3 ವಾರಕ್ಕೆ ಫಿನಾಲೆ.. ಬಿಗ್‌ಬಾಸ್‌ನಲ್ಲಿ ಊಹೆ ಮೀರಿದ ಎಲಿಮಿನೇಷನ್‌! ಫೈನಲಿಸ್ಟ್‌ ಆಗ್ತಾರೆ ಅಂದ್ಕೊಂಡಿದ್ದ ಮೂರು ಸ್ಪರ್ಧಿಗಳು ಔಟ್‌... ವೈಲ್ಡ್‌ಕಾರ್ಡ್‌ ಆಗಿ ಮೂವರ ಆಗಮನ!

Published: Oct 15, 2025, 08:00 PM IST|Updated: Oct 15, 2025, 08:00 PM IST

Bigg Boss Season 12 Mid-Season Finale: ಬಿಗ್ ಬಾಸ್ ಸೀಸನ್ 12 ರ ಮಿಡ್‌-ಸೀಸನ್ ಫೈನಲ್ ಈ ಬಾರಿ ವಿಶೇಷವಾಗಿರುತ್ತದೆ. ಬಿಗ್ ಬಾಸ್ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಸಂಭವಿಸುತ್ತಿರುವ ಘಟನೆಯಾಗಿದ್ದು, ಪ್ರೇಕ್ಷಕರಿಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಮಿಡ್‌ ಸೀಸನ್ ಫೈನಲ್ ಅನ್ನು ಯಾರು ಗೆಲ್ಲುತ್ತಾರೆ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ. 

 

1/6

ಬಿಗ್ ಬಾಸ್ ಸೀಸನ್ 12 ರ ಮಿಡ್‌-ಸೀಸನ್ ಫೈನಲ್ ಈ ಬಾರಿ ವಿಶೇಷವಾಗಿರುತ್ತದೆ. ಬಿಗ್ ಬಾಸ್ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಸಂಭವಿಸುತ್ತಿರುವ ಘಟನೆಯಾಗಿದ್ದು, ಪ್ರೇಕ್ಷಕರಿಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಮಿಡ್‌ ಸೀಸನ್ ಫೈನಲ್ ಅನ್ನು ಯಾರು ಗೆಲ್ಲುತ್ತಾರೆ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ. 

 

2/6

ಬಿಗ್ ಬಾಸ್ ಕನ್ನಡ ಸೀಸನ್ 12 ಎಕ್ಸ್‌ಪೆಕ್ಟ್ ದಿ ಅನ್‌ಸ್ಪೆಕ್ಟೆಡ್ ಎಂಬ ಥೀಮ್‌ನೊಂದಿಗೆ ಬಹಳ ರೋಮಾಂಚಕಾರಿಯಾಗಿ ಸಾಗುತ್ತಿದೆ. ಈಗ ಬಿಗ್ ಬಾಸ್ ಮತ್ತೊಂದು ಸರ್ಪ್ರೈಸ್ ನೀಡಲಿದೆ. ಅದು ಮಿಡ್‌-ಸೀಸನ್ ಫೈನಲ್. ಹೌದು, ಮೂರನೇ ವಾರಕ್ಕೆ ಫಿನಾಲೆ ನಡೆಯುತ್ತಿರುವುದು ಇದೇ ಮೊದಲು. ಇದು ಅನಿರೀಕ್ಷಿತ ಮತ್ತು ಆಸಕ್ತಿದಾಯಕ ತಿರುವುಗಳನ್ನು ತರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

 

3/6

ಈ ಫಿನಾಲೆಯಲ್ಲಿ ದೊಡ್ಡ ಎಲಿಮಿನೇಷನ್ ಇರುತ್ತದೆ ಮತ್ತು ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಪ್ರವೇಶಿಸುತ್ತಿದ್ದಾರೆ. ಅವರ ಆಗಮನದೊಂದಿಗೆ, ಅಸ್ತಿತ್ವದಲ್ಲಿರುವ ಸ್ಪರ್ಧಿಗಳ ಆಟವು ಹೊಸ ಉತ್ಸಾಹ ತಿರುವು ಪಡೆಯವ ಸಾಧ್ಯತೆ ಇದೆ. ಇದಲ್ಲದೆ, ಈ ಬಾರಿ ಮಿಡ್‌-ಸೀಸನ್ ವಿಜೇತರನ್ನು ಘೋಷಿಸಿ, ಅವರಿಗೆ ಬಹುಮಾನವನ್ನೂ ನೀಡಲಾಗುತ್ತದೆ.

 

4/6

ಈ ವಾರ ಫೈನಲಿಸ್ಟ್‌ಗಳಾದ ಅಶ್ವಿನಿ, ಕಾಕ್ರೋಚ್ ಸುಧಿ, ಸ್ಪಂದನ ಮತ್ತು ಮಾಳು ಹೊರತುಪಡಿಸಿ ಉಳಿದವರೆಲ್ಲರೂ ಎಲಿಮಿನೇಟ್ ಆಗಿದ್ದಾರೆ. ಈ ವಾರ ಫೈನಲಿಸ್ಟ್‌ಗಳಲ್ಲಿ ಯಾರು ವಿಜೇತರಾಗುತ್ತಾರೆ? ಎಲಿಮಿನೇಟ್ ಆದ ಸ್ಪರ್ಧಿಗಳಲ್ಲಿ ಯಾವ ಸ್ಪರ್ಧಿಗಳು ಮನೆಗೆ ಹೋಗುತ್ತಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.

 

5/6

ಹಾಗಂತ ಫಿನಾಲೆ ತಲುಪಿದವರಲ್ಲಿ ಹೊರಹೋಗದೆ ಇರಲಾರರು ಎನ್ನುವುದು ಕಷ್ಟ. ಇನ್ನೊಂದೆಡೆ ಈ ಎಲಿಮಿನೇಷನ್‌ ಪಟ್ಟಿಯಲ್ಲಿ ಮೂವರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಮಂಜು ಭಾಷಿಣಿ, ಸತೀಶ್‌, ಅಶ್ವಿನಿ ಎಸ್‌ ಎನ್‌ ಎಲಿಮಿನೇಟ್‌ ಆಗಬಹುದು ಎನ್ನಲಾಗುತ್ತಿದೆ. ಇವರ ಹೊರತಾಗಿ ಸ್ಪಂದನ, ಮಾಳು, ರಾಶಿಕಾ ಶೆಟ್ಟಿ ಸಹ ಹೊರ ಬೀಳುವ ಸಾಧ್ಯತೆ ಇದೆ. ಐವರಿಗೆ ಫಿನಾಲೆ ಟಿಕೆಟ್‌ ನೀಡಿದ್ದಷ್ಟೇ ಹೊರತಾಗಿ, ಎಲಿಮಿನೇಷನ್‌ನಿಂದ ಸೇಫ್‌ ಎಂದು ಎಲ್ಲೂ ಬಿಗ್‌ ಬಾಸ್‌ ಹೇಳಿಲ್ಲ. ಹೀಗಾಗಿ ಯಾರು ಹೊರಹೋಗುತ್ತಾರೆ ಎಂಬುದು ಸದ್ಯಕ್ಕೆ ಭಾರೀ ಕುತೂಹಲದ ಪ್ರಶ್ನೆಯಾಗಿದೆ. 

 

6/6

ಕಲರ್ಸ್ ಚಾನೆಲ್ ಕೂಡ ಈ ಸಂಚಿಕೆಯನ್ನು ಸುಮಾರು 6 ಗಂಟೆಗಳ ಕಾಲ ಪ್ರಸಾರ ಮಾಡುತ್ತಿದೆ. ಅಕ್ಟೋಬರ್ 18 ಮತ್ತು 19 ರಂದು ರಾತ್ರಿ 8 ರಿಂದ 11 ರವರೆಗೆ ಕಲರ್ಸ್ ಕನ್ನಡದಲ್ಲಿ ಕನ್ನಡಿಗರಿಗೆ ಉತ್ತಮ ಮನರಂಜನೆ ಸಿಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.