ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಬೆಳಕಿನ ಹಬ್ಬ ದೀಪಾವಳಿ ಕೆಲವು ರಾಶಿಯವರಿಗೆ ಅದೃಷ್ಟದ ಹಬ್ಬವಾಗಿರಲಿದೆ. ಯಾಕೆಂದರೆ ಈ ರಾಶಿಯವರಿಗೆ ದೀಪಾವಳಿಯಿಂದಲೇ ರಾಜಯೋಗ ಆರಂಭವಾಗಲಿದೆ. ಈ ಮೂಲಕ ಅದೃಷ್ಟ ಕೈ ಹಿಡಿದು ಧನ ಸಂಪತ್ತು ಹೆಚ್ಚಾಗಲಿದೆ.
ಮೇಷ ರಾಶಿ : ಆರ್ಥಿಕ ಲಾಭ ಮತ್ತು ವೃತ್ತಿಪರ ಯಶಸ್ಸನ್ನು ಹೊತ್ತು ತರಲಿದೆ ಈ ದೀಪಾವಳಿ. ಅದೃಷ್ಟ ನಿಮ್ಮ ಜೊತೆಗೆ ನಿಲ್ಲುವುದು. ಯಾವುದೇ ಕೆಲಸವಾಗಿರಲಿ ಮಾಡಲೇ ಬೇಕು ಎಂದು ಮತ್ತು ದೃಢಸಂಕಲ್ಪ ಮಾಡಿದರೆ ಯಶಸ್ವಿಯಾಗಿ ಪೂರೈಸಿ ಬಿಡುವಿರಿ. ಹೊಸ ಉದ್ಯಮ ಪ್ರಾರಂಭಿಸಲು ಇದು ಅತ್ಯುತ್ತಮ ಸಮಯ.
ವೃಷಭ ರಾಶಿ : ಆರ್ಥಿಕವಾಗಿ, ಅನಿರೀಕ್ಷಿತ ಲಾಭಗಳಾಗುವುದು. ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ವೈಯಕ್ತಿಕ ಯೋಗಕ್ಷೇಮದತ್ತ ಗಮನಹರಿಸುವುದು ಒಳಿತು. ಸಂಪತ್ತು, ಸಮೃದ್ದಿ, ಸಂತೋಷ ಹೆಚ್ಚಾಗುವ ಕಾಲ ಇದು.
ಮಿಥುನ ರಾಶಿ : ಗುರು ಮತ್ತು ಶುಕ್ರನ ಪ್ರಭಾವದಿಂದ ಕೈ ಹಾಕಿದ ಕೆಲಸಗಳೆಲ್ಲಾ ಜಯ ತಂದು ಕೊಡುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಹಣಕಾಸಿನ ಸಮಸ್ಯೆ ನೀಗುವುದು. ಗೆಲುವು ನಿಮ್ಮ ಮುಂದಿರುವುದು.
ಸಿಂಹ ರಾಶಿ : ಮನಿಮ್ಮ ಮಾತಿಗೆ ಮನ್ನಣೆ ಸಿಗುವುದು. ಸಮೃದ್ಧಿ ಮತ್ತು ಸಂತೋಷದಿಂದ ಕೂಡಿದ ದೀಪಾವಳಿ ಇದಾಗುವುದು. ವೃತ್ತಿಜೀವನದಲ್ಲಿ ಬೆಳವಣಿಗೆಯಾಗುವುದು.
ಧನು ರಾಶಿ :ಆರ್ಥಿಕ ಸ್ಥಿರತೆ ಜೊತೆಗೆ ವೃತ್ತಿಪರ ಪ್ರಗತಿ ಒಲಿದು ಬರುವುದು. ಹೊಸ ಉದ್ಯಮವನ್ನು ಪ್ರಾರಂಭಿಸಲು ಸೂಕ್ತ ಸಮಯ. ಆಶಾವಾದ ಮತ್ತು ಸೃಜನಶೀಲತೆಯನ್ನು ಅಳವಡಿಸಿಕೊಳ್ಳಬೇಕು. ಧೈರ್ಯದಿಂದ ಮುನ್ನಡೆದರೆ ಗೆಲುವು ನಿಮ್ಮದೇ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ .