ಶುಗರ್ ಇದ್ದಾಗ ಪಥ್ಯ ಮಾಡಬೇಕು ಎನ್ನುವುದು ಸಾಮಾನ್ಯವಾಗಿ ಕೇಳಿ ಬರುವ ಮಾತು. ಆದರೆ ಪಥ್ಯ ಇಲ್ಲದೆ ಕೆಲವು ಪದಾರ್ಥಗಳನ್ನು ನಿತ್ಯ ಸೇವಿಸುವ ಮೂಲಕವೂ ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿ ಇಟ್ಟುಕೊಳ್ಳಬಹುದು.
ಬೆಂಗಳೂರು : ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೆ ಅದು ಹೃದಯ, ಕಿಡ್ನಿ ಮುಂತಾದ ಅಂಗಗಗಳ ಮೇಲೂ ಪರಿಣಾಮ ಬೀರುತ್ತದೆ. ಬಹಳ ಮುಖ್ಯವಾಗಿ ಕಿಡ್ನಿ ಕಾರ್ಯ ವೈಖರಿ ಮೇಲೆ ಪರಿಣಾಮವಾಗುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶುಗರ್ ಇದ್ದಾಗ ಪಥ್ಯ ಮಾಡಬೇಕು ಎನ್ನುವುದು ಸಾಮಾನ್ಯವಾಗಿ ಕೇಳಿ ಬರುವ ಮಾತು. ಆದರೆ ಪಥ್ಯ ಇಲ್ಲದೆ ಕೆಲವು ಪದಾರ್ಥಗಳನ್ನು ನಿತ್ಯ ಸೇವಿಸುವ ಮೂಲಕವೂ ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿ ಇಟ್ಟುಕೊಳ್ಳಬಹುದು.
ಪ್ರತಿದಿನ ರಾತ್ರಿ ಮಲಗುವ ಮುನ್ನ ಸೋಂಫು, ಜೀರಿಗೆ ಮತ್ತು ಓಮ ಕಾಳನ್ನು ಬಾಯಿಗೆ ಹಾಕಿ ಚೆನ್ನಾಗಿ ಜಗಿದು ರಸ ಹೀರಿದರೆ ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಇದೇ ಸರಿಯಾದ ಮದ್ದು.
ಸೋಂಫಿನಲ್ಲಿರುವ ಫೈಟೊಕೆಮಿಕಲ್‌ಗಳು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಓಮ ಕಾಳು ಹೈಪೊಗ್ಲಿಸಿಮಿಕ್ ಆಗಿದೆ.ಇದು ಮಧುಮೇಹ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಊಟದ ನಂತರ ನಿಯಮಿತವಾಗಿ ಓಮಕಾಳನ್ನು ಬಾಯಿಗೆ ಹಾಕಿ ಜಗಿದರೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.
ಮಧುಮೇಹ ರೋಗಿಗಳು ಸೋಂಫು ಮತ್ತು ಓಮಕಾಳಿನ ಟೀ ತಯಾರಿಸಿ ಕೂಡಾ ಕುಡಿಯಬಹುದು. ಬಾಣಲೆಯಲ್ಲಿ 1 ಕಪ್ ನೀರು ಹಾಕಿ ಬಿಸಿ ಮಾಡಬೇಕು.ನಂತರ ಅದಕ್ಕೆ ಸ್ವಲ್ಪ ಸೋಂಫು, ಒಮಕಾಳು, ಮತ್ತು ಶುಂಠಿ ಪುಡಿ ಸೇರಿಸಿ ಮಂದ ಉರಿಯಲ್ಲಿ ಕುದಿಸಿ ಕುಡಿಯಬೇಕು.
ಒತ್ತಡವನ್ನು ಕಡಿಮೆ ಮಾಡುವ ಅಂಶಗಳು ಸೋಂಫು ಮತ್ತು ಓಮಕಾಳಿನಲ್ಲಿ ಕಂಡುಬರುತ್ತವೆ.ಇದು ರಾತ್ರಿಯ ನಿದ್ರಾಹೀನತೆಯ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ZEE KANNADA NEWS ಅನುಮೋದಿಸುವುದಿಲ್ಲ.