Suya Sharavan Gochar 2024: ಶ್ರವಣ ನಕ್ಷತ್ರಕ್ಕೆ ಸೂರ್ಯನ ಪ್ರವೇಶ ಈ ರಾಶಿಗಳ ಜನರ ಮೇಲೆ ಹಣದ ಭಾರಿ ಸುರಿಮಳೆ!

Fri, 19 Jan 2024-3:16 pm,

Suya Sharavan Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಸೂರ್ಯನ ನಕ್ಷತ್ರ ಪ್ರವೇಶ ನೆರವೇರಲಿದ್ದು, ಇದರಿಂದ ಮೇಷ ಸೇರಿದಂತೆ ಕೆಲ ರಾಶಿಗಳ ಜನರ ಮೇಲೆ ಹಣದ ಭಾರಿ ಸುರಿಮಳೆಯಾಗುವ ಸ್ಪಷ್ಟ ಸಂಕೇತಗಳು ಗೋಚರಿಸುತ್ತಿವೆ. (Spiriual News In Kannada)  

ಮೇಷ ರಾಶಿ: ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಸೂರ್ಯನ ಈ ಶ್ರವಣ ನಕ್ಷತ್ರ ಗೋಚರ ನೆರವೇರುತ್ತಿದೆ. ಇದರಿಂದ ನಿಮಗೆ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಸಿದ್ಧಿ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಇದಲ್ಲದೆ ನಿಮಗೆ ಪ್ರಶಸ್ತಿ ಅಥವಾ ಪದೋನ್ನತಿ ಸಿಗುವ ಸಾಧ್ಯತೆ ಇದೆ. ಹೊಸ ನೌಕರಿಯ ಹುಡುಕಾಟದಲ್ಲಿರುವ ಜಾತಕದವರಿಗೆ ಯಶಸ್ಸು ಸಿಗಲಿದೆ. ವಿದೇಶ ಯಾತ್ರೆಯ ಸೌಭಾಗ್ಯ ಕೂಡ ಪ್ರಾಪ್ತಿಯಾಗಲಿದೆ. ವ್ಯಾಪಾರದಲ್ಲಿ ಅತ್ಯುನ್ನತ ಲಾಭ ನಿಮ್ಮದಾಗಲಿದೆ. ಹೂಡಿಕೆಯಿಂದಲೂ ಕೂಡ ಲಾಭ ನಿಮ್ಮದಾಗಲಿದೆ. ಪಾರ್ಟ್ನರ್ಶಿಪ್ ನಲ್ಲಿ ಮಾಡಲಾದ ಹೊಸ ವ್ಯಾಪ್0ಆರದಲ್ಲಿಯೂ ಕೂಡ ಅಪಾರ ಯಶಸ್ಸು, ಉನ್ನತಿ ನಿಮ್ಮದಾಗಲಿದೆ.   

ಸಿಂಹ ರಾಶಿ: ನಿಮ್ಮ ಜಾತಕದ ಶಷ್ಟಮ ಭಾವದಲ್ಲಿ ಸೂರ್ಯ ವಿರಾಜಮಾನನಾಗಿರಲಿದ್ದಾನೆ. ಇದಲ್ಲದೆ ಆತ ನಿಮ್ಮ ಜಾತಕದ ಪ್ರಥಮ ಭಾವಕ್ಕೆ ಅಧಿಪತಿ. ಇದರಿಂದ ನಿಮಗೆ ಈ ಅವಧಿಯಲ್ಲಿ ಅಪಾರ ಧನಲಾಭದ ಜೊತೆಗೆ ಅಪಾರ ಯಶಸ್ಸು ಕೂಡ ಪ್ರಾಪ್ತಿಯಾಗಲಿದೆ. ವೃತ್ತಿ ಜೀವನದಲ್ಲಿಯೂ ಕೂಡ ಅಪಾರ ಯಶಸ್ಸಿನ ಜೊತೆಗೆ ಸ್ಥಾನಮಾನ ಹೆಚ್ಚಾಗಲಿದೆ. ಉನ್ನತಿಯ ಹೊಸ ಮಾರ್ಗಗಳೂ ಕೂಡ ತೆರೆದುಕೊಳ್ಳಲಿದ್ದು, ಸ್ಥಾನಮಾನ-ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಹಳೆ ವ್ಯಾಜ್ಯಗಳಿಂದ ಮುಕ್ತಿ ಸಿಗಲಿದೆ.   

ಧನು ರಾಶಿ: ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ಸೂರ್ಯನ ಈ ನಕ್ಷತ್ರ ಗೋಚರ ಇರಲಿದೆ. ಇದರಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಇರಲಿದೆ. ವಿದೇಶಿ ಮೂಲಗಳಿಂದ ಹಣ ನಿಮ್ಮ ಜೀವನದಲ್ಲಿ ಹರಿದು ಬರಲಿದೆ. ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚಾಗಿ ಜೀವನ ಸುಖಮಯವಾಗಲಿದೆ. ಅದೃಷ್ಟದ ಸಂಪೂರ್ಣ ಬೆಂಬಲದ ಹಿನ್ನೆಲೆ ಬಿಸ್ನೆಸ್, ವೃತ್ತಿಯಲ್ಲಿ ನಿಮಗೆ ಅಪಾರ ಧನಲಾಭ ಸಿಗಲಿದೆ. ಕಠಿಣ ಪರಿಶ್ರಮ ಪಡುವ ಜಾತಕದವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ವಿದೇಶದಲ್ಲಿ ನೌಕರಿ ಮಾಡುವ ನಿಮ್ಮ ಆಸೆ ಈಡೇರಲಿದೆ.  

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link