಸ್ಥಳದಲ್ಲಿ ಮಾತ್ರ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಇನ್ನು ತನಿಖೆ ನಿರ್ಣಾಯಕ ಹಂತ ತಲುಪಿರುವ ಸಮಯದಲ್ಲಿ, ಅನಾಮಿಕನ ಮೇಲೆ ಒತ್ತಡ ಹೇರಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

 

2/5

ಇನ್ಸ್‌ಪೆಕ್ಟರ್ ಒಬ್ಬರು ಅನಾಮಿಕನ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್‌ಐಟಿ ತನಿಖೆಗೆ ನೇಮಕಗೊಂಡಿದ್ದ ಎಸ್‌ಐ ಮಂಜುನಾಥ್ ಗೌಡ ವಿರುದ್ಧ ಈ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಪ್ರಕರಣವನ್ನು ಹಿಂಪಡೆಯಲು ಎಸ್‌ಐ ಈ ವ್ಯಕ್ತಿಯ ಮೇಲೆ ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ. ಈ  ವಿಚಾರ ಬಹಿರಂಗವಾಗುತ್ತಿದ್ದಂತೆ, ಮಂಜುನಾಥ್ ಗೌಡ ಅವರನ್ನು ಎಸ್‌ಐಟಿ ತಂಡದಿಂದ ಹೊರಗಿಡಲಾಗಿದೆ ಎಂಬ ಮಾತು ಸಹ ಕೇಳಿಬರುತ್ತಿದೆ.  

3/5

ಶಿರಸಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಎಸ್‌ಐ ಮಂಜುನಾಥ್ ಗೌಡ ಅವರನ್ನು ಎಸ್‌ಐಟಿ ತನಿಖೆಗೆ ನೇಮಿಸಲಾಗಿತ್ತು. ಈಗ, ಮಂಜುನಾಥ್ ಗೌಡ ವಿರುದ್ಧ ಒತ್ತಡದ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಅನಾಮಿಕಾ ಪರ ವಕೀಲರು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ದೂರು ನೀಡಿದ್ದರು. ಈ ಎಸ್‌ಐ ಮಂಜುನಾಥ ಗೌಡ ತಂಡದಲ್ಲಿದ್ದರೆ, ಅನಾಮಿಕಾನನ್ನು ಸ್ಥಳ ಮಹಜರಿಗೆ ಕರೆತರುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

 

4/5

"ಆಗಸ್ಟ್ 1 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅನಾಮಿಕಾಗೆ ಬೆದರಿಕೆ ಹಾಕಲಾಗಿತ್ತು. ಬಾಗಿಲು ಮುಚ್ಚಿ ಎಸ್‌ಐಟಿ ಕಚೇರಿಯಲ್ಲಿ ಬೆದರಿಕೆ ಹಾಕಲಾಗಿತ್ತು. ಪ್ರಕರಣವನ್ನು ಹಿಂಪಡೆಯದಿದ್ದರೆ, ನೀನು ಜೈಲಿನಲ್ಲಿ ಸಮಯ ಕಳೆಯಬೇಕಾಗುತ್ತದೆ ಎಂದು ಒತ್ತಡ ಹೇರಲಾಗಿದೆ" ಎಂದು ವಕೀಲರು ಆರೋಪಿಸಿದ್ದಾರೆ.

 

5/5

ಧರ್ಮಸ್ಥಳದ ನೇತ್ರಾವತಿಯ ದಡದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಉತ್ಖನನ ಕಾರ್ಯ ಪ್ರಾರಂಭವಾಗಿ 5 ದಿನಗಳು ಕಳೆದಿವೆ. ಮೊದಲ 2 ದಿನಗಳಲ್ಲಿ ಯಾವುದೇ ಕುರುಹು ಸಿಗದ ಕಾರಣ ಎಸ್‌ಐಟಿ ತಂಡ ಬರಿಗೈಯಲ್ಲಿ ಹಿಂತಿರುಗಿತ್ತು. ಆದರೆ, ಮೂರನೇ ದಿನ, 6ನೇ ನಂಬರ್ ಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ ಎಂದು ವರದಿಯಾಗಿದೆ.