ಕೆಟ್ಟ ಸಮಯ ನಡೆಯುತ್ತಿದೆ ಎಂದು ಬೇಸತ್ತಿದ್ದರೆ ತಕ್ಷಣ ಈ ಕೆಲಸ ಮಾಡಿ ನೋಡಿ, ಎಲ್ಲಾ ಸಮಸ್ಯೆಗೂ ಸಿಗುತ್ತದೆ ಪರಿಹಾರ

Tue, 08 Feb 2022-1:15 pm,

 ಸಿಪ್ಪೆ ಇರುವ ತೆಂಗಿನಕಾಯಿಯನ್ನು 21 ಬಾರಿ ಒಡೆದು ದೇವಸ್ಥಾನದ ಹವನಕುಂಡಕ್ಕೆ ಅರ್ಪಿಸಬೇಕು. ಮಂಗಳವಾರ ಅಥವಾ ಶನಿವಾರದಂದು ಈ ಕೆಲಸ ಮಾಡಬೇಕು. 5 ಶನಿವಾರದಂದು ಹೀಗೆ ಮಾಡುವುದರಿಂದ ಜೀವನದಲ್ಲಿ ಎದುರಾದ ಸಮಸ್ಯೆಗಳು ಬಗೆಹರಿಯುತ್ತವೆ. 

ಹಿಟ್ಟಿನ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಅವುಗಳನ್ನು  ನದಿ ಅಥವಾ ಕೊಳದಲ್ಲಿರುವ ಮೀನು ಮತ್ತು ಆಮೆಗಳಿಗೆ ನೀಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ತಪ್ಪಿಸಬಹುದು.

ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಲು ಪ್ರಾರಂಭಿಸಿ. ಸಂಧ್ಯಾವಂದನೆಯೊಂದಿಗೆ ಪ್ರತಿದಿನ ಹನುಮಾನ್ ಚಾಲೀಸವನ್ನು ಓದಿ. ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಆರತಿ  ಬೆಳಗಿ. ಸತತ 5 ಮಂಗಳವಾರಗಳ ಕಾಲ  ಆಂಜನೇಯನಿಗೆ ಕಡಲೆಕಾಳನ್ನು ಅರ್ಪಿಸಿ. 

ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿ ಅದರಲ್ಲಿ ಗಂಗಾಜಲ ಮತ್ತು ಕೆಂಪು ಚಂದನವನ್ನು ಮಿಶ್ರಣ ಮಾಡಿ. ಇದಾದ ನಂತರ ಈ ನೀರನ್ನು ತಲೆಯ ಬಳಿ ಇಟ್ಟುಕೊಂಡು ಮಲಗಬೇಕು. ಬೆಳಿಗ್ಗೆ ಸ್ನಾನದ ನಂತರ ತುಳಸಿ ಗಿಡಕ್ಕೆ ಈ ನೀರನ್ನು ಅರ್ಪಿಸಬೇಕು . ಹೀಗೆ ಕೆಲವು ದಿನಗಳ ಕಾಲ ನಿರಂತರವಾಗಿ ಮಾಡುವುದರಿಂದ ಕ್ರಮೇಣ ಸಮಸ್ಯೆ ದೂರವಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link