Srirastu subhamastu serial actor: ʻಶ್ರೀ ರಸ್ತು ಶುಭಮಸ್ತುʼ ಧಾರಾವಾಹಿಯ ನಟ ಶ್ರೀ ಮಹದೇವ್ ದ್ಯಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..ನಿನ್ನೆ ಮೈಸೂರಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನೆರವೇರಿದೆ.
1/5ಇದೀಗ ಸ್ಫೂರ್ತಿ ಎಂಬಾಕೆಯ ಜೊತೆಗೆ ಸರಳವಾಗಿ ದೇವಸ್ಥಾನದಲ್ಲಿ ಮಹದೇವ ಸಪ್ತಪದಿ ತುಳಿದಿದ್ದಾರೆ. ಮದುವೆಯಲ್ಲಿ ನಟನ ಸ್ನೇಹಿತರು, ಕುಟುಂಬಸ್ಥರು, ಆಪ್ತರು ಭಾಗಿಯಾಗಿದ್ದರು. ಡಿಸೆಂಬರ್ 6 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
2/5ಜೀ ಕನ್ನಡದಲ್ಲಿ ಪ್ರಸಾರವಾಗಿದ "ಶ್ರೀರಸ್ತು ಶುಭಮಸ್ತು" ಎಂಬ ಧಾರವಾಹಿಯಲ್ಲಿ ನಟಿಸಿದರು ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಕದ್ದರು ಇದೀಗ ಅವರ ಹೃದಯವನ್ನೆ ಈ ಚೆಲುವೆ ಕದ್ದಿದ್ದಾರೆ.
3/5ಅಷ್ಟೇ ಅಲ್ಲದೇ ನಟಿ ಮೇಘನಾ ರಾಜ್‌ನೊಂದಿಗೆ "ಇರುವುದೆಲ್ಲವಾ ಬಿಟ್ಟು" ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದರು.ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಟಿಸುತ್ತಿದರು ಹೆಚ್ಚಾಗಿ ಶ್ರೀ ಮಹದೇವ್ ಅನ್ನೋದಕ್ಕಿಂತ "ಶ್ರೀ" ಎಂದೇ ಹೆಸರು ಗಳಿಸಿ ಜನರಿಗೆ ಹತ್ತಿರವಾಗಿದ್ದರು.
4/5ಹೀರೋ ಶ್ರೀ ಮಹದೇವ್ ಕೋಟಿಗೊಬ್ಬ 3, ಗಜಾನನ ಅಂಡ್ ಗ್ಯಾಂಗ್, ಹೊಂದಿಸಿ ಬರೆಯಿರಿ, ಇರುವುದೆಲ್ಲವ ಬಿಟ್ಟು ಸಿನಿಮಾಗಳಲ್ಲಿ ಮಿಂಚಿದರು ಮಾತ್ರವಲ್ಲದೇ ಕಿರುತೆರೆಯಲ್ಲಿ ಕನ್ಯಾಕುಮಾರಿ, ನೀಲಿ, ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
5/5ʻಶ್ರೀ ರಸ್ತು ಶುಭಮಸ್ತುʼ ಧಾರಾವಾಹಿಯ ನಟ ಶ್ರೀ ಮಹದೇವ್ ದ್ಯಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..ನಿನ್ನೆ ಮೈಸೂರಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನೆರವೇರಿದೆ.