ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ! 15% ವರೆಗೆ ಅಗ್ಗವಾಗುವುದು ಬಂಗಾರ !

Written ByRanjitha R KUpdated byRanjitha R K
Published: Jun 05, 2025, 11:48 AM IST|Updated: Jun 05, 2025, 11:50 AM IST

Gold price Latest : ಆಭರಣ ಪ್ರಿಯರಿಗೆ ಇದು ಸಂತಸದ ಸುದ್ದಿ. ಮುಂದಿನ 2 ತಿಂಗಳಲ್ಲಿ ಚಿನ್ನದ ಬೆಲೆ ಶೇಕಡಾ 12-15 ರಷ್ಟು ಕಡಿಮೆಯಾಗಬಹುದು ಎನ್ನಲಾಗಿದೆ. ನಿನ್ನೆಯ ಧಾರಣೆಯನ್ನು ನೋಡಿದರೆ ಬಂಗಾರದ ಬೆಲೆಯಲ್ಲಿ ಕುಡಿತ ದಾಖಲಾಗಿರುವುದನ್ನು ಕಾಣಬಹುದು. 

Drop in Gold price 1/5

ನೀವು ಚಿನ್ನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗೊಂದು ಒಳ್ಳೆಯ ಸುದ್ದಿ ಇದೆ. ಮುಂದಿನ 2 ತಿಂಗಳಲ್ಲಿ ಚಿನ್ನದ ಬೆಲೆ ಶೇ. 12-15 ರಷ್ಟು ಕಡಿಮೆಯಾಗಬಹುದು. ಬುಧವಾರವೂ ಚಿನ್ನದ ಬೆಲೆಯೂ ಕುಸಿತ ಕಂಡಿದೆ.

Drop in Gold price 2/5

IBJA ಪ್ರಕಾರ ಸುದ್ದಿ ಬರೆಯುವ ಹೊತ್ತಿಗೆ 22 ಕ್ಯಾರೆಟ್  10 ಗ್ರಾಂ ಚಿನ್ನದ ಬೆಲೆ  88,620 ರೂ. 18 ಕ್ಯಾರೆಟ್ ಚಿನ್ನದ ಬೆಲೆ  72,650 ರೂ. ಆಗಿದೆ. 

Drop in Gold price 3/5

ಬೆಳ್ಳಿ ಬೆಲೆ ಕೆ.ಜಿಗೆ  1,00,980 ರೂ.ಗೆ ತಲುಪಿದೆ. ಅಂದರೆ ಬೆಳ್ಳಿ ಬೆಲೆಯಲ್ಲಿ ಹಿಂದಿಗಿಂತ ಏರಿಕೆಯಾಗಿದೆ. 

Drop in Gold price 4/5

ಕ್ವಾಂಟ್ ಮ್ಯೂಚುವಲ್ ಫಂಡ್ ಪ್ರಕಾರ, ಚಿನ್ನದ ಬೆಲೆಗಳು ಗರಿಷ್ಠ ಮಟ್ಟವನ್ನು ತಲುಪಿದ್ದು, ಮುಂದಿನ ಎರಡು ತಿಂಗಳಲ್ಲಿ ಡಾಲರ್ ಲೆಕ್ಕದಲ್ಲಿ ಶೇ. 12-15 ರಷ್ಟು ಕಡಿಮೆಯಾಗಬಹುದು. ಆದರೂ ನಮ್ಮ ಮಧ್ಯಮ ಮತ್ತು ದೀರ್ಘಾವಧಿಯ ದೃಷ್ಟಿಕೋನವು ಸಮಾನವಾಗಿ ಸಕಾರಾತ್ಮಕವಾಗಿಯೇ ಉಳಿದಿದ್ದು, ಪೋರ್ಟ್‌ಫೋಲಿಯೊದ ಗಮನಾರ್ಹ ಭಾಗವನ್ನು ಅಮೂಲ್ಯ ಲೋಹಗಳಿಗೆ ಮೀಸಲಿಡಬೇಕೆಂದು ಕ್ವಾಂಟ್ ಮ್ಯೂಚುವಲ್ ಫಂಡ್ ಹೇಳಿದೆ.

Drop in Gold price 5/5

ಜನವರಿ 1 ರಿಂದ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 76,162 ರೂ.ಗಳಿಂದ 20,585 ರೂ.ಗಳಿಗೆ ಅಥವಾ ಶೇ. 27.02 ರಷ್ಟು ಏರಿಕೆಯಾಗಿ 96,747 ರೂ.ಗಳಿಗೆ ತಲುಪಿದೆ. ಬೆಳ್ಳಿಯ ಬೆಲೆಯೂ ಕೆಜಿಗೆ 86,017 ರೂ.ಗಳಿಂದ 14,963 ರೂ.ಗಳಿಗೆ ಅಥವಾ ಶೇ. 17.39 ರಷ್ಟು ಏರಿಕೆಯಾಗಿ 1,00,980 ರೂ.ಗಳಿಗೆ ತಲುಪಿದೆ.