ಟೊಮಾಟೊವನ್ನು ಹೀಗೆ ಬಳಸಿದರೆ... ಬಿಳಿ ಕೂದಲು ಕಪ್ಪಾಗಿ ಬುಡದಿಂದಲೂ ಗಟ್ಟಿಯಾದ ನೀಳ ಕೇಶರಾಶಿ ನಿಮ್ಮದಾಗುತ್ತೆ
ಬಿಳಿ ಕೂದಲು, ಕೂದಲು ಉದುರುವಿಕೆ, ಸ್ಪ್ಲಿಟ್ ಹೇರ್, ತಲೆಹೊಟ್ಟು, ನೆತ್ತಿಯ ಆರೋಗ್ಯ ಹೀಗೆ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಸಹ ಟೊಮಾಟೊ ಒಂದೇ ಪರಿಹಾರ ನೀಡಬಲ್ಲದು.
ಟೊಮಾಟೊದಲ್ಲಿ ವಿಟಮಿನ್ ಎ, ಬಿ, ಸಿ, ಇ ಸಮೃದ್ಧವಾಗಿದೆ. ಇದು ಕೂದಲು ಉದುರುವಿಕೆಯನ್ನು ನಿಯಂತ್ರಿಸಿ, ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಟೊಮಾಟೊ ಬಳಕೆಯಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗಿ, ಕೂದಲು ಮೃದುವಾಗಿ ಬಲಶಾಲಿಯಾಗಿ ಬೆಳೆಯುತ್ತದೆ.
ಟೊಮಾಟೊದಲ್ಲಿರುವ ಪೋಷಕಾಂಶಗಳು ಕೂದಲು ಬುಡದಿಂದಲೂ ನೈಸರ್ಗಿಕ ಬಣ್ಣವನ್ನು ಪಡೆಯಲು ಸಹಕಾರಿ ಆಗಿದೆ.
ಮೊದಲೇ ತಿಳಿಸಿದಂತೆ ಕೂದಲಿನ ಸರ್ವ ಸಮಸ್ಯೆಗೂ ಟೊಮಾಟೊ ಪರಿಹಾರವಾಗಿದೆ. ಇದಕ್ಕಾಗಿ, ಟೊಮಾಟೊದಲ್ಲಿ ಕೆಲ ಪದಾರ್ಥಗಳನ್ನು ಬೆರೆಸಿ ಬಳಸಬೇಕು.
ಅಲೋವೆರಾ ಕೂದಲಿಗೆ ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ ಮತ್ತು ಕೂದಲು ಒಡೆಯುವಿಕೆಯನ್ನು ತಡೆಯುತ್ತದೆ.
ಇದ್ದಿಲು ಪುಡಿ ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ಜೊತೆಗೆ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ, ಬೆಳ್ಳಗಾಗಿರುವ ಕೂದಲು ಮರಳಿ ನೈಸರ್ಗಿಕವಾಗಿ ಕಪ್ಪಾಗಲು ಪ್ರಯೋಜನಕಾರಿ ಆಗಿದೆ.
ಮೊದಲಿಗೆ ಟೊಮಾಟೊವನ್ನು ಸಣ್ಣದಾಗಿ ತುರಿದು ಜಾಲರಿ ಸಹಾಯದಿಂದ ರಸವನ್ನು ಬೇರ್ಪಡಿಸಿ. ಟೊಮಾಟೊ ರಸರಲ್ಲಿ ಅರ್ಧ ಸ್ಪೂನ್ ಅಲೋವೆರಾ ಮತ್ತು ಹರಳೆಣ್ಣೆ, ಒಂದು ಸ್ಪೂನ್ ಇದ್ದಿಲ ಪುಡಿ, ಒಂದು ಸಣ್ಣ ಶಾಂಪೂ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಈ ರೀತಿ ಟೊಮಾಟೊ ಪ್ಯಾಕ್ ತಯಾರಿಸಿ ನಿಯಮಿತವಾಗಿ ಬಳಸುತ್ತಾ ಬಂದರೆ ಕೂದಲಿನ ಎಲ್ಲಾ ಸಮಸ್ಯೆಗಳಿಂದಲೂ ಪರಿಹಾರ ದೊರೆಯುತ್ತದೆ. ಜೊತೆಗೆ ದಷ್ಟಪುಷ್ಟವಾದ ಕಾಂತಿಯುತ ಕಪ್ಪು ನೀಳ ಕೇಶರಾಶಿಯನ್ನು ನಿಮ್ಮದಾಗಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.