ತನಗಿಂತ 8 ವರ್ಷ ಕಿರಿಯ ನಟನ ಜೊತೆ ಮದುವೆಯಾದ 52 ವರ್ಷದ ಸ್ಟಾರ್‌ ಹಿರೋಯಿನ್! ‌

Published: Feb 11, 2025, 07:12 AM IST|Updated: Feb 11, 2025, 07:12 AM IST

Tanaaz Irani : ಈ ಖ್ಯಾತ ನಟಿ ತನಗಿಂತ 18 ವರ್ಷ ಹಿರಿಯ ಮುಸ್ಲಿಂ ನಟನನ್ನು ಮೊದಲು ಮದುವೆಯಾಗಿದ್ದರು. ಆ ಬಳಿಕ ತನಗಿಂತ 8 ವರ್ಷ ಕಿರಿಯ ನಟನ ಜೊತೆ ಮದುವೆಯಾದ 52 ವರ್ಷದ ಸ್ಟಾರ್‌ ಹಿರೋಯಿನ್ ಯಾರು ಗೊತ್ತಾ?

Tanaaz Irani  1/7

ಈ ಖ್ಯಾತ ನಟಿ ತನಗಿಂತ 18 ವರ್ಷ ಹಿರಿಯ ಮುಸ್ಲಿಂ ನಟನನ್ನು ಮೊದಲು ಮದುವೆಯಾಗಿದ್ದರು. ಮದುವೆಯಾದ ಕೇವಲ ಒಂದು ವರ್ಷದಲ್ಲೇ ತಾಯಿಯಾದರು. 8 ವರ್ಷಗಳಲ್ಲಿ ದಾಂಪತ್ಯ ಮುರಿದುಬಿತ್ತು. ಆ ನಂತರ 8 ವರ್ಷ ಚಿಕ್ಕ ನಟನನ್ನು ಮದುವೆಯಾದರು.  

Tanaaz Irani  2/7

ಬಾಲಿವುಡ್ ಹಾಗೂ ಕಿರುತೆರೆ ನಟಿ ತನಾಜ್ ಇರಾನಿ ಅವರ ಬಗ್ಗೆ ನಾವು ಹೇಳುತ್ತಿದ್ದೇವೆ. 52 ವರ್ಷದ ಈ ನಟಿ ಮೂರು ಮಕ್ಕಳ ತಾಯಿ ಆಗಿದ್ದಾರೆ. ಇವರ ಹಿರಿಯ ಮಗಳಿಗೆ 30 ವರ್ಷ ವಯಸ್ಸು. 

Tanaaz Irani  3/7

ತನಾಜ್ ಇರಾನಿ ಮೊದಲು ಫರೀದ್ ಕುರಿಮ್ ಅವರೊಂದಿಗೆ ಮದುವೆಯಾದರು. ಆಗ ಇವರಿಗೆ ಕೇವಲ 20 ವರ್ಷ ವಯಸ್ಸು. ಮದುವೆಯ ನಂತರ ಮಗಳು ಜನಿಸಿದಳು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ.

Tanaaz Irani  4/7

ತನಾಜ್ ಇರಾನಿ ಮೊದಲ ಗಂಡ ಫರೀದ್ ಕುರಿಮ್ ರಂಗ ಮತ್ತು ನಾಟಕ ಕಲಾವಿದರಾಗಿದ್ದರು. ಸಂದರ್ಶನದಲ್ಲಿ ತನಾಜ್ ಇರಾನಿ ತಮ್ಮ ಮೊದಲ ಮದುವೆ ಬಗ್ಗೆ ಮಾತನಾಡಿದ್ದಾರೆ. 

Tanaaz Irani  5/7

ಫರೀದ್ ಕುರಿಮ್ ರಂಗಭೂಮಿ ಕಲಾವಿದರಾಗಿದ್ದರು. ಅವರ ನಡವಳಿಕೆ, ಕೆಲಸ ಮಾಡುತ್ತಿದ್ದ ರೀತಿ, ಹಾಡುತ್ತಿದ್ದ ಹಾಡು ಇವೆಲ್ಲ ಕಂಡು ಅವನನ್ನು ಇಷ್ಟಪಟ್ಟೆ. ನಂತರ ಮದುವೆ ಆದೆವು. ಆದರೆ ನಮ್ಮ ವಯಸ್ಸಿನ ನಡುವೆ 18 ವರ್ಷಗಳ ವ್ಯತ್ಯಾಸವಿತ್ತು ಎಂದಿದ್ದಾರೆ. 

Tanaaz Irani  6/7

ವಯಸ್ಸಿನ ವ್ಯತ್ಯಾಸವೇ ತಮ್ಮ ಮದುವೆ ಮುರಿದು ಬೀಳಲು ಕಾರಣ ಎಂದು ನಟಿ ತನಾಜ್ ಇರಾನಿ ಹೇಳಿದ್ದಾರೆ. ನಾನು ಪಾರ್ಸಿ ಸಮುದಾಯಕ್ಕೆ ಸೇರಿದವಳಾಗಿದ್ದೆ. ಆದರೆ ನಾನು ಫರೀದ್‌ನನ್ನು ಮದುವೆಯಾದ ಕೂಡಲೇ ಪಾರ್ಸಿ ಸಮುದಾಯದಿಂದ ಹೊರಹಾಕಲಾಯಿತು ಎಂದಿದ್ದಾರೆ.

Tanaaz Irani  7/7

ಮದುವೆಯಾದ ಮೇಲೂ ದುಡಿಯಬೇಕು, ಲೈಫ್ ಎಂಜಾಯ್ ಮಾಡಬೇಕು, ಪಾರ್ಟಿ ಮಾಡಬೇಕು ಇದೆಲ್ಲ ನನಗೆ ಅನಿಸುತ್ತಿತ್ತು. ಆದರೆ ಫರೀದ್‌ ವಯಸ್ಸಿನಲ್ಲಿ ತುಂಬಾ ದೊಡ್ಡವನಾಗಿದ್ದನು.  ತುಂಬಾ ಒಳ್ಳೆಯ ವ್ಯಕ್ತಿ ಆಗಿದ್ರೂ ವಯಸ್ಸು ಸರಿ ಹೊಂದಲಿಲ್ಲ. ನಮ್ಮ ಸಂಬಂಧ ಮುರಿದುಹೋಯಿತು ಎಂದಿದ್ದಾರೆ.