White Hair Tips: ಒಂದು ಕಾಲದಲ್ಲಿ, ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ ನಂತರ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ, ಈಗ ಹಾಗಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಹಲವು ಕಾರಣಗಳಿಂದ ಬಿಳಿಯಾಗುತ್ತದೆ. ಇದರಲ್ಲಿ ಮಾಲಿನ್ಯ, ಹವಾಮಾನ, ಆರೈಕೆಯ ಕೊರತೆ, ಒತ್ತಡ ಮತ್ತು ಪೌಷ್ಟಿಕಾಂಶದ ಕೊರತೆಗಳಂತಹ ಇತರ ಕಾರಣಗಳೂ ಇರಬಹುದು.

ಅನೇಕ ಜನರು 30 ವರ್ಷ ತುಂಬುವ ಮೊದಲೇ ಬೂದು ಕೂದಲಿನಿಂದ ಬಳಲುತ್ತಿದ್ದಾರೆ. ಈ ಬಿಳಿ ಕೂದಲನ್ನು ಕಪ್ಪಾಗಿಸಲು, ಹೇರ್ ಡೈ ಹಾಗೂ ದುಬಾರಿ ಹೇರ್ ಟ್ರೀಟ್‌ಮೆಂಟ್‌ಗಳ ಮೊರೆ ಹೋಗುತ್ತಾರೆ.
ಆಲೂಗಡ್ಡೆಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಇವು ನಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಮೊಸರು ಕೂಡ ಉತ್ತಮ ಪ್ರೋಬಯಾಟಿಕ್ ಆಗಿದ್ದು, ಮೊಸರಿನಲ್ಲಿ ಆಲುಗಡ್ಡೆ ರಸವನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಬೇರಿನಿಂದಲೇ ಕಪ್ಪಾಗುತ್ತದೆ.
ಸೀಗೇಕಾಯಿಯನ್ನು ಆಯುರ್ವೇದದಲ್ಲಿ ಕೂದಲಿನ ಸಮಸ್ಯೆಗಲನ್ನು ಹೋಗಲಾಡಿಸಲು ಬಳಸಲಾಗುತ್ತದೆ. ಇದು ನಿಮಗೆ ಆರೋಗ್ಯಕರ ಕೂದಲನ್ನು ಹೊಂದಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಶಾಂಪೂ ಕೂಡ ಆಗಿದ್ದು, ಇದನ್ನು ಬಳಸುವುದರಿಂದ ಬೂದು ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ನಿಯಮಿತ ಬಳಕೆಯಿಂದ ನೆತ್ತಿ ಆರೋಗ್ಯಕರವಾಗುತ್ತದೆ ಮತ್ತು ಕೂದಲು ಉದ್ದವಾಗಿ ಬೆಳೆಯುತ್ತದೆ.
ತುಳಸಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಬಳಸುವುದರಿಂದ ಕೂದಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ಎಲೆಗಳನ್ನು ಕಪ್ಪು ಚಹಾದೊಂದಿಗೆ ಮಾಸ್ಕ್ ಮಾಡಿ ತಲೆಗೆ ಹಚ್ಚುವುದರಿಂದ ನಿಮ್ಮ ಬಿಳಿ ಕೂದಲು ಕಪ್ಪಾಗುತ್ತದೆ. ಮತ್ತೆ ಕೂದಲು ಬಿಳಿ ಬಣ್ಣಕ್ಕೆ ತಿರುಗದಂತೆ ತಡೆಯುತ್ತದೆ.