ಈ ಬಾಲಿವುಡ್ ತಾರೆ ನೂರಕ್ಕೂ ಹೆಚ್ಚು ನಾಯಿಗಳೊಂದಿಗೆ ವಾಸಿಸುತ್ತಿದ್ದಾರೆ. ಅವುಗಳಿಗಾಗಿ 45 ಕೋಟಿ ಖರ್ಚು ಮಾಡ್ತಾರಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಾಲಿವುಡ್‌ನಲ್ಲಿ ಪ್ರಾಣಿ ಪ್ರಿಯರು ಎಂದು ಕರೆದುಕೊಳ್ಳುವ ಅನೇಕ ನಟರಿದ್ದಾರೆ. ಅವರಲ್ಲಿ ಹೆಚ್ಚಿನವರು ಒಂದೋ ಎರಡೋ ಸಾಕುಪ್ರಾಣಿಗಳನ್ನು ಹೊಂದಿದ್ದಾರೆ. ಆದರೆ ಈ ನಟ ತಮ್ಮ ಸ್ವಂತ ದುಡಿಮೆಯಲ್ಲಿ ಬರೋಬ್ಬರಿ 116 ನಾಯಿಗಳನ್ನು ನೋಡಿಕೊಳ್ಳುತ್ತಾರೆ.
ಮಿಥುನ್ ಚಕ್ರವರ್ತಿ ಬಾಲಿವುಡ್‌ನ ಖ್ಯಾತ ನಟ ಜೊತೆಗೆ ಇವರೊಬ್ಬ ಶ್ವಾನ ಪ್ರೇಮಿ. ಮಿಥುನ್ ಚಕ್ರವರ್ತಿ 116 ನಾಯಿಗಳನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಮುಂಬೈ ಮತ್ತು ಭಾರತದ ಉಳಿದ ಭಾಗಗಳಲ್ಲಿ ನಾಯಿಗಳಿಗೆ ಆರೈಕೆ ಮಾಡುತ್ತಿದ್ದಾರೆ.
ಮುಂಬೈ ಬಳಿಯ ಮಾಧ್ ದ್ವೀಪದಲ್ಲಿರುವ ಅವರ ವಿಸ್ತಾರವಾದ 1.5 ಎಕರೆ ಆಸ್ತಿಯಲ್ಲಿ 116 ನಾಯಿಗಳ ಪೈಕಿ 76 ನಾಯಿಗಳನ್ನು ಸಾಕಿದ್ದಾರೆ. ಇನ್ನು ಬೇರೆ ಬೇರೆ ಭಾಗದಲ್ಲಿ ಇನ್ನುಳಿದ ಶ್ವಾನಗಳ ಆರೈಕೆ ಮಾಡುತ್ತಾರೆ.
ವರದಿ ಪ್ರಕಾರ ಸುಮಾರು 45 ಕೋಟಿ ಮೌಲ್ಯದ ಭೂಮಿಯಲ್ಲಿ ವೈಯಕ್ತಿಕ ನಿವಾಸವನ್ನು ನಿರ್ಮಿಸಿದ್ದು ಅದರ ಬಳಿಯೇ ಈ 76 ಶ್ವಾನಗಳ ಆರೈಕೆ ಮಾಡುತ್ತಿದ್ದಾರೆ.
ಕಳೆದ ವರ್ಷ ಸಂದರ್ಶನವೊಂದರಲ್ಲಿ, ಮಿಥುನ್ ಅವರ ಸೊಸೆ ನಟಿ ಮದಲ್ಸಾ ಶರ್ಮಾ, "ನಾಯಿಗಳಿಗೆ ತಮ್ಮದೇ ಆದ ಸ್ಥಳವಿದೆ, ವಿಭಿನ್ನ ಕೊಠಡಿಗಳಿವೆ. ಅವುಗಳನ್ನು ನೋಡಿಕೊಳ್ಳುವ ಸಿಬ್ಬಂದಿ ಇದ್ದಾರೆ." ಎಂದು ಹೇಳಿದ್ದರು.
70 ರ ದಶಕದ ಮಧ್ಯಭಾಗದಲ್ಲಿ ನಟ ಮಿಥುನ್ ಚಕ್ರವರ್ತಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಮಿಥುನ್ ಚಕ್ರವರ್ತಿ ರೈಲ್ವೆ ನಿಲ್ದಾಣದಲ್ಲಿ ಅಥವಾ ಪಾದಚಾರಿ ಮಾರ್ಗದಲ್ಲಿ ಮಲಗುತ್ತಿದ್ದ ದಿನಗಳಿದ್ದವು. ಆದರೆ ಆ ದಿನಗಳು ಈಗ ಕಳೆದುಹೋಗಿವೆ.
ಮಿಥುನ್ ಚಕ್ರವರ್ತಿ ಇಂದು ಭಾರತೀಯ ಸ್ಟಾರ್ ನಟರಲ್ಲಿ ಒಬ್ಬರು. ನಟ ಈಗ 400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಗೆ ಒಡೆಯನಾಗಿದ್ದಾರೆ ಎಂದು ವರದಿಯಾಗಿದೆ. ಮಾಧ್ ದ್ವೀಪದಲ್ಲಿ ಮನೆ, ಊಟಿಯಲ್ಲಿ ಒಂದು ಮನೆ ಮತ್ತು ಹಲವಾರು ಹೋಟೆಲ್‌ಗಳು ಮತ್ತು ಕಾಟೇಜ್‌ಗಳಿಗೆ ಮಿಥುನ್ ಚಕ್ರವರ್ತಿ ಒಡೆಯ.