Chanakya niti : ಆಚಾರ್ಯ ಚಾಣಕ್ಯರು ಜೀವನದಲ್ಲಿ ಯಶಸ್ವಿಯಾಗಲು ಈ ಮೂರು ವಿಷಯಗಳನ್ನು ಮರೆಮಾಡಬೇಕು ಎಂದು ಹೇಳುತ್ತಾರೆ. ಒಂದು ವೇಳೆ ಜೀವನದಲ್ಲಿ ನೀವು ಯಶಸ್ವಿಯಾಗಲು ಬಯಸಿದ್ದರೆ ಈ 3 ಪ್ರಮುಖ ಅಂಶಗಳನ್ನು ಎಂದಿಗೂ ಯಾರ ಜೊತೆ ಹಂಚಿಕೊಳ್ಳಬೇಡಿ.
ತತ್ವಜ್ಞಾನಿ ಎಂದು ಕರೆಯಲ್ಪಡುವ ಆಚಾರ್ಯ ಚಾಣಕ್ಯರು ತಮ್ಮ ಜೀವನದ ಅನುಭವ ಮತ್ತು ಭವಿಷ್ಯದ ದೃಷ್ಟಿಕೋನದ ಆಧಾರದ ಮೇಲೆ ಚಾಣಕ್ಯ ನಿಧಿಯಲ್ಲಿ ಬರೆದ ಅಭಿಪ್ರಾಯಗಳು ಸಾಮಾನ್ಯ ಜೀವನಕ್ಕೂ ಮಾರ್ಗದರ್ಶನ ನೀಡುತ್ತವೆ. ಈ ಪೈಕಿ ಯಶಸ್ವಿ ಜೀವನ ನಡೆಸಲು ಅವರು ಸೂಚಿಸಿರುವ ಸಲಹೆಗಳು ಪ್ರಮುಖವಾಗುತ್ತವೆ.
ಇಂದಿಗೂ ಚಾಣುಕ್ಯ ಅವರ ತತ್ವಗಳಲ್ಲಿ ಅಡಗಿರುವ ಬುದ್ಧಿವಂತಿಕೆಯು ಪ್ರತಿಯೊಬ್ಬ ವ್ಯಕ್ತಿಗೂ ಯಶಸ್ಸು ಮತ್ತು ವೈಫಲ್ಯದ ನಡುವೆ ಸರಿಯಾದ ಮಾರ್ಗವನ್ನು ಆಯ್ಕೆ ಮಾಡುವ ಶಕ್ತಿಯನ್ನು ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚಾಣಕ್ಯನು ಜೀವನದಲ್ಲಿ ಕೆಲವು ಜನರನ್ನು ನಂಬಬೇಡಿ ಮತ್ತು ನಿಮ್ಮ ವೈಯಕ್ತಿಕ ವಿಷಯಗಳನ್ನು ತಪ್ಪಾಗಿ ಹಂಚಿಕೊಳ್ಳಬೇಡಿ ಎಂದು ಸಲಹೆ ನೀಡುತ್ತಾನೆ.
ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅವರು ತಮ್ಮ ದೌರ್ಬಲ್ಯಗಳನ್ನು ಅಥವಾ ರಹಸ್ಯಗಳನ್ನು ತಪ್ಪು ವ್ಯಕ್ತಿಗೆ ಬಹಿರಂಗಪಡಿಸಬಾರದು. ಹಾಗೆ ಮಾಡಿದರೆ ಅವರ ಪತನ ಖಚಿತ ಎಂದು ಚಾಣಕ್ಯ ಎಚ್ಚರಿಸುತ್ತಾನೆ. ಜಗತ್ತಿನ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ರೀತಿಯ ದೌರ್ಬಲ್ಯವಿರುತ್ತದೆ. ಆದರೆ, ನೀವು ನಿಮ್ಮ ದೌರ್ಬಲ್ಯದ ಬಗ್ಗೆ ಇತರರಿಗೆ ಹೇಳಿದರೆ, ಜನರು ಅದರ ಲಾಭ ಪಡೆಯುತ್ತಾರೆ. ವಿಶೇಷವಾಗಿ ನಿಮ್ಮ ಶತ್ರುಗಳು ಅದರ ಲಾಭ ಪಡೆದು ನಿಮ್ಮ ದೌರ್ಬಲ್ಯದ ಆಧಾರದ ಮೇಲೆ ನಿಮ್ಮನ್ನು ಮತ್ತೆ ಮತ್ತೆ ನೋಯಿಸುತ್ತಾರೆ.
ನಿಮ್ಮ ಯೋಜನೆಯ ಯಶಸ್ಸಿಗೆ ರಹಸ್ಯವು ದೊಡ್ಡ ಕೀಲಿಯಾಗಿದೆ. ಆದ್ದರಿಂದ ಅಪೂರ್ಣಗೊಂಡ ಯೋಜನೆಗಳ ಬಗ್ಗೆ ಯಾರಿಗೂ ಹೇಳಬೇಡಿ. ಏಕೆಂದರೆ ನಿಮ್ಮ ಶತ್ರುಗಳು ನಿಮ್ಮ ದಾರಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಹಾಳು ಮಾಡಲು ಹೊಂಚು ಹಾಕುತ್ತಾರೆ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನೋವನ್ನು ಅನುಭವಿಸುತ್ತಾರೆ. ಆದರೆ ನೀವು ನಿಮ್ಮ ನೋವನ್ನು ಇತರರೊಂದಿಗೆ ಹಂಚಿಕೊಂಡರೆ, ಜನರು ನಿಮ್ಮನ್ನು ದುರ್ಬಲರೆಂದು ಭಾವಿಸಲು ಪ್ರಾರಂಭಿಸುತ್ತಾರೆ. ಚಾಣಕ್ಯ ಹೇಳುವಂತೆ ತನ್ನ ನೋವು ಮತ್ತು ಸಂಕಟವನ್ನು ಮರೆಮಾಡಿ ಇತರರ ಮುಂದೆ ನಗುತ್ತಾ ಬದುಕುವವನೇ ಬಲಿಷ್ಠ ವ್ಯಕ್ತಿ.
ಆಚಾರ್ಯ ಚಾಣಕ್ಯರ ಈ ಬೋಧನೆಯು ಸಾವಿರಾರು ವರ್ಷಗಳ ಹಿಂದಿನಂತೆಯೇ ಇಂದಿಗೂ ಪ್ರಸ್ತುತವಾಗಿದೆ. ನೀವು ಈ ಮೂರು ವಿಷಯಗಳನ್ನು ರಹಸ್ಯವಾಗಿಟ್ಟರೆ, ಅದು ಕೆಲಸ, ವ್ಯವಹಾರ ಅಥವಾ ವೈಯಕ್ತಿಕ ಜೀವನವಾಗಿರಬಹುದು, ನಿಮ್ಮ ವಿರುದ್ಧ ಪಿತೂರಿ ಮಾಡುವವರು ಸಹ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅದು ಹೇಳುತ್ತದೆ.