ಅತೀ ಹೆಚ್ಚು ಸ್ಮಾರ್ಟ್‌ಫೋನ್ ಬಳಸುವ ಯುವತಿಯರೇ ಎಚ್ಚರ..! ಈ ಗಂಭೀರ ಸಮಸ್ಯೆ ನಿಮ್ಮನ್ನ ಕಾಡಬಹುದು.. ಇವಾಗ್ಲೇ ಎಚ್ಚೆತ್ತುಕೊಳ್ಳಿ

Side Effects Of Smart Phone : ಅತಿಯಾಗಿ ಸ್ಮಾರ್ಟ್‌ಫೋನ್ ಬಳಕೆ ಮಾಡುವ ಅನೇಕ ಜನರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ವಿಚಾರ ಎಲ್ಲರಿಗೂ ತಿಳಿದಿದ್ದರೂ ಬಳಕೆಯನ್ನು ನಿಲ್ಲಿಸುತ್ತಿಲ್ಲ. ಇತ್ತೀಚಿನ ಅಧ್ಯಯನವೊಂದು ಈ ವಿಷಯದ ಬಗ್ಗೆ ಮತ್ತೊಂದು ಹೊಸ ಸಂಗತಿಯನ್ನು ಬಹಿರಂಗಪಡಿಸಿದೆ.

1 /6

ಗ್ಲೋಬಲ್ ಮೈಂಡ್ ಪ್ರಾಜೆಕ್ಟ್ ನಡೆಸಿದ ಅಧ್ಯಯನವು ಮಕ್ಕಳು ಮತ್ತು ಹದಿಹರೆಯದವರು ಫೋನ್‌ನನ್ನು ಅತಿಯಾಗಿ ಬಳಸುವುದರಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಬಹಿರಂಗಪಡಿಸಿದೆ. ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.  

2 /6

ಸಮೀಕ್ಷೆಯ ಭಾಗವಾಗಿ, 13 ರಿಂದ 17 ವರ್ಷದೊಳಗಿನ 10,000 ಸ್ಮಾರ್ಟ್‌ಫೋನ್ ಬಳಕೆದಾರರನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಈ ಪೈಕಿ ಅತೀ ಹೆಚ್ಚು ಮತ್ತು ಕಡಿಮೆ ಬಳಸುವ ಜನರನ್ನು ವರ್ಗಗಳಾಗಿ ವಿಂಗಡಿಸಲಾಯಿತು. ಈ ಜನರಲ್ಲಿ ಒತ್ತಡ, ಆತಂಕ ಮತ್ತು ಮಾನಸಿಕ ಸ್ಥಿತಿಯಲ್ಲಿನ ಬದಲಾವಣೆಗಳು ಹೇಗೆ ಸಂಭವಿಸುತ್ತವೆ ಎಂಬುದರ ಕುರಿತು ವಿಶ್ಲೇಷಿಸಲಾಯಿತು.  

3 /6

ತಜ್ಞರು ಕಂಡುಕೊಂಡ ಪ್ರಕಾರ, ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯು ಹುಡುಗರಿಗಿಂತ ಹುಡುಗಿಯರಲ್ಲಿ ಆತಂಕ ಮತ್ತು ಒತ್ತಡದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಟ್ಟಾರೆಯಾಗಿ, ಶೇ. 65 ರಷ್ಟು ಹುಡುಗಿಯರು ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ಆತಂಕಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿ ಕಂಡು ಕೊಂಡಿತು.  

4 /6

ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ವ್ಯಸನವಾದಾಗ, ಮಕ್ಕಳು ಕೆಲವು ವಿಶಿಷ್ಟ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಸಂಶೋಧಕರು ಹೇಳುತ್ತಾರೆ. ಸಿಜಿಎಸ್ ನಡವಳಿಕೆಗಳಾಗಿ ಕಿರಿಕಿರಿ ಮತ್ತು ಕೋಪವು ಬೆಳೆಯುತ್ತದೆ. ಫೋನ್ ನೀಡದಿದ್ದರೆ ಅಥವಾ ಅದು ಸಿಗದಿದ್ದರೆ ಪೋಷಕರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕುವಂತಹ ನಡವಳಿಕೆಯನ್ನು ಸಹ ಕಾಣಬಹುದು.  

5 /6

ವಾಸ್ತವದಿಂದ ಸ್ಮಾರ್ಟ್‌ಫೋನ್‌ ಅತಿಯಾಗಿ ಬಳಕೆ ಮಾಡುವವರು ಭ್ರಮೆಗಳಲ್ಲಿ ಮುಳುಗುತ್ತಾರೆ.. ರೀಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವಿವಿಧ ರೀತಿಯ ವಿಷಯಗಳು ಇದಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಹೇಳುತ್ತಾರೆ.   

6 /6

ಆದ್ದರಿಂದ ಕ್ರೀಡೆ, ಓದು, ಕೆಲವು ಉತ್ತಮ ಹವ್ಯಾಸ ಕಡೆ ಗಮನ ಹರಿಸುವಂತೆ ಮಕ್ಕಳನ್ನು ನೋಡಿಕೊಳ್ಳಬೇಕು.. ಯುವತಿಯರೂ ಸಹ ಸ್ಮಾರ್ಟ್‌ಫೋನ್ ಅತಿಯಾದ ಬಳಕೆಯನ್ನು ತಡೆಯಲು ವ್ಯಾಯಾಮ, ಧ್ಯಾನ, ಯೋಗ, ಓದು ಹೀಗೆ ಹಲವಾರು ಹವ್ಯಾಸ ಅಳವಡಿಸಿಕೊಂಡರೆ ಉತ್ತಮ.