ಇಂಗ್ಲೆಂಡ್ ತುಂಬಾ ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ತಂಡವಾಗಿದೆ, ಅವರ ಬ್ಯಾಟಿಂಗ್ ಕ್ರಮಾಂಕ ಸಹಿತ ಅಪಾಯಕಾರಿಯಾಗಿದೆ ಎಂದು ಮೋರ್ಕೆಲ್ ಹೇಳಿದರು.
ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಟೀಮ್ ಇಂಡಿಯಾ ಗೆಲ್ಲೋದು ಖಾತರಿ ಇಲ್ಲ ಎಂದು ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋರ್ನೆ ಮಾರ್ಕೆಲ್, "ಇಂಗ್ಲೆಂಡ್ ಉತ್ತಮ ತಂಡವಾಗಿದ್ದು; ಅವರು ಚೆನ್ನಾಗಿ ಆಡುತ್ತಾರೆ. ನಾವು ಅವರನ್ನು 120 ಅಥವಾ 150 ರನ್‌ಗಳಿಗೆ ಆಲೌಟ್ ಮಾಡುತ್ತೇವೆ ಎಂದು ನೀವು ನಿರೀಕ್ಷಿಸಿದರೆ, ಅದು ಒಳ್ಳೆಯ ನಿರೀಕ್ಷೆಯಾಗಿರುವುದಿಲ್ಲ,ಈಗ ನಾವು ಗೆಲ್ಲವು ಮೂಲಕ ಮಾತ್ರ ಈಗ ಸೆಮಿಫೈನಲ್ ಗೆ ತಲುಪಿದ್ದೇವೆ. ಭಾರತದಲ್ಲಿ ಗೆಲುವು ಸೋಲಿನ ನಡುವಿನ ಅಂತರವು ತುಂಬಾ ಚಿಕ್ಕದಾಗಿದೆ. ಈಗ ನಾವು ಸೆಮಿಫೈನಲ್ ಗೆ ಹೇಗೆ ತಲುಪಿದ್ದೇವೆ ಎನ್ನುವುದನ್ನು ಮುಖ್ಯವಲ್ಲ, ಆದರೆ ಮುಂದಿನ ಎರಡು ಪಂದ್ಯಗಳಲ್ಲಿ ನೀವು ಹೇಗೆ ಪ್ರದರ್ಶನವನ್ನು ನೀಡುತ್ತಿರಿ ಎನ್ನುವುದು ಮುಖ್ಯ.
"ನಾವು ಪರಿಪೂರ್ಣ ಪಂದ್ಯದ ಬಗ್ಗೆ ಮಾತನಾಡಿಲ್ಲ.ನಮ್ಮ ತಂಡವು ಪ್ರತಿಭಾನ್ವಿತವಾಗಿದೆ, ಮತ್ತು ಯಾವುದೇ ಆಟಗಾರನು ಅಗತ್ಯವಿದ್ದಾಗ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಬಹುದು.ಕಳೆದ ಎರಡು ಪಂದ್ಯಗಳಲ್ಲಿಯೂ ಸಹ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ನಾವು ಭಾವಿಸುತ್ತೇವೆ.ಆಟ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ಯಶಸ್ಸಿನ ಯಾವುದೇ ಗ್ಯಾರಂಟಿ ಇಲ್ಲ.ಆದರೆ ಈಗ ನಾವು ಮುಂದಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವುದು ನಮ್ಮ ಗುರಿಯಾಗಿದೆ.
ಇಂಗ್ಲೆಂಡ್ ವಿರುದ್ಧ ನಮಗೆ ದೊಡ್ಡ ಅವಕಾಶವಿದ್ದು,ನಮ್ಮ ಆಟಗಾರರು ತಮ್ಮ ತಂತ್ರವನ್ನು ಕಾರ್ಯಗತಗೊಸುವ ಮೂಲಕ ಉತ್ತಮ ಫಲಿತಾಂಶವನ್ನು ಸಾಧಿಸುತ್ತಾರೆ ಎನ್ನುವ ಭರವಸೆ ಇದೆ'ಎಂದು ಮಾರ್ಕೆಲ್ ಹೇಳಿದರು.
"ಇಂಗ್ಲೆಂಡ್ ತುಂಬಾ ಪ್ರತಿಭಾನ್ವಿತ ಆಟಗಾರರನ್ನು ಹೊಂದಿರುವ ತಂಡವಾಗಿದೆ, ಅವರ ಬ್ಯಾಟಿಂಗ್ ಕ್ರಮಾಂಕ ಸಹಿತ ಅಪಾಯಕಾರಿಯಾಗಿದೆ" ಎಂದು ಮೋರ್ಕೆಲ್ ಹೇಳಿದರು
ಬೌಲಿಂಗ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಹಲವು ಆಯ್ಕೆಗಳಿವೆ. ಅವರು ಟಿ 20 ಪಂದ್ಯಗಳನ್ನು ಆಡುವ ರೀತಿ, ಅವರು ನಿರ್ಭಯವಾಗಿ ಪಂದ್ಯವನ್ನು ತಮ್ಮ ಪರವಾಗಿ ತಿರುಗಿಸಲು ಪ್ರಯತ್ನಿಸುವ ರೀತಿ ಅವರಿಗೆ ಅವಕಾಶಗಳನ್ನು ನೀಡುವುದರಿಂದ ಅದೊಂದು ಅಪಾಯಕಾರಿ ತಂಡವನ್ನಾಗಿ ಮಾಡುತ್ತದೆ ಎಂದು ಭಾವಿಸುತ್ತೇನೆ ಎಂದು ಮಾರ್ಕೆಲ್ ಹೇಳಿದರು.