ದೇಹದ ʼಆʼ ಭಾಗ ಕಾಣುವಂತೆ ಬಟ್ಟೆ ಹಾಕಬೇಕು: ಖ್ಯಾತ ರಿಯಾಲಿಟಿ ಶೋ ಸ್ಪರ್ಧಿಯ ಗಂಭೀರ ಆರೋಪ

Pravasti Aradhya: ನನ್ನ ದೇಹದ ಆಕಾರದ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ ಎಂದು ಗಾಯಕಿ ಪ್ರವಸ್ತಿ ಆರಾಧ್ಯ ಗಂಭೀರ ಆರೋಪ ಮಾಡಿದ್ದಾರೆ. ಈ ರಿಯಾಲಿಟಿ ಶೋ ಪ್ರೊಡಕ್ಷನ್‌ನವರು ಸೊಂಟದವರೆಗೆ ಸೀರೆಯುಟ್ಟು, ಹೊಕ್ಕಳ ಕಾಣಿಸುವಂತೆ ಎಕ್ಸ್‌ಪೋಸ್‌ ಮಾಡುವಂತೆ ಒತ್ತಾಯಿಸುತ್ತಾರೆ ಅಂತಾ ಆರೋಪಿಸಿದ್ದಾರೆ.

Pravasti Aradhya controversy: ಕಿರುತೆರೆಯ ರಿಯಾಲಿಟಿ ಶೋಗಳಿಗೆ ದೊಡ್ಡ ವೀಕ್ಷಕ ಬಳಗವೇ ಇದೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಹಲವು ರಿಯಾಲಿಟಿ ಶೋಗಳು ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿವೆ. ಆದರೆ ರಿಯಾಲಿಟಿ ಶೋಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಹಾಗೂ ಅಲ್ಲಿ ಏನೆಲ್ಲಾ ನಡೆಯುತ್ತವೆ ಅನ್ನೋ ವಿಚಾರಗಳು ಅಷ್ಟಾಗಿ ಪ್ರೇಕ್ಷಕರಿಗೆ ಗೊತ್ತಾಗಲ್ಲ. ಏಕೆಂದರೆ ವೇದಿಕೆ ಮುಂದೆ ನಡೆಯುವುದು ಮಾತ್ರವೇ ಎಲ್ಲರಿಗೂ ತಿಳಿಯುತ್ತದೆ. ಇದೀಗ ಖ್ಯಾತ ರಿಯಾಲಿಟಿ ಶೋ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಈ ರಿಯಾಲಿಟಿ ಶೋ ಸ್ಪರ್ಧಿಯೇ ಈ ವಿಚಾರಗಳನ್ನು ರಿವೀಲ್‌ ಮಾಡಿದ್ದು, ಅವರ ಹೇಳಿಕೆಯೊಂದು ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /5

ತೆಲುಗು ಜನಪ್ರಿಯ ರಿಯಾಲಿಟಿ ಶೋ ಪಾಡುತಾ ತೀಯಗಾ (Padutha Theeyaga) ಹಾಗೂ ಅದರ ತೀರ್ಪುಗಾರರ ಮೇಲೆ ಸ್ಪರ್ಧಿಯೊಬ್ಬರು ಶಾಕಿಂಗ್‌ ಆರೋಪ ಮಾಡಿದ್ದಾರೆ. ಈ ಸಂಗೀತ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ಖ್ಯಾತ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ, ಹಿನ್ನೆಲೆ ಗಾಯಕಿ ಸುನೀತಾ & ಗೀತ ರಚನೆಕಾರ ಚಂದ್ರಬೋಸ್ ವಿರುದ್ಧ ಇದೇ ಶೋನ ಸ್ಪರ್ಧಿಯಾಗಿರುವ ಗಾಯಕಿ ಪ್ರವಸ್ತಿ ಆರಾಧ್ಯ ಗಂಭೀರ ಆರೋಪ ಮಾಡಿದ್ದಾರೆ.

2 /5

ಈ ರಿಯಾಲಿಟಿ ಶೋ ಬಗ್ಗೆ ಗಾಯಕಿ ಪ್ರವಸ್ತಿ ಆರಾಧ್ಯ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ತೀವ್ರ ಅನ್ಯಾಯ, ಪಕ್ಷಪಾತ ಮತ್ತು ಅವಮಾನ ಎದುರಿಸಿರುವುದಾಗಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ತೀರ್ಪುಗಾರರು ಪಕ್ಷಪಾತದ ಮನೋಭಾವ ಪ್ರದರ್ಶಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೀರವಾಣಿ ಸಂಯೋಜಿಸಿದ ಹಾಡು ಹಾಡಿದ ಸ್ಪರ್ಧಿಗಳಿಗೆ ಹೆಚ್ಚಿನ ಅಂಕ ನೀಡಲಾಗಿದೆ. ಈ ವಿಧಾನವು ಇತರ ಸ್ಪರ್ಧಿಗಳ ಪ್ರತಿಭೆಗೆ ಮಾರಕ, ಇದು ಅನ್ಯಾಯ ಎಂದು ಟೀಕಿಸಿದ್ದಾರೆ. 

3 /5

ಕಾರ್ಯಕ್ರಮದ ಸೆಟ್‌ನಲ್ಲೂ ನನಗೆ ಭಾರೀ ಅವಮಾನವಾಗಿದೆ. ನಾನು ಜೀವನೋಪಾಯಕ್ಕಾಗಿ ಮದುವೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಹಾಡುತ್ತೇನೆ. ಇದೇ ವಿಚಾರವಾಗಿ ನನ್ನನ್ನು ಕೀಳಾಗಿ ಕಂಡಿದ್ದಾರೆ. ತೀರ್ಪುಗಾರರು ನನ್ನ ವೃತ್ತಿಯನ್ನ ಅಪಹಾಸ್ಯ ಮಾಡಿದ್ದಾರೆ, ನನ್ನನ್ನು ಕೀಳಾಗಿ ಕಾಣುವಂತೆ ಮಾಡಿದ್ದಾರೆಂದು ಪ್ರವಸ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಸೆಟ್‌ನಲ್ಲಿ ನನಗೆ ಬಾಡಿ ಶೇಮಿಂಗ್‌ ಮಾಡಿದ್ದಾರೆ. ನನ್ನ ದೇಹದ ಆಕಾರದ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ ಅಂತಾ ಆರೋಪಿಸಿದ್ದಾರೆ. ಈ ರಿಯಾಲಿಟಿ ಶೋ ಪ್ರೊಡಕ್ಷನ್‌ನವರು ಸೊಂಟದವರೆಗೆ ಸೀರೆಯುಟ್ಟು, ಹೊಕ್ಕಳ ಕಾಣಿಸುವಂತೆ ಎಕ್ಸ್‌ಪೋಸ್‌ ಮಾಡುವಂತೆ ಒತ್ತಾಯಿಸುತ್ತಾರೆ ಎಂತಲೂ ಈ ಗಾಯಕಿ ಗಂಭೀರ ಆರೋಪ ಮಾಡಿದ್ದಾರೆ.

4 /5

ಈ ಪ್ರೊಡಕ್ಷನ್‌ ಅತ್ಯಂತ ಕೆಟ್ಟದಾಗಿದೆ. ಅವರು ನಮಗೆ ಡ್ರೆಸ್‌ಗಳನ್ನು ಕೊಟ್ಟು ಸೊಂಟದ ಕೆಳಗೆ ಸೀರೆ ಉಡಬೇಕು ಅಂತಾ ಹೇಳುತ್ತಾರೆ. ಇನ್ನು ಕಾಸ್ಟ್ಯೂಮ್‌ ಡಿಸೈನರ್‌ ʼನಿಮ್ಮ ದೇಹಕ್ಕೆ ಇನ್ನೇನು ಕೊಡಬಹುದುʼ ಎಂದು ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದ್ದಾರೆ. ಅವರ ಆ ಮಾತುಗಳಿಂದ ನಾನು ನನ್ನ ಆತ್ಮವಿಶ್ವಾಸವನ್ನೇ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದೆ ಎಂದು ಗಾಯಕಿ ಪ್ರವಸ್ತಿ ಆರಾಧ್ಯ ಅಳಲು ತೋಡಿಕೊಂಡಿದ್ದಾರೆ. 

5 /5

ಪ್ರವಸ್ತಿ ಆರಾಧ್ಯ ಒಬ್ಬ ಭಾರತೀಯ ಗಾಯಕಿಯಾಗಿದ್ದು, ವಿವಿಧ ತೆಲುಗು ಮತ್ತು ತಮಿಳು ಸಂಗೀತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಂಗೀತ ಪ್ರಯಾಣ ಪ್ರಾರಂಭಿಸಿದ ಇವರು ಅನೇಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.