ಲೂಸ್ ಆಗಿರುವ ಕುಕ್ಕರ್ ರಬ್ಬರ್ ಅನ್ನು ಸುಲಭವಾಗಿ ಮತ್ತೆ ಟೈಟ್ ಮಾಡಬಹುದು. ಇದಕ್ಕೆ ಒಂದು ಸುಲಭ ಟ್ರಿಕ್ ಅನುಸರಿಸಬೇಕು.
1/7ಪ್ರತಿಯೊಂದು ಮನೆಯಲ್ಲಿಯೂ ಕುಕ್ಕರ್ ಬಳಕೆ ಇದ್ದೇ ಇರುತ್ತದೆ. ಕುಕ್ಕರ್ ಇಲ್ಲ ಎಂದಾದರೆ ಅಡುಗೆ ಮನೆಯ ಕೆಲಸ ಸುಲಭವಾಗಿ ಮುಗಿಯುವುದಿಲ್ಲ.
2/7ಕೆಲವೊಮ್ಮೆ ಈ ಕುಕ್ಕರ್ ಗೆ ಬಳಸುವ ರಬ್ಬರ್ ಅಥವಾ ಗಾಸ್ಕೆಟ್ ಲೂಸ್ ಆಗುವುದರಿಂದ ಕುಕ್ಕರ್ ಒಳಗಿನಿಂದ ನೀರೆಲ್ಲಾ ಹೊರಗೆ ಚೆಲ್ಲುತ್ತದೆ. ಕುಕ್ಕರ್ ನಲ್ಲಿ ಪ್ರೆಶರ್ ನಿರ್ಮಾಣವಾಗದೆ ವಿಸಿಲ್ ಆಗುವುದಿಲ್ಲ.
3/7ಆದರೆ ಈ ರೀತಿ ಲೂಸ್ ಆಗಿರುವ ಕುಕ್ಕರ್ ರಬ್ಬರ್ ಅನ್ನು ಸುಲಭವಾಗಿ ಮತ್ತೆ ಟೈಟ್ ಮಾಡಬಹುದು. ಇದಕ್ಕೆ ಒಂದು ಸುಲಭ ಟ್ರಿಕ್ ಅನುಸರಿಸಬೇಕು.
4/7ಸಡಿಲವಾದ ಕುಕ್ಕರ್ ರಬ್ಬರ್ ಅನ್ನು 2 ರಿಂದ 3 ನಿಮಿಷಗಳವರೆಗೆ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಇಟ್ಟರೆ ರಬ್ಬರ್ ಮತ್ತೆ ತನ್ನ ಮೊದಲಿನ ಗಾತ್ರಕ್ಕೆ ಬರುತ್ತದೆ.
5/7ಮತ್ತೊಂದು ವಿಧಾನದ ಪ್ರಕಾರ ರಬ್ಬರ್ ಮೇಲೆ ಸ್ವಲ್ಪ ಒಣ ಹಿಟ್ಟನ್ನು ಸಿಂಪಡಿಸಿ. ಹೀಗೆ ಮಾಡಿದ ಮೇಲೆ ರಬ್ಬರ್ ಮತ್ತೆ ಕುಕ್ಕರ್ ಮುಚ್ಚಳಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ವಿಸಿಲ್ ಹೊಡೆಯುತ್ತದೆ.
6/7ಕುಕ್ಕರ್ ಗ್ಯಾಸ್ಕೆಟ್ ಅನ್ನು 10 ನಿಮಿಷಗಳವರೆಗೆ ಫ್ರಿಜ್ ಒಳಗೆ ಇಡುವುದರಿಂದಲೂ ಲೂಸ್ ಆಗಿರುವ ರಬ್ಬರ್ ಮತ್ತೆ ತನ್ನ ಗಾತ್ರಕ್ಕೆ ಮರಳುತ್ತದೆ.
7/7ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ .