Shani Devas Favorite zodiac people: ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಪ ಗ್ರಹ, ಕರ್ಮಫಲದಾತ, ನ್ಯಾಯದ ದೇವರು ಎಂದೆಲ್ಲಾ ಕರೆಯುವ ಶನಿ ದೇವನ ಹೆಸರು ಕೇಳಿದರೆ ಜನರು ಬೆಚ್ಚಿ ಬೀಳುತ್ತಾರೆ.
Shani Favorite Zodiac Signs: ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿ ದುರ್ಬಲನಾಗಿದ್ದಾಗ ಹಾಗೂ ಶನಿಯ ಕೆಟ್ಟ ಪ್ರಭಾವ ಇದ್ದಾಗ ಅವನ ಜೀವನದಲ್ಲಿ ದುಃಖ ದುಮ್ಮಾನಗಳು ಕೊನೆಗೊಳ್ಳುವುದೇ ಇಲ್ಲ ಎನ್ನಲಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯ ಜನರು ಜನ್ಮತಃ ಶನಿದೇವನಿಗೆ ಅಚ್ಚುಮೆಚ್ಚಿನವರಾಗಿರುತ್ತಾರೆ. ಕರ್ಮಫಲದಾತನಿಗೆ "ಪಂಚ ಪ್ರಾಣ" ಎಂತಲೇ ಬಣ್ಣಿಸಲಾಗುವ ಈ ರಾಶಿಯವರಿಗೆ ಸೋಲು ಎಂದಿಗೂ ಕಾಡುವುದಿಲ್ಲ. ಜೀವನದಲ್ಲಿ ಬೆಟ್ಟದಂತಹ ಸಮಸ್ಯೆಗಳಿದ್ದರೂ ಸದಾ ಇವರ ಬೆನ್ನಿಗಿರುತ್ತಾನೆ ಶನಿ ಮಹಾತ್ಮ. ಶನಿದೇವನ ಕೃಪೆಯಿಂದಲೇ ಜೀವನದಲ್ಲಿ ಕೀರ್ತಿ, ಪ್ರಗತಿ ಕಾಣುವ ಇವರು ಅಪಾರ ಸಂಪತ್ತಿನ ಒಡೆಯರೂ ಆಗುತ್ತಾರೆ ಎನ್ನಲಾಗುತ್ತದೆ.
ತುಲಾ ರಾಶಿ: ಶನಿ ಮಹಾತ್ಮ ಸದಾ ಕಾಲ ಈ ರಾಶಿಯವರಿಗೆ ಉಚ್ಚಸ್ಥಾನದಲ್ಲಿರುತ್ತಾನೆ. ತಮ್ಮ ಸದ್ಬುದ್ದಿಯಿಂದಲೇ ಶನಿಯ ಪ್ರೀತಿಗೆ ಪಾತ್ರರಾಗುವ ಇವರ ಮೇಲೆ ಜೀವನವಿಡೀ ಶನಿಯ ವಿಶೇಷ ಆಶೀರ್ವಾದ ಇರುತ್ತದೆ. ಜೀವನದಲ್ಲಿ ನಾನಾ ಬಗೆಯ ಕಷ್ಟಗಳು ಇವರಿಗೆ ಎದುರಾದರೂ ಶನಿ ದೇವನ ದಯೆಯಿಂದ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಶಕ್ತಿಯೂ ಇವರಿಗೆ ಇರುತ್ತದೆ. ತಮ್ಮ ಕಠಿಣ ಪರಿಶ್ರಮದಿಂದಲೇ ಅಪಾರ ಸಂಪತ್ತನ್ನು ಗಳಿಸುವರು.
ಧನು ರಾಶಿ: ಶನಿ ನೆಚ್ಚಿನ ರಾಶಿಚಕ್ರಗಳಲ್ಲಿ ಧನು ರಾಶಿಯೂ ಒಂದು. ಈ ರಾಶಿಯವರಿಗೆ ಶನಿ ಕೃಪಾಕಟಾಕ್ಷ ಸದಾ ಇರುತ್ತದೆ. ಶನಿಯ ದಯೆಯಿಂದಲೇ ಇವರು ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣುವರು. ಹಣದ ಕೊರತೆ ಎಂದಿಗೂ ಇವರನ್ನು ಬಾಧಿಸುವುದಿಲ್ಲ.
ಮಕರ ರಾಶಿ: ಈ ರಾಶಿಯ ಅಧಿಪತಿಯೂ ಆಗಿರುವ ಶನಿ ದೇವ ಇವರಿಗೆ ಸದಾ ದಯೆ ತೋರುತ್ತಾನೆ. ಶನಿಯ ನೆಚ್ಚಿನ ರಾಶಿಗಳಲ್ಲಿ ಒಂದಾದ ಈ ರಾಶಿಯವರು ಅದೃಷ್ಟದಿಂದಲೇ ಜೀವನ ನಡೆಸುತ್ತಾರೆ. ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳದ ಇವರು ಬಯಸಿದ್ದನ್ನು ಪಡೆಯಲೇ ಬೇಕು ಎಂಬ ಹಠಮಾರಿ ಸ್ವಭಾವದವರು. ಆದರೂ, ಇವರ ಪ್ರಯತ್ನದಲ್ಲಿ ಶನಿಯೇ ಬೆನ್ನೆಲುಬಾಗಿ ನಿಲ್ಲುವುದರಿಂದ ಕಾರ್ಯಗಳಲ್ಲಿ ಸಿದ್ಧಿ.
ಕುಂಭ ರಾಶಿ: ಈ ರಾಶಿಗೂ ಶನಿಯೇ ಒಡೆಯ. ಇವರ ಮೇಲೆ ಶನಿ ಗ್ರಹದ ವಿಶೇಷ ಆಶೀರ್ವಾದ ಇರುತ್ತದೆ. ಸ್ವಭಾವತಃ ಪ್ರಾಮಾಣಿಕರಾಗಿರುವ ಈ ರಾಶಿಯವರೆಂದರೆ ನ್ಯಾಯಾಧಿಪತಿಗೆ ಪಂಚಪ್ರಾಣ. ಹಣಕಾಸಿನ ಸಮಸ್ಯೆ ಎಂದಿಗೂ ಇವರನ್ನು ಬಾಧಿಸುವುದಿಲ್ಲ. ಶನಿಯ ವಿಶೇಷ ಅನುಗ್ರಹದಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುವ ಇವರು ಸುಖದ ಸುಪ್ಪತ್ತಿಗೆಯಲ್ಲೇ ಜೀವನ ಸಾಗಿಸುತ್ತಾರೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.