ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ! ದಿಂಬಿಗೆ ತಲೆ ಕೊಟ್ಟ ಕೂಡಲೇ ಆವರಿಸುವುದು ಗಾಢ ನಿದ್ದೆ !ಜನ್ಮದಲ್ಲಿ ಕಾಡದು ನಿದ್ರಾ ಹೀನತೆ
ಕೆಲವರಿಗೆ ರಾತ್ರಿ ಏನು ಮಾಡಿದರೂ ನಿದ್ದೆ ಬರುವುದೇ ಇಲ್ಲ. ಗಂಟೆ ಎಷ್ಟಾಯಿತು ಎಂದು ನೋಡಿಕೊಂಡೇ, ಮಗ್ಗುಲು ಬದಲಿಸುತ್ತಲೇ ಬೆಳಕಾಗಿಸುತ್ತಾರೆ.
ಇನ್ನು ಕೆಲವರು ರಾತ್ರಿ ನಿದ್ದೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಮಾತ್ರೆ ತೆಗೆದುಕೊಳ್ಳುವ ಹವ್ಯಾಸ ಮೈಗೂಡಿಸಿಕೊಂಡಿರುತ್ತಾರೆ.ಆದರೆ ಇದು ಚಟವಾಗಿ ಮಾರ್ಪಟ್ಟು ನಂತರ ಮಾತ್ರೆ ಇಲ್ಲದೆ ನಿದ್ದೆ ಬರುವುದೇ ಇಲ್ಲ ಎನ್ನುವ ಮಟ್ಟಕ್ಕೆ ತಲುಪಬೇಕಾಗುತ್ತದೆ.
ಆದರೆ ನಾವು ನಿತ್ಯ ಬಳಸುವ ಈ ತರಕಾರಿಯ ಒಂದೇ ಒಂದು ಪೀಸ್ ಅನ್ನು ರಾತ್ರಿ ಮಲಗುವ ಮುನ್ನ ತಿಂದರೆ, ದಿಂಬಿಗೆ ತಲೆಕೊಡುತ್ತಿದ್ದ ಹಾಗೆಯೇ ಗಾಢ ನಿದ್ದೆ ನಮ್ಮನ್ನು ಆವರಿಸಿ ಬಿಡುತ್ತದೆ.
ಹೌದು, ರಾತ್ರಿ ಮಲಗುವ ಮುನ್ನ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಸಲ್ಫಾಕ್ಸೈಡ್‌ಗಳು ಕ್ರಿಯಾಶೀಲವಾಗುತ್ತವೆ.ಇದು ನಮ್ಮ ನರ ಕೋಶಗಳಿಗೆ ವಿಶ್ರಾಂತಿ ನೀಡುತ್ತದೆ. ಹೀಗಾಗಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
ಈರುಳ್ಳಿ ತಿಂದರೆ ಮೆದುಳು ನಿರಾಳವಾಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ, ಅತಿಯಾದ ಯೋಚನೆಗಳು ಬಾರದಂತೆ ತಡೆಯುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಮೂಲಕ, ಚೆನ್ನಾಗಿ ನಿದ್ದೆ ಆವರಿಸಲು ಸಹಾಯ ಮಾಡುತ್ತದೆ.
ಆಕ್ಸಿಟಾಕ್ಸಿನ್‌ಗಳಂತಹ ಹಾರ್ಮೋನುಗಳ ಮಟ್ಟವನ್ನು ಈರುಳ್ಳಿ ಸಮತೋಲನಗೊಳಿಸಬಹುದು. ಇದು ಹಾರ್ಮೋನ್ ಅಸಮತೋಲನದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ .
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.