ಏನಿದು ಬಚ್ಚನ್‌ ಕುಟುಂಬದ ವಿಚಿತ್ರ ಫ್ಯಾಶನ್‌? ಎರಡು ವಾಚ್‌ ಕಟ್ಕೋತಾರಂತೆ ಅಪ್ಪ-ಮಗ! ಕಾರಣ ಕೇಳಿದ್ರೆ ಶಾಕ್‌ ಆಗ್ತಿರಾ!!

Bachchan family Strange Watch fashion: ಅಭಿಷೇಕ್‌ ಬಚ್ಚನ್ ಅವರಿಗೆ ಈ ಅಭ್ಯಾಸವನ್ನು ತಮ್ಮ ತಾಯಿ ಜಯಾ ಬಚ್ಚನ್ ಅವರು ಕಲಿಸಿದ್ದಾರಂತೆ. ಯುರೋಪಿನ ಬೋರ್ಡಿಂಗ್ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗಿನಿಂದ ಇದು ರೂಢಿಯಲ್ಲಿದೆ ಎಂದಿದ್ದಾರೆ. 

Bachchan family Strange fashion: ನಾವೆಲ್ಲಾ ಕೈಗಳಿಗೆ ಒಂದು ವಾಚ್‌ ಹಾಕಿಕೊಳ್ಳುವುದು ಸಹಜ ವಿಷಯ. ಆದರೆ ಯಾರಾದರೂ ಎರಡು ಕೈಗಳಿಗೆ ವಾಚ್‌ ಕಟ್ಟಿಕೊಳ್ಳುತ್ತಾರೆ ಅಂದರೆ ನಂಬುತ್ತಿರಾ? ಕೇಳಲು ವಿಚಿತ್ರ ಅನಿಸಿದರೂ ಇದು ನಿಜ.. ಇತ್ತೀಚಿಗೆ ಅಭಿಷೇಕ್‌ ಬಚ್ಚನ್‌  ಸಿನಿಮಾ ಪ್ರಚಾರವೊಂದರಲ್ಲಿ ಎರಡು ಕೈಗಳಿಗೂ ವಾಚ್‌ ಹಾಕಿಕೊಂಡು ಗಮನ ಸೆಳೆದಿದ್ದಾರೆ. ಸದ್ಯಕ್ಕೆ ಬಚ್ಚನ್‌ ಫ್ಯಾಮಿಲಿಯ ಈ ಅಪರೂಪದ ವಾಚ್‌ ಧರಿಸುವ ಶೈಲಿ ನೆಟ್ಟಿಗರಲ್ಲಿ ಆಶ್ಚರ್ಯ ಮೂಡಿಸಿದೆ. ಇದಕ್ಕೆ ಕಾರಣವೇನು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಸಿನಿಮಾ ರಂಗದಲ್ಲಿ ಬಚ್ಚನ್‌ ಕುಟುಂಬದ ಬಗ್ಗೆ ಒಂದಲ್ಲಾ ಒಂದು ಸುದ್ದಿಗಳು ಕೇಳಿಬರುತ್ತಲೇ ಇರುತ್ತವೆ. ಅದೇ ರೀತಿ ಈ ಬಾರಿ ಬಚ್ಚನ್‌ ಕುಟುಂಬದ ಕುಡಿ ಅಭಿಷೇಕ್‌ ಬಚ್ಚನ್‌ರವರ ವಿಭಿನ್ನ ವಾಚ್‌ ಧರಿಸಿಕೊಳ್ಳುವ ಶೈಲಿ ಹೆಚ್ಚು ಗಮನ ಸೆಳೆದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗಿದೆ.

2 /6

ಅಭಿಷೇಕ್ ಬಚ್ಚನ್ ಅವರು ಇತ್ತೀಚಿಗೆ ತಮ್ಮ ಮುಂಬರುವ ಸಿನಿಮಾ ʼಬಿ ಹ್ಯಾಪಿʼ ಪ್ರಚಾರದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಎರಡು ಕೈಗಳಿಗೆ ಐಶಾರಾಮಿ ವಾಚ್‌ಗಳನ್ನು ಹಾಕಿಕೊಂಡಿದ್ದರು. ಇದು ರಾತ್ರೋರಾತ್ರಿ ಸಕ್ಕತ್‌ ವೈರಲ್‌ ಆಗಿದೆ.

3 /6

ಅಭಿಷೇಕ್ ಬಚ್ಚನ್‌ ಮಾತ್ರ ಈ ವಿಚಿತ್ರ ಫ್ಯಾಷನ್‌ ಫಾಲೋ ಮಾಡೊದಷ್ಟೇ ಅಲ್ಲ, ಮೆಗಾಸ್ಟಾರ್‌ ಅಮಿತಾಬ್‌ ಬಚ್ಚನ್ ಕೂಡ ಹಿಂದೊಮ್ಮೆ ತಮ್ಮ ʼಬುದ್ಧ ಹೋಗಾ ತೇರಾ ಬಾಪ್!!' ಸಿನಿಮಾದಲ್ಲಿ ಕೆಲವೊಂದು ಸೀನ್‌ಗಳಲ್ಲಿ ಎರೆಡೆರಡು ವಾಚ್‌ಗಳನ್ನು ಧರಿಸುವ ಮೂಲಕ ತಮ್ಮದೇಯಾದ ವಿಶಿಷ್ಟ ಶೈಲಿಯನ್ನು ತೋರಿಸಿದ್ದರು.

4 /6

ಇನ್ನು ತಂದೆ-ಮಗ ಇಬ್ಬರು ಈ ವಿಚಿತ್ರ ಫ್ಯಾಷನ್‌ ಅನುಸರಿಸಲು ಕಾರಣ ಏನಿರಬಹುದು ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಇದಕ್ಕೆ 2011ರಲ್ಲಿ ಇಂಡಿಯಾ ಟಿವಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಸ್ವತಃ ಈ ಬಗ್ಗೆ ಉತ್ತರವನ್ನು ನೀಡಿದ್ದಾರೆ.

5 /6

ಅಭಿಷೇಕ್‌ ಬಚ್ಚನ್ ಅವರಿಗೆ ಈ ಅಭ್ಯಾಸವನ್ನು ತಮ್ಮ ತಾಯಿ ಜಯಾ ಬಚ್ಚನ್ ಅವರು ಕಲಿಸಿದ್ದಾರಂತೆ. ಯುರೋಪಿನ ಬೋರ್ಡಿಂಗ್ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗಿನಿಂದ ಇದು ರೂಢಿಯಲ್ಲಿದೆ ಎಂದಿದ್ದಾರೆ. 

6 /6

ಭಾರತ ಮತ್ತು ಯೂರೋಪಿನ ಸಮಯವನ್ನ ನೋಡುವ ಉದ್ದೇಶದಿಂದ ಅಭಿಷೇಕ್‌ ಈ ರೀತಿ ಪ್ರತ್ಯೇಕ ವಾಚ್‌ಗಳನ್ನ ಬಳಸುತ್ತಿದ್ದು, ಈ ಅಭ್ಯಾಸವನ್ನು ಈಗಲೂ ಅಭಿಷೇಕ್‌ರವರು ಪಾಲಿಸಿಕೊಂಡು ಬರುತ್ತಿದ್ದಾರೆ. ಈ ವಿಚಿತ್ರ ಹವ್ಯಾಸವನ್ನು ಬಚ್ಚನ್‌ ಫ್ಯಾಮಿಲಿಯಲ್ಲಿ ಮಾತ್ರ ಇರಲು ಸಾಧ್ಯವೆಂದು ಸೋಶಿಯಲ್‌ ಮೀಡಿಯಾದಲ್ಲಿ ಅವರ ಫ್ಯಾನ್ಸ್‌ ಕಾಮೆಂಟ್‌ ಮಾಡುತ್ತಿದ್ದಾರೆ.