ಯಶ್ ಅಭಿನಯದ ಚಿತ್ರಗಳ ಒಂದು ಸಣ್ಣ ಝಲಕ್!

33ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್!

ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಜನವರಿ  8, 1986 ರಂದು ಜನಿಸಿದ ರಾಕಿಂಗ್ ಸ್ಟಾರ್ ಯಶ್'ಗಿಂದು ಹುಟ್ಟುಹಬ್ಬದ ಸಂಭ್ರಮ. ನವೀನ್ ಕುಮಾರ್ ಗೌಡ ಇವರ ಮೊದಲ ಹೆಸರು. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ದಯವಿಟ್ಟು ಸಹಕರಿಸಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿರುವ 'ರಾಕಿ ಭಾಯ್'

1 /20

2004ರಲ್ಲಿ ಕಿರುತೆರೆಯಲ್ಲಿ ಉದಯಟಿವಿಯಲ್ಲಿ 'ಉತ್ತರಾಯಣ' ಎಂಬ ಧಾರಾವಾಹಿಯಲ್ಲಿ ಬಣ್ಣ ಹಚ್ಚಲು ಪ್ರಾರಂಭಿಸಿದ ರಾಕಿಂಗ್ ಸ್ಟಾರ್, ಅದೇ ವರ್ಷ ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ನಂದ ಗೋಕುಲ' ಧಾರಾವಾಹಿ ಸೇರಿದಂತೆ  5 ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ನಂತರ 2007ರಲ್ಲಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.  2008ರಲ್ಲಿ 'ಮೊಗ್ಗಿನ ಮನಸ್ಸು' ಚಿತ್ರದ ಖ್ಯಾತ ನಟನಾಗಿ ಹೊರಹೊಮ್ಮಿದರು. ಆದರೆ ಇದಕ್ಕೂ ಮೊದಲು ಜಂಬದ ಹುಡುಗಿ ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ನಂತರ ರಾಜಧಾನಿ, ಕಿರಾತಕ, ಲಕ್ಕಿ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜ ಕೇಸರಿ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಮಾಸ್ಟರ್ ಪೀಸ್ ಇನ್ನೂ ಮೊದಲಾದ ಪ್ರಸಿದ್ದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಸ್ಯಾಂಡಲ್'ವುಡ್ ನ ಖ್ಯಾತ ನಟರ ಸಾಲಿನಲ್ಲಿ ನಿಂತಿರುವ ಯಶ್ ಅವರ ಜೊತೆಯಲ್ಲೇ 'ನಂದ ಗೋಕುಲ' ಧಾರವಾಹಿಯಿಂದಲೇ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಮತ್ತೊಬ್ಬ ಕಲಾವಿದೆ ರಾಧಿಕಾ ಪಂಡಿತ್ ಅವರು ಇವರ ಬಾಳ ಸಂಗಾತಿಯಾಗಿದ್ದಾರೆ. ಮತ್ತೊಂದು ವಿಶೇಷವೆಂದರೆ ಈಕೆ ಕೂಡ 'ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಖ್ಯಾತಿ ಪಡೆದ ನಟಿ. 'ಕೆಜಿಎಫ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ್ದಾರೆ. ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಕೆಜಿಎಫ್' ದಾಖಲೆಯ 200 ಕೋಟಿ ರೂ ಗಳಿಸುವತ್ತ ಹೆಜ್ಜೆ ಇಟ್ಟಿದೆ.      

2 /20

2008 ರಲ್ಲಿ ತೆರೆಕಂಡ 'ಮೊಗ್ಗಿನ ಮನಸ್ಸು' ಚಿತ್ರದ ಖ್ಯಾತ ನಟನಾಗಿ ಹೊರಹೊಮ್ಮಿದರು. ಈ ಚಿತ್ರಕ್ಕಾಗಿ 2009ರಲ್ಲಿ  ದಕ್ಷಿಣದ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. 

3 /20

4 /20

Pic: kanndamasti.com

5 /20

6 /20

Pic: Youtube

7 /20

8 /20

Pic: Youtube

9 /20

Pic: Youtube

10 /20

Pic: Youtube

11 /20

Pic: Youtube

12 /20

ನೆನಪಿರಲಿ ಪ್ರೇಮ್ ಅಭಿನಯದ ಈ ಚಿತ್ರ 'ಯಶ್' ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

13 /20

ಈ ಚಿತ್ರದ ಅಭಿನಯಕ್ಕಾಗಿ 2014ರಲ್ಲಿ  ಅತ್ಯುತ್ತಮ ನಟನಾಗಿ ದಕ್ಷಿಣದ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.  Pic: Youtube

14 /20

15 /20

Pic: Youtube

16 /20

ಈ ಚಿತ್ರದ ಅಭಿನಯಕ್ಕಾಗಿ 2015ರಲ್ಲಿ  ಅತ್ಯುತ್ತಮ ನಟನಾಗಿ ದಕ್ಷಿಣದ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. 

17 /20

Pic: Youtube

18 /20

19 /20

2007 ಜಂಬದ ಹುಡುಗಿ. ಇದು ಯಶ್ ಅಭಿನಯದ ಮೊದಲ ಚಿತ್ರ. ಈ ಚಿತ್ರದಲ್ಲಿ ಯಶ್ ಸಹ ನಟರಾಗಿ ಕಾಣಿಸಿಕೊಂಡರು.  Pic: Youtube

20 /20

'ಕೆಜಿಎಫ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ್ದಾರೆ. ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಕೆಜಿಎಫ್' ದಾಖಲೆಯ 200 ಕೋಟಿ ರೂ ಗಳಿಸುವತ್ತ ಹೆಜ್ಜೆ ಇಟ್ಟಿದೆ.