Surya Gochar: ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿರುವ ಸೂರ್ಯ ದೇವ ಶೀಘ್ರದಲ್ಲೇ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ.
1/6ಏಪ್ರಿಲ್ 27, 2025ರಂದು ಸೂರ್ಯ ಶುಕ್ರನ ನಕ್ಷತ್ರವಾದ ಭರಣಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರಿಗೆ ಅದೃಷ್ಟ ಹೆಗಲೇರಲಿದೆ ಎನ್ನಲಾಗುತ್ತಿದೆ. ಇದರಿಂದ ಅಪಾರ ಸಂಪತ್ತು ಇವರ ಕೈ ಹಿಡಿಯಲಿದ್ದು, ಜೀವನದಲ್ಲಿ ಕಷ್ಟದ ದಿನಗಳು ಕಳೆದು ಬರೀ ಸುಖವೇ ಇರಲಿದೆ ಎನ್ನಲಾಗುತ್ತಿದೆ.
2/6ಮೇಷ ರಾಶಿ: ಭರಣಿ ನಕ್ಷತ್ರದಲ್ಲಿ ಸೂರ್ಯನ ಸಂಚಾರ ಈ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು, ಪ್ರೀತಿ ಜೀವನದಲ್ಲಿ ಸುಧಾರಣೆಯನ್ನು ತರಲಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ದೊರೆಯುವುದು. ನಿಮ್ಮ ನಾಯಕತ್ವದ ಗುಣಕ್ಕೆ ಬೇರೆಯವರು ಆಕರ್ಷಿತರಾಗುತ್ತಾರೆ.
3/6ಸಿಂಹ ರಾಶಿ: ಈ ರಾಶಿಯ ಅಧಿಪತಿಯೂ ಆಗಿರುವ ಸೂರ್ಯ ನಕ್ಷತ್ರ ಬದಲಾವಣೆಯು ಈ ರಾಶಿಯವರಿಗೆ ಅದೃಷ್ಟದ ಬೆಂಬಲವನ್ನು ನೀಡಲಿದೆ. ಉದ್ಯೋಗಸ್ಥರಿಗೆ ವೇತನ ಹೆಚ್ಚಾಗಲಿದೆ. ಪ್ರೇಮ ವಿಷಯಗಳಲ್ಲಿ ನಿಮ್ಮನ್ನು ಬಿಟ್ಟು ಹೋದವರಿಗೆ ನಿಮ್ಮ ಸ್ವಚ್ಛವಾದ ಪ್ರೀತಿಯ ಅರಿವಾಗಲಿದ್ದು, ಮರಳಿ ಬರಳಿದ್ದಾರೆ. ಇನ್ನೆನಿದ್ದರೂ ಸುಖದ ಜೀವನ.
4/6ವೃಶ್ಚಿಕ ರಾಶಿ: ಸೂರ್ಯ ಪಥ ಬದಲಾವಣೆಯಿಂದ ಈ ರಾಶಿಯವರಿಗೆ ಪ್ರತಿಯೊಂದು ಹೆಜ್ಜೆಗೂ ಬರೀ ಯಶಸ್ಸೇ. ವೃತ್ತಿಪರರಿಗೆ ವೇತನ ಹೆಚ್ಚಳ, ದೊಡ್ಡ ಹುದ್ದೆ ಅಲಂಕರಿಸುವ ಸಾಧ್ಯತೆ ಇದೆ. ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ನಿಮ್ಮ ಎದುರಾಳಿಗಳನ್ನು ಮಣಿಸಿ, ವಿಜಯದ ಹಾದಿಯಲ್ಲಿ ಸಾಗುವಿರಿ.
5/6ಧನು ರಾಶಿ: ಸೂರ್ಯ ಸಂಚಾರದಿಂದ ಈ ರಾಶಿಯವರಿಗೆ ಭಾವನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ವ್ಯವಹಾರವನ್ನು ವಿಸ್ತರಿಸಲು ಸರಿಯಾದ ಸಮಯ. ಸಂಬಂಧಗಳಲ್ಲಿ ಮೂಡಿದ್ದ ಸಮಸ್ಯೆಗಳು ಬಗೆಹರಿಯಲಿವೆ. ಅಪಾರ ಸಂಪತ್ತಿನ ಹೊಳೆಯೇ ಹರಿಯಲಿದ್ದು ಖಜಾನೆ ಭರ್ತಿಯಾಗಲಿದೆ.
6/6ಕುಂಭ ರಾಶಿ: ಸೂರ್ಯ ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರ ಮಲಗಿರುವ ಅದೃಷ್ಟ ಎಚ್ಚರಗೊಳ್ಳಲಿದೆ. ವ್ಯವಹಾರದಲ್ಲಿ ಅಭಿವೃದ್ಧಿ ಕಂಡು ಬರಲಿದ್ದು ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ. ಹೊಸ ಕೆಲಸ ಆರಂಭಿಸಲು ಸುವರ್ಣ ಸಮಯ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.