ಬೆಂಗಳೂರಿನಲ್ಲಿವೆ ಮೋಸ್ಟ್‌ ಹಾಂಟೆಡ್‌ ಪ್ಲೇಸ್‌ಗಳು; ದೆವ್ವ-ಭೂತಗಳಿರೋ ಈ ಮನೆಗಳಿಗೆ ನೀವೂ ಹೋಗ್ತೀರಾ?

Most Haunted places in Benaluru: ಪ್ರತಿದಿನವೂ ಬೆಂಗಳೂರಿನ ಯಾವುದೋ ಮೂಲೆಯಲ್ಲಿ ಏನಾದರೂ ಒಂದು ಘಟನೆ ನಡೆಯುತ್ತಲೇ ಇರುತ್ತದೆ. ಸಿಲಿಕಾನ್‌ ಸಿಟಿಯ ಕೆಲವು ತಾಣಗಳು ಅಲೌಕಿಕ ಶಕ್ತಿಗಳಿಂದ ತುಂಬಿವೆಯಂತೆ. ಇವುಗಳನ್ನ ಬೆಂಗಳೂರಿನ ಅತ್ಯಂತ ಭಯಾನಕವಾದ ಸ್ಥಳಗಳೆಂದು ಕರೆಯಲಾಗುತ್ತದೆ. ​

Top Most Haunted places in Benaluru: ರಾಜ್ಯ ರಾಜಧಾನಿ ಬೆಂಗಳೂರಿಗೆ ಸಿಲಿಕಾನ್‌ ಸಿಟಿ, ಉದ್ಯಾನ ನಗರಿ, ದೇಶದ ಸುಂದರ ನಗರವೆಂದು ಕರೆಯಲಾಗುತ್ತದೆ. ಬೆಂಗಳೂರಿನಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಪ್ರತಿದಿನ ಲಕ್ಷಾಂತರ ಜನರು ಬೆಂಗಳೂರಿಗೆ ಭೇಟಿ ನೀಡುತ್ತಾರೆ. ಇಲ್ಲಿನ ವಾತಾವರಣ, ಸಂಸ್ಕೃತಿ, ಭಾಷೆ ಪ್ರತಿಯೊಬ್ಬರನ್ನೂ ಆಕರ್ಷಿಸುತ್ತದೆ. ಹೀಗಾಗಿಯೇ ಇಂದು ಬೆಂಗಳೂರಿನಲ್ಲಿ ಕನ್ನಡಿಗರಿಗಿಂತಲೂ ಅನ್ಯಭಾಷಿಕರೇ ತುಂಬಿಹೋಗಿದ್ದಾರೆ. ದೊಡ್ಡ ದೊಡ್ಡ ಶಾಪಿಂಗ್‌ ಮಾಲ್‌, ಪಬ್‌ಗಳು-ಕ್ಲಬ್‌ಗಳು, ಉದ್ಯಾನಗಳು, ಭವ್ಯ ದೇವಾಲಗಳಿವೆ. ಪ್ರತಿದಿನವೂ ಬೆಂಗಳೂರಿನ ಯಾವುದೋ ಮೂಲೆಯಲ್ಲಿ ಏನಾದರೂ ಒಂದು ಘಟನೆ ನಡೆಯುತ್ತಲೇ ಇರುತ್ತದೆ. ಸಿಲಿಕಾನ್‌ ಸಿಟಿಯ ಕೆಲವು ತಾಣಗಳು ಅಲೌಕಿಕ ಶಕ್ತಿಗಳಿಂದ ತುಂಬಿವೆಯಂತೆ. ಇವುಗಳನ್ನ ಬೆಂಗಳೂರಿನ ಅತ್ಯಂತ ಭಯಾನಕವಾದ ಸ್ಥಳಗಳೆಂದು ಕರೆಯಲಾಗುತ್ತದೆ. ಇವು ಮೋಸ್ಟ್‌ ಹಾಂಟೆಡ್‌ ಪ್ಲೇಸ್‌ಗಳೆಂದು ಖ್ಯಾತವಾಗಿದ್ದು, ದೆವ್ವ-ಭೂತಗಳಿರೋ ಈ ಮನೆಗಳಿಗೆ ಹೋಗಲು ನಿಮಗೆ ಗಟ್ಟಿ ಗುಂಡಿಗೆ ಇರಬೇಕು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಬೆಂಗಳೂರಿನಲ್ಲಿರುವ ಪ್ರಸಿದ್ಧ ವಿಕ್ಟೋರಿಯಾ ಆಸ್ಪತ್ರೆಯು ಅತ್ಯಂತ ಕೌತುಕದ ಸ್ಥಳಗಳಲ್ಲಿ ಒಂದಾಗಿದೆ. ಇದು ಸಿಟಿ ಮಾರ್ಕೆಟ್‌ನ ಬಳಿ ಇರುವ ಅತ್ಯಂತ ಹಳೆಯ ಆಸ್ಪತ್ರೆಯಾಗಿದೆ. ಅನಾದಿ ಕಾಲದಿಂದಲೂ ಇಲ್ಲಿ ದೆವ್ವ, ಭೂತಗಳಿವೆ ಅಂತಾ ನಂಬಲಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಚಿತ್ರ-ವಿಚಿತ್ರ ಘಟನೆಗಳಿಗೆ ಈ ಆಸ್ಪತ್ರೆ ಸಾಕ್ಷಿಯಾಗಿದೆ. ಅನೇಕರು ಇಲ್ಲಿ ದೆವ್ವದ ರೂಪವನ್ನು ಕಂಡಿದ್ದಾರಂತೆ. ಆಸ್ಪತ್ರೆಯ ಆವರಣದಲ್ಲಿರುವ ವೃಕ್ಷಗಳ ಮೇಲೆ ನಿಗೂಢ ಆಕೃತಿಗಳನ್ನು ಅನೇಕರು ಗಮನಿಸಿದ್ದಾರಂತೆ. ಹೀಗಾಗಿಯೇ ವಿಕ್ಟೋರಿಯಾ ಆಸ್ಪತ್ರೆಗೆ ರಾತ್ರಿಯ ವೇಳೆ ಪ್ರವೇಶಿಸಲು ಅನೇಕರು ಹೆದರುತ್ತಾರಂತೆ.  

2 /5

ಬೆಂಗಳೂರಿನ ಪ್ರಸಿದ್ಧ ಎಂ.ಜಿ.ರಸ್ತೆ ಅತ್ಯಂತ ರಹಸ್ಯಮಯ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಯು ಸಹ ದೆವ್ವಗಳಿವೆ ಎಂದು ಹೇಳಲಾಗುತ್ತದೆ. ಹಿಂದೆ ಕಾಲ್ ಸೆಂಟರ್ ಕಂಪನಿಯೊಂದರಲ್ಲಿ ರಾತ್ರಿಯ ವೇಳೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ರಸ್ತೆ ದಾಟುವಾಗ ಪಾನಮತ್ತ ಚಾಲಕನೊಬ್ಬ ವೇಗವಾಗಿ ಬಂದು ಆಕೆಗೆ ಡಿಕ್ಕಿ ಹೊಡೆಸಿದ್ದ. ಅಪಘಾತ ಮಾಡಿದ ಚಾಲಕ ಸ್ಥಳದಿಂದ ಎಸ್ಕೇಪ್‌ ಆಗಿದ್ದ. ಆದರೆ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದ ಆಕೆಯನ್ನ ಯಾರೂ ಸಹ ಆಸ್ಪತ್ರೆಗೆ ಸೇರಿಸಿರಲಿಲ್ಲ. ಹೀಗಾಗಿ ಆಕೆ ಅಲ್ಲಿಯೇ ಸಾವನ್ನಪ್ಪಿದ್ದಳು. ಪ್ರತಿವರ್ಷವೂ ಅದೇ ರಾತ್ರಿ ಆಕೆಯ ನರಳಾಟ, ಗೋಳಾಟ ಆ ರಸ್ತೆಯ ಆಸುಪಾಸಿನಲ್ಲಿ ಕೇಳಿಸುತ್ತದಂತೆ. ರಾತ್ರಿಯಲ್ಲಿ ವಿಚಿತ್ರ ಆಕೃತಿಯನ್ನ ನೋಡಿದ ಅನೇಕರಿಗೆ ಎದೆ ಝಲ್‌ ಅಂದಿದೆಯಂತೆ.

3 /5

ಬೆಂಗಳೂರಿನ ಮತ್ತೊಂದು ಪ್ರೇತಗಳಿರುವ ಸ್ಥಳಗಳಲ್ಲಿ ಈ ʼನಾಳೆ ಬಾʼ ಸಹ ಒಂದು. ಈ ಭಯಾನಕ ಸ್ಥಳದ ಬಗ್ಗೆ ಅನೇಕ ರಹಸ್ಯಗಳಿವೆಯಂತೆ. ಅದೇನೆಂದರೆ ಪ್ರೇತವು ಪ್ರತಿದಿನ ರಾತ್ರಿ ಬಾಗಿಲು ಬಡಿದಾಗ ʼನಾಳೆ ಬಾʼ ಎಂದು ಹೇಳುತ್ತಿದ್ದರಂತೆ. ಇದರಿಂದಲೇ ಹಿಂದೆ ʼನಾಳೆ ಬಾʼ ಅನ್ನೋದು ಟ್ರೆಂಡ್‌ ಆಗಿತ್ತು. ಇಂದಿಗೂ ಸಹ ಅನೇಕ ಮನೆಗಳ ಮೇಲೆ ʼನಾಳೆ ಬಾʼ ಅಂತಾ ಬರೆಸಿರುತ್ತಾರೆ. ಇದನ್ನು ಹೊರತುಪಡಿಸಿ ಈ ಸ್ಥಳದಲ್ಲಿ ಅನೇಕ ವಿಲಕ್ಷಣ ಆಕೃತಿಗಳನ್ನ ಅನೇಕರು ನೋಡಿ ಹೆದರಿದ್ದಾರಂತೆ.

4 /5

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 2008ರಲ್ಲಿ ನಿರ್ಮಿಸಲಾಯಿತು. ಇದು ಸಹ ಅನೇಕ ರಹಸ್ಯಮಯ ಸಂಗತಿಗಳನ್ನ ತನ್ನ ಒಡಲಿನಲ್ಲಿ ಹುದುಗಿಸಿಟ್ಟುಕೊಂಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗಿದ್ದವು. ವಿಮಾನ ನಿಲ್ದಾಣದ ಕೆಲವು ಪ್ರದೇಶಗಳಲ್ಲಿ ಬಿಳಿ ಸೀರೆಯುಟ್ಟಿರುವ ಮಹಿಳೆ ಅನೇಕರ ಕಣ್ಣಿಗೆ ಕಾಣಿಸಿಕೊಂಡಿದ್ದಳಂತೆ. ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವುದು ಮತ್ತು ಮಾಯವಾಗುವುದು ಮಾಡುತ್ತಾಳಂತೆ. ಹೀಗಾಗಿಯೇ ಇಲ್ಲಿನ ಕೆಲವು ಪ್ರದೇಶಗಳಲ್ಲಿ ರಾತ್ರಿ ಪ್ರವೇಶವನ್ನ ನಿಷೇಧಿಸಲಾಗಿದೆ. 

5 /5

ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ - ೪ ಕೂಡ ಹಲವಾರು ದೆವ್ವದ ಕಥೆಗಳನ್ನು ಹೊಂದಿದೆ. ಬೆಳಗ್ಗೆ ಪ್ರಶಾಂತವಾಗಿರುವ ಈ ಹೆದ್ದಾರಿಯಲ್ಲಿ ಸಂಜೆಯಾಗುತ್ತಿದ್ದಂತೆ ಭಯಾನಕತೆ ಆವರಿಸುತ್ತದಂತೆ. ರಾತ್ರಿಯ ಸಮಯದಲ್ಲಿ ಈ ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ವಿಚಿತ್ರ ಘಟನೆಗಳ ಅನುಭವವಾಗಿದೆಯಂತೆ. ರಾತ್ರಿಯ ವೇಳೆ ವಯಸ್ಸಾದ ಮುದುಕಿಯೊಬ್ಬಳು ಇಲ್ಲಿ ಪ್ರಯಾಣಿಸುವ ಚಾಲಕರಿಗೆ ಸಹಾಯ ಕೇಳುತ್ತಾಳಂತೆ. ಆಕೆಗೆ ಡ್ರಾಪ್‌ ನೀಡುವ ಚಾಲಕರಿಗೆ ಮುದುಕಿ ಕಾಡಿಸುತ್ತಾಳಂತೆ. ವಾಹದಲ್ಲಿ ಬಂದು ಕುಳಿತುಕೊಳ್ಳುವ ಮುದುಕಿ ಇದ್ದಕ್ಕಿದ್ದಂತೆಯೇ ಮಾಯವಾಗುವುದು, ವಾಹನದ ಮುಂದೆ ಪ್ರತ್ಯಕ್ಷವಾಗುವುದು ಮತ್ತೆ ಅಲ್ಲಿಂದ ನಗು-ನಗುತ್ತಾ ಮಾಯವಾಗುವುದು ಮಾಡುತ್ತಾಳಂತೆ. ಹೀಗಾಗಿ ಈ ಹೆದ್ದಾರಿಯಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಹೇಳಲಾಗುತ್ತದೆ.