Sun Transit March 2023: ಮುಂದಿನ 1 ತಿಂಗಳವರೆಗೆ ಈ 5 ರಾಶಿಗಳ ಸಂಕಷ್ಟದಲ್ಲಿ ಹೆಚ್ಚಳ!

Tue, 14 Mar 2023-12:12 pm,

ಮೇಷ ರಾಶಿ: ಸೂರ್ಯನ ಈ ರಾಶಿ ಪರಿವರ್ತನೆಯಿಂದ ಮೇಷ ರಾಶಿಯ ಜನರ ದಾಂಪತ್ಯ ಜೀವನದಲ್ಲಿ ಸ್ವಲ್ಪ ವಿರಸ ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕ ಜೀವನದಲ್ಲಿ ಕಲಹ ಎದುರಾಗಬಹುದು. ಆರೋಗ್ಯದ ವಿಶೇಷ ಕಾಳಜಿವಹಿಸಿ. ವೆಚ್ಚದ ಮೇಲೆ ನಿಯಂತ್ರಣ ಅವಶ್ಯಕ. ಚಿಕಿತ್ಸೆಯ ಮೇಲೂ ಕೂಡ ಹಣ ಖರ್ಚಾಗುವ ಸಾಧ್ಯತೆ ಇದೆ. ಮಾನಸಿಕ ಒತ್ತಡಕ್ಕೆ ಗುರಿಯಾಗುವಿರಿ. ಮಕ್ಕಳಿಗೆ ಸಂಬಂಧಿಸಿದಂತೆ ಚಿಂತೆ, ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈ ಅವಧಿ ನಿಮಗೆ ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಅಗತ್ಯ.  

ಸಿಂಹ ರಾಶಿ: ಸೂರ್ಯನ ಈ ಗೋಚರ ಸಿಂಹ ರಾಶಿಯ ಜಾತಕದವರಿಗೆ ಮಿಶ್ರ ಫಲಗಳನ್ನು ನೀಡಲಿದೆ. ಆರೋಗ್ಯದ ದೃಷ್ಟಿಯಿಂದ ನೀವು ಕಾಳಜಿವಹಿಸಬೇಕು. ಸ್ವಲ್ಪ ನಿರ್ಲಕ್ಷ ನಿಮ್ಮ ಸಂಕಷ್ಟವನ್ನು ಹೆಚ್ಚಿಸಬಹುದು. ಈ ಅವಧಿಯಲ್ಲಿ ನಿಮ್ಮ ಮಾತು ಮತ್ತು ಕೋಪದ ಮೇಲೆ ಹಿಡಿತವಿರಲಿ. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆಗೆ ವಾಗ್ವಾದ ಸಂಭವಿಸುವ ಸಾಧ್ಯತೆ ಇದೆ. ಧನ ಹಾನಿಯ ಸಾಧ್ಯತೆ ಕೂಡ ಇದೆ. ಕೆಲ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಳಿವೆ. ಹೀಗಾಗಿ ನೊಂದುಕೊಳ್ಳಬೇಡಿ. ಶೀಘ್ರವೇ ಒಳ್ಳೆಯ ಕಾಲ ಬರಲಿದೆ.  

ಕನ್ಯಾ ರಾಶಿ: ಲವ್ ಪಾರ್ಟ್ನರ್ ಜೊತೆಗೆ ವಿವಾದ ಎದುರಾಗುವ ಸಾಧ್ಯತೆ ಇದೆ. ಬಾಲಸಂಗಾತಿಯ ಆರೋಗ್ಯದ ಕಾಳಜಿವಹಿಸಿ. ವಾಗ್ವಾದ, ಜಗಳ, ವ್ಯಾಜ್ಯ ಸಂಭವಿಸುವ ಎಲ್ಲಾ ಸಾಧ್ಯತೆಗಳಿವೆ. ತರ್ಕ-ವಿತರ್ಕ, ವಾಗ್ವಾದ ಹಾಗೂ ಅಹಂಕಾರದ ಬಗ್ಗೆಯೂ ಕೂಡ ಎಚ್ಚರದಿಂದ ಇರಿ. ಮಾತಿನ ಮೇಲೆ ಹಿಡಿತವಿರಲಿ. ಇಲ್ದಿದ್ರೆ ಸಂಬಂಧಗಳು ಹಾಳಾಗಬಹುದು. ಈ ಗೋಚರ ನಿಮಗೆ ಹೆಚ್ಚಿನ ಸಮಸ್ಯೆಗಳನ್ನು ತಂದೊಡ್ಡಲಿದೆ. ನಿಮ್ಮ ವಿರುದ್ಧ ಹೆಣೆಯಲಾಗಿರುವ ರಣತಂತ್ರ ಯಶಸ್ವಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಅಪಘಾತ ಕೂಡ ಸಂಭವಿಸುವ ಸಾಧ್ಯತೆ ಇದೆ. ಎಚ್ಚರಿಕೆವಹಿಸಿ,  

ಧನು ರಾಶಿ: ಸೂರ್ಯನ ಮೀನ ರಾಶಿಯ ಗೋಚರ ನಿಮಗೆ ಸಮ್ಮಿಶ್ರ ಫಲಗಳನ್ನು ನೀಡಲಿದೆ. ಮನೆಯ ವಾತಾವರಣ ಆಧ್ಯಾತ್ಮದಿಂದ ಕೂಡಿರಲಿದೆ. ವೈಯಕ್ತಿಕ ಜೀವನದ ದೃಷ್ಟಿಯಿಂದ ನೋಡುವುದಾದರೆ. ಈ ಅವಧಿಯಲ್ಲಿ ನಿಮಗೆ ಸರಾಸರಿ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ತಲೆದೂರಬಹುದು. ತಾಯಿಯ ಜೊತೆಗಿನ ನಿಮ್ಮ ಸಂಬಂಧದಲ್ಲಿ ಏರಿಳಿತಗಳು ಕಾಣಲಿವೆ. ಹಿರಿಯರ ಜೊತೆಗೆ ಯಾವುದೋ ಒಂದು ಕಾರಣಕ್ಕೆ ವಾಗ್ವಾದ ಸಂಭವಿಸಬಹುದು. ಇದು ನಿಮ್ಮ ಕೆಲಸ-ಕಾರ್ಯಗಳ ಮೇಲೆ ಪ್ರಭಾವ ಬೀರಬಹುದು.  

ಮಕರ ರಾಶಿ: ಸೂರ್ಯನ ಈ ಒಂದು ತಿಂಗಳ ಗೋಚರ ಅವಧಿಯಲ್ಲಿ ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಮುಂಗೋಪಿ ಸ್ವಭಾವವನ್ನು ನಿಯಂತ್ರಿಸಿ. ನಿಮ್ಮ ಕಿರಿಯ ಸಹೋದರ ಸಹೋದರಿಯರ ಜೊತೆಗೆ ನಿಮ್ಮ ಸಂಬಂಧದಲ್ಲಿ ಸುಮಧುರತೆಯ ಕೊರತೆ ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡ. ಏಕೆಂದರೆ ಅದು ನಿಮ್ಮ ಪಾಲಿಗೆ ಚಿಂತಾಜನಕ ಸಾಬೀಟಾಗುವ ಸಾಧ್ಯತೆ ಇದೆ. ಆರ್ಥಿಕ ನಷ್ಟ ಅಥವಾ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಖರ್ಚು-ವೆಚ್ಚಗಳ ಮೇಲೆ ಆದಷ್ಟು ಸಮನ್ವಯ ಸಾಧಿಸಲು ಪ್ರಯತ್ನಿಸಿ. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link