ಚಳಿಗಾಲದಲ್ಲಿ ಸಿಗುವ ಈ ತರಕಾರಿಗಳು ರಕ್ತದ ಸಕ್ಕರೆಯನ್ನು ಹೆಚ್ಚಾಗಲು ಬಿಡುವುದಿಲ್ಲ
ಚಳಿಗಾಲದಲ್ಲಿ ಅಗ್ಗದ ದರದಲ್ಲಿ ದೊರೆಯುವ ತರಕಾರಿಗಳಲ್ಲಿ ಬಟಾಣಿ ಕೂಡಾ ಒಂದು. ಇದು ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ. ಬಟಾಣಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಇದು ನಿಜವಲ್ಲ. ಅದರಲ್ಲಿ ಕಂಡುಬರುವ ಕೆಲವು ಅಂಶಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಮೂಲಂಗಿಯು ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ. ಸಾಂಬಾರ್, ಪಲ್ಯ ಸಲಾಡ್ ರೂಪದಲ್ಲಿ ಮೂಲಂಗಿಯನ್ನು ಸೇವಿಸಬಹುದು. ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.
ಮಧುಮೇಹಿಗಳಿಗೆ ಕ್ಯಾರೆಟ್ ಸೇವನೆ ಒಳ್ಳೆಯದಲ್ಲ ಎನ್ನುವುದೇ ಸಾಮಾನ್ಯವಾಗಿ ಇರುವ ಮನಸ್ಥಿತಿ. ಆದರೆ ಮಧುಮೇಹ ರೋಗಿಗಳು ಕ್ಯಾರೆಟ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬಹುದು. ಇದು ಮಧುಮೇಹದಿಂದ ಉಂಟಾಗುವ ಅನೇಕ ತೊಡಕುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮೆಂತ್ಯೆ ಸೊಪ್ಪನ್ನು ಬಳಸಬಹುದು. ಮೆಂತ್ಯೆ ಬೀಜಗಳು ಅಥವಾ ಸೊಪ್ಪು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ. ಚಳಿಗಾಲದಲ್ಲಿ ಮೆಂತ್ಯೆ ಸೊಪ್ಪು ಕಡಿಮೆ ಬೆಲೆಗೆ ಸಿಗುತ್ತದೆ.
ಪಾಲಕ್ ಸೊಪ್ಪನ್ನು ಎಲ್ಲಾ ಋತುವಿನಲ್ಲಿ ತಿನ್ನಬಹುದು. ಆದರೆ ಚಳಿಗಾಲದಲ್ಲಿ ಇದನ್ನೂ ಹೆಚ್ಚಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಈ ಋತುವಿನಲ್ಲಿ ಅದರ ಬೆಲೆ ಕೂಡ ಕಡಿಮೆಯಾಗುತ್ತದೆ. ಪಾಲಕ್ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.