ಕೊನೆಗೂ ಪ್ರಭಾಸ್-ಅನುಷ್ಕಾ ಲವ್‌ ಮ್ಯಾಟರ್‌ಗೆ ಸಿಕ್ತು ಸ್ಪಷ್ಟತೆ..! ಡಾರ್ಲಿಂಗ್-ಸ್ವೀಟಿ ಮದುವೆ..

Anushka Prabhas marriage : ಪ್ರಭಾಸ್ ಅನುಷ್ಕಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಮಾಧ್ಯಮದಲ್ಲಿ ಇನ್ನೂ ಹರಿದಾಡುತ್ತಿದೆ.. ಇದೀಗ ಈ ಕುರಿತು ಸ್ಪಷ್ಟತೆ ಸಿಕ್ಕಿದೆ. ಅಲ್ಲದೆ, ಇಷ್ಟು ದಿನ ಈ ಮ್ಯಾಟರ್‌ ಹಿಂದಿರುವ ನಿಜವೇನು..? ಅಂತ ಕಾಯುತ್ತಿದ್ದ ಅಭಿಮಾನಿಗಳು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ..

1 /6

ಪ್ಯಾನ್‌ ವರ್ಲ್ಡ್‌ ಸ್ಟಾರ್‌ ನಟ, ರೆಬೆಲ್ ಸ್ಟಾರ್ ಪ್ರಭಾಸ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ವೈಯಕ್ತಿಕ ಜೀವನದ ವಿಷಯಕ್ಕೆ ಬಂದಾಗ ಬಹಳಷ್ಟು ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಿರುವ ಡಾರ್ಲಿಂಗ್‌, ನಟಿ ಅನುಷ್ಕಾ ಶೆಟ್ಟಿ ಜೊತೆ ಡೇಟಿಂಗ್‌ ಮಾಡುತ್ತಿದ್ದು ಶೀಘ್ರದಲ್ಲೇ ಮದುವೆ ಆಗ್ತಾರೆ ಅಂತ ಹೇಳಲಾಗುತ್ತಿತ್ತು.  

2 /6

ಹೌದು.. 2015 ರಲ್ಲಿ 'ಬಾಹುಬಲಿ-ದಿ ಬಿಗಿನಿಂಗ್' ಬಿಡುಗಡೆಯಾದ ನಂತರ, ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಏನೋ ನಡೆಯುತ್ತಿದೆ ಎಂಬ ವದಂತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾದವು. 2017 ರಲ್ಲಿ 'ಬಾಹುಬಲಿ: ದಿ ಕನ್ಕ್ಲೂಷನ್' ರಿಲೀಸ್‌ ಆದ ನಂತರ ಆ ಊಹಾಪೋಹಗಳು ಮತ್ತಷ್ಟು ವೇಗವನ್ನು ಪಡೆದುಕೊಂಡವು.

3 /6

ಪ್ರಭಾಸ್ ಪ್ರತಿಕ್ರಿಯೆ: ಪ್ರಭಾಸ್ ಈಗಾಗಲೇ ಈ ವಿಷಯವಾಗಿ ಹಲವಾರು ಬಾರಿ ಸ್ಪಷ್ಟನೆ ನೀಡಿದ್ದಾರೆ. ಕರಣ್ ಜೋಹರ್ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮತ್ತು ಅನುಷ್ಕಾ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 

4 /6

ಅನುಷ್ಕಾ ಪ್ರತಿಕ್ರಿಯೆ: ಡೆಕ್ಕನ್ ಕ್ರಾನಿಕಲ್‌ಗೆ ನೀಡಿದ ಸಂದರ್ಶನದಲ್ಲಿ ಅನುಷ್ಕಾ ಈ ವದಂತಿಗಳ ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್ ಜೊತೆ ಲವ್‌ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಜನರಿಗೆ ಅದು ತಿಳಿದಿರುತ್ತಿತ್ತು.. ಆದರೆ, ಪ್ರಭಾಸ್ ನನ್ನ ಆಪ್ತ ಸ್ನೇಹಿತ, ಅದಕ್ಕಿಂತ ಹೆಚ್ಚಿನದೇನೂ ಇಲ್ಲ ಎಂದು ಅನುಷ್ಕಾ ಹೇಳಿದರು.

5 /6

ರಾಜಮೌಳಿ ಹೇಳಿದ್ದೇನು..?: ಪ್ರಭಾಸ್ ಮತ್ತು ಅನುಷ್ಕಾ ಸಂಬಂಧದ ವದಂತಿಗಳಿಗೆ ಸ್ಟಾರ್ ನಿರ್ದೇಶಕ ರಾಜಮೌಳಿ ತುಂಬಾ ತಮಾಷೆಯಾಗಿ ಉತ್ತರ ನೀಡಿದ್ದರು.. 'ಕಾಫಿ ವಿತ್ ಕರಣ್' ಕಾರ್ಯಕ್ರಮದ ಸಂಚಿಕೆ ಒಂದರಲ್ಲಿ, ಪ್ರಭಾಸ್ ಇಂತಹ ವಿಷಯಗಳಲ್ಲಿ ತುಂಬಾ ಸೋಮಾರಿ, ಅವನು ಮದುವೆಯಾಗದೇ ಇರುವುದು ತುಂಬಾ ಉತ್ತಮ ಅಂತ ಹೇಳಿದರು. ಪ್ರಭಾಸ್ ತಮ್ಮ ವೈಯಕ್ತಿಕ ಜೀವನಕ್ಕಿಂತ ಸಿನಿಮಾ ಮತ್ತು ಕೆಲಸದ ಮೇಲೆ ಹೆಚ್ಚು ಗಮನಹರಿಸುತ್ತಾರೆ ಅಂತ ಪರೋಕ್ಷವಾಗಿ ಲವ್‌ ಮ್ಯಾಟರ್‌ ಕೇವಲ ವದಂತಿ ಅಂತ ಸ್ಪಷ್ಟ ಪಡಿಸಿದರು. 

6 /6

ಈ ವಿಷಯಗಳನ್ನು ಹೊರತುಪಡಿಸಿ, ಪ್ರಭಾಸ್ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳಿವೆ. ಮಾರುತಿ ನಿರ್ದೇಶನದ ಹಾರರ್ ಕಾಮಿಡಿ ಚಿತ್ರ 'ದಿ ರಾಜಾ ಸಾಬ್', ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಸ್ಪಿರಿಟ್, ಹಾಗೆಯೇ ನಾಗ್ ಅಶ್ವಿನ್ ಅವರ ಕಲ್ಕಿ 2898 AD 2 ಮತ್ತು ಸಲಾರ್ 2 ಚಿತ್ರಗಳತ್ತ ಗಮನ ಹರಿಸುತ್ತಿದ್ದಾರೆ. 'ಹನುಮಾನ್' ಖ್ಯಾತಿಯ ಪ್ರಶಾಂತ್ ವರ್ಮಾ ಕೂಡ ಒಂದು ಯೋಜನೆಗೆ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.