ಕೊಲೆಸ್ಟ್ರಾಲ್ ಅನ್ನು ಅತ್ಯಂತ ವೇಗವಾಗಿ ಕರಗಿಸುತ್ತವೆ ಈ ಆಹಾರಗಳು.!
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸುಲಭ ಆಹಾರವೆಂದರೆ ಬೆಳಗಿನ ಉಪಾಹಾರದಲ್ಲಿ ಓಟ್ಸ್ ಅನ್ನು ಸೇರಿಸುವುದು. ಇದು ಬಹಳಷ್ಟು ಕರಗುವ ಫೈಬರ್ ಅನ್ನು ಹೊಂದಿದ್ದು, ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಸೇಬುಗಳು, ದ್ರಾಕ್ಷಿಗಳು, ಸ್ಟ್ರಾಬೆರಿಗಳು, ಕಿತ್ತಳೆ ಮತ್ತು ಅನೇಕ ಸಿಟ್ರಸ್ ಹಣ್ಣುಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ಬೆಂಡೆಕಾಯಿಯಲ್ಲಿ ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆಯಿದ್ದು, ಕರಗುವ ಫೈಬರ್ ಹೆಚ್ಚಾಗಿರುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ನೀವು ವಾರಕ್ಕೆ 2 ಬಾರಿ ಹೆಚ್ಚು ಕೊಬ್ಬಿನಾಂಶ ಇರುವ ಮೀನುಗಳನ್ನು ಸೇವಿಸಿದರೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತವೆ.
ಸೋಯಾ ಉತ್ಪನ್ನಗಳ ನಿಯಮಿತ ಸೇವನೆಯು LDL ಅನ್ನು ಕಡಿಮೆ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಸೋಯಾಬೀನ್, ಸೋಯಾ ಮಿಲ್ಕ್ ತೋಫುಗಳಂತಹ ಆಹಾರಗಳನ್ನು ಸೇರಿಸಿಕೊಳ್ಳಬಹುದು. ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)