ಭೂಮಿಯ ಮೇಲೆ ಎಂದೂ ನಡೆಯದ ಭಯಾನಕ ಘಟನೆ: ಬಾಬಾ ವಂಗಾ ಹೇಳಿದ್ದಾರೆ ಬೆಚ್ಚಿಬೀಳಿಸುವ ಭವಿಷ್ಯ

Written ByPuttaraj K Alur
Published: Oct 11, 2025, 12:03 PM IST|Updated: Oct 11, 2025, 12:03 PM IST

Baba Vanga Predictions: 2025ರ ವರ್ಷಾಂತ್ಯಕ್ಕೂ ಮೊದಲು ಬಲ್ಗೇರಿಯನ್‌ನ ಖ್ಯಾತ ಪ್ರವಾದಿ ಬಾಬಾ ಭಂಗಾ ಹೇಳಿರುವ ಸ್ಫೋಟಕ ಭವಿಷ್ಯ ಸಖತ್‌ ಸೌಂಡ್‌ ಮಾಡುತ್ತಿದೆ. ಅವರು ಹೇಳಿದ್ದಾರೆ ಎನ್ನಲಾಗಿರುವ ಅನೇಕ ಭವಿಷ್ಯವಾಣಿಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇನ್ನಿಲ್ಲದ ಸಂಚಲನ ಮೂಡಿಸಿದೆ. 2026ರಲ್ಲಿ ಉಂಟಾಗಲಿರುವ ಭಯಾನಕ ಬದಲಾವಣೆಗಳು, ಜಗತ್ತಿನಲ್ಲಿ ನಡೆಯಲಿರುವ ಪ್ರಮುಖ ಘಟನೆಗಳ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದಾರೆ. ಅವರ ಪ್ರಕಾರ, 2026 ವಿಪತ್ತುಗಳ ವರ್ಷವಾಗಲಿದ್ದು, ಹೊಸ ವರ್ಷದಲ್ಲಿ ತಂತ್ರಜ್ಞಾನ, ರಾಜಕೀಯ, ಪ್ರಕೃತಿ ಮತ್ತು ಬಾಹ್ಯಾಕಾಶದಲ್ಲಿ ಪ್ರಮುಖ ಘಟನೆಗಳು ಸಂಭವಿಸಬಹುದು ಎಂದು ಊಹಿಸಲಾಗಿದೆ. ಬಾಬಾ ವಂಗಾ ಹೇಳಿರುವ ಬೆಚ್ಚಿಬೀಳಿಸುವ ಭವಿಷ್ಯವಾಣಿಗಳ ಮಾಹಿತಿ ಇಲ್ಲಿದೆ ನೋಡಿ....

1/6

ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಗಳ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಕಂಡುಬಂದಿಲ್ಲ. ಆದರೆ ಲೇಡಿ ಡಯಾನಾ ಸಾವು, ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿ ಮತ್ತು ಸೋವಿಯತ್ ಒಕ್ಕೂಟದ ಪತನದಂತಹ ವಿಚಾರದಲ್ಲಿ ವಂಗಾರ ಅನೇಕ ಭವಿಷ್ಯವಾಣಿಗಳು ಹಿಂದೆ ನಿಜವಾಗಿವೆ ಅಂತಾ ಅವರ ಕೋಟ್ಯಂತರ ಬೆಂಬಲಿಗರು ನಂಬಿದ್ದಾರೆ.

2/6

ಯುರೋಪಿಯನ್ ಮಾಧ್ಯಮಗಳ ಪ್ರಕಾರ, ಬಾಬಾ ಭಂಗಾ 2026ರನ್ನ "ಪ್ರಕೃತಿಯ ಸೇಡಿನ ವರ್ಷ"ವೆಂದು ಉಲ್ಲೇಖಿಸಿದ್ದಾರೆ. ಈ ವರ್ಷದಲ್ಲಿ ದೊಡ್ಡ ಭೂಕಂಪ, ಜ್ವಾಲಾಮುಖಿ ಸ್ಫೋಟ ಮತ್ತು ತೀವ್ರ ಹವಾಮಾನ ಬದಲಾವಣೆ ಆಗಲಿದೆ ಎಂದಿದ್ದಾರೆ. ಇದು ಭೂಮಿಯ ಭೂ ಮೇಲ್ಮೈಯ ಸುಮಾರು 7-8 ಪ್ರತಿಶತದಷ್ಟು ಪರಿಣಾಮ ಬೀರಬಹುದು. ತಜ್ಞರ ಪ್ರಕಾರ, ಸದ್ಯ ಹವಾಮಾನ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ತಾಪಮಾನವು ಈ ಭವಿಷ್ಯವಾಣಿಯೊಂದಿಗೆ ಸ್ವಲ್ಪಮಟ್ಟಿಗೆ ಕಾಕಾತಾಳೀಯವಾಗುತ್ತಿದೆ.

3/6

ನವೆಂಬರ್ 2026ರಲ್ಲಿ ಒಂದು ದೊಡ್ಡ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣವನ್ನ ಪ್ರವೇಶಿಸುತ್ತದಂತೆ. ಇದು ಮಾನವ ಕುಲಕ್ಕೆ ಅನ್ಯಲೋಕದ ಜೀವಿಗಳ ಅಸ್ತಿತ್ವವನ್ನ ಬಹಿರಂಗಪಡಿಸುತ್ತದೆ ಅನ್ನೋದು ಹೆಚ್ಚು ಚರ್ಚೆಯಲ್ಲಿರುವ ಹೇಳಿಕೆ. ವಿಜ್ಞಾನಿಗಳು ಈಗ ಅಂತಹ ಘಟನೆಯ ಸಾಧ್ಯತೆಯನ್ನ ತಳ್ಳಿಹಾಕಿದ್ದರೂ, ಈ ಭವಿಷ್ಯವಾಣಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಶೀಘ್ರವೇ ಭೂಮಿಯ ಮೇಲೆ ದೊಡ್ಡಮಟ್ಟದ ಪರಿಣಾಮ ಉಂಟಾಗುವ ಬಗ್ಗೆಯೂ ವಂಗಾ ಭವಿಷ್ಯವಾಣಿ ನಿಜವಾಗುತ್ತಿದೆ ಎಂದು ಕೆಲವು ತಜ್ಞರು ಹೇಳಿಕೊಳ್ಳುತ್ತಿದ್ದಾರೆ.

4/6

ಬಾಬಾ ವಂಗಾರ ಮತ್ತೊಂದು ಭವಿಷ್ಯವಾಣಿಯ ಪ್ರಕಾರ, 2026ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಾಗತಿಕ ರಾಜಕೀಯದ ಪ್ರಮುಖ ನಾಯಕರಾಗುತ್ತಾರೆ. ಅವರ ನಾಯಕತ್ವದಲ್ಲಿ ರಷ್ಯಾ "ಹೊಸ ಯುಗದ ಶಕ್ತಿ ಕೇಂದ್ರ"ವಾಗಿ ಹೊರಹೊಮ್ಮುತ್ತದೆ. ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಈ ಹೇಳಿಕೆಯು ರಾಜಕೀಯ ವ್ಯಾಖ್ಯಾನಗಳಿಗೆ ಕಾರಣವಾಗುತ್ತಿದೆ ಎಂದು ವಿಶ್ಲೇಷಕರು ನಂಬಿದ್ದಾರೆ.

5/6

ವಿಜ್ಞಾನಿಗಳು ಈ ಭವಿಷ್ಯವಾಣಿಗಳನ್ನ ಕೇವಲ ಫ್ಯಾಂಟಸಿ ಅಂತಾ ತಳ್ಳಿಹಾಕಿದ್ದರೂ, ಇದು ಸಾರ್ವಜನಿಕ ಮನಸ್ಸಿನಲ್ಲಿ ಕುತೂಹಲ ಮತ್ತು ಭಯವನ್ನ ಸೃಷ್ಟಿಸುತ್ತಿದೆ. ಇತಿಹಾಸದಲ್ಲಿ ವಂಗಾರ ಅನೇಕ ಭವಿಷ್ಯವಾಣಿಗಳು ನಿಜವಾಗಿದ್ದು, ಈ "2026ರ ಭವಿಷ್ಯವಾಣಿ"ಯನ್ನೂ ನಿರ್ಲಕ್ಷಿಸಲಾಗುವುದಿಲ್ಲವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ ಪ್ರಪಂಚದಾದ್ಯಂತ ಏನೆಲ್ಲಾ ನಡೆಯಬಹುದು ಅನ್ನೋದರ ಬಗ್ಗೆ ಈಗ ಕೆಲವು ಪ್ರಶ್ನೆಗಳು ಎದ್ದಿದೆ. ವಂಗಾರ ಭವಿಷ್ಯವಾಣಿಗಳು ಮತ್ತೆ ನಿಜವಾಗುತ್ತವೆಯೇ? ಎಂಬ ಪ್ರಶ್ನೆಯೂ ಮೂಡಿದೆ.

6/6

ಕೃತಕ ಬುದ್ಧಿಮತ್ತೆ (AI) 2026ರ ವೇಳೆಗೆ ಮಾನವ ಜೀವನದ ವಿವಿಧ ಅಂಶಗಳ ಮೇಲೆ ನೇರ ಪರಿಣಾಮ ಬೀರಲಿದೆ. ಉದ್ಯೋಗಗಳು, ಆಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಯಂತ್ರಗಳ ಪ್ರಭಾವವು ಹೆಚ್ಚಾಗುವುದರಿಂದ ಮಾನವ ನಾಗರಿಕತೆಯು "ಯಂತ್ರ ನಿಯಮದ ಯುಗ" ವನ್ನ ಪ್ರವೇಶಿಸುತ್ತದಂತೆ. AI ತಂತ್ರಜ್ಞಾನದ ತ್ವರಿತ ಪ್ರಗತಿಯು ಈಗಾಗಲೇ ಈ ಭಯವನ್ನ ಹುಟ್ಟುಹಾಕಿದೆ ಅಂತಾ ವಿಶ್ಲೇಷಕರು ಹೇಳಿದ್ದಾರೆ. ತಜ್ಞರೇ ತಾವು ರೂಪಿಸಿರುವ ತಂತ್ರಜ್ಞಾನದ ಮೇಲೆ ನಿಯಂತ್ರಣ ಕಳೆದುಕೊಳ್ಳಲಿದ್ದಾರೆಯೇ? ಅನ್ನೋ ಪ್ರಶ್ನೆ ಮೂಡಿದೆ. ಮುಂದೆ ಏನಾಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)