RCB franchise official arrested: 18 ದೀರ್ಘ ಋತುಗಳ ನಂತರ ಆರ್‌ಸಿಬಿ ಅಂತಿಮವಾಗಿ ಐಪಿಎಲ್ ಗೆದ್ದಿತು. ಆದರೆ ಈ ಸಂಭ್ರಮ ಚಿರಕಾಲ ಇರಬೇಕಾಗಿದ್ದರೂ... ಇದ್ದದ್ದು ಹೆಚ್ಚು-ಕಡಿಮೆ 18 ಗಂಟೆಯಷ್ಟೆ! 18 ವರ್ಷಗಳ ಕನಸಿನ ಸಂಭ್ರಮಕ್ಕೆ ಬೆಂಗಳೂರಿನಲ್ಲಿ ನಡೆದ ದುರಂತ ಶೋಕದ ಛಾಯೆ ಆವರಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
18 ದೀರ್ಘ ಋತುಗಳ ನಂತರ ಆರ್‌ಸಿಬಿ ಅಂತಿಮವಾಗಿ ಐಪಿಎಲ್ ಗೆದ್ದಿತು. ಆದರೆ ಈ ಸಂಭ್ರಮ ಚಿರಕಾಲ ಇರಬೇಕಾಗಿದ್ದರೂ... ಇದ್ದದ್ದು ಹೆಚ್ಚು-ಕಡಿಮೆ 18 ಗಂಟೆಯಷ್ಟೆ! 18 ವರ್ಷಗಳ ಕನಸಿನ ಸಂಭ್ರಮಕ್ಕೆ ಬೆಂಗಳೂರಿನಲ್ಲಿ ನಡೆದ ದುರಂತ ಶೋಕದ ಛಾಯೆ ಆವರಿಸಿದೆ. ಈ ಬೆನ್ನಲ್ಲೇ ಬೆಂಗಳೂರು ಫ್ರಾಂಚೈಸಿಯ ಕೆಲವೊಂದು ಅಧಿಕಾರಿಗಳನ್ನು ತನಿಖೆಗೊಳಪಡಿಸಲಾಗಿದೆ
ಗುರುವಾರ (ಜೂನ್ 5, 2025) ತಡರಾತ್ರಿ ಬೆಂಗಳೂರು ನಗರ ಪೊಲೀಸರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಉನ್ನತ ಅಧಿಕಾರಿ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮೂವರನ್ನು ಬಂಧಿಸಿದ್ದಾರೆ.
ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಐತಿಹಾಸಿಕ ದಿನವಾಗಬೇಕಿದ್ದ ಜೂನ್ 3, ಕರಾಳ ದಿನವಾಗಿ ಬದಲಾಗಿದೆ. ವಿಜಯೋತ್ಸವದ ಸಂಭ್ರಮದಲ್ಲಿ ಭಾಗಿಯಾಗಿದ್ದ 11 ಅಭಿಮಾನಿಗಳು ಮಸಣ ಸೇರಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ, ಬೆಂಗಳೂರು ಫ್ರಾಂಚೈಸಿ ಟ್ವಿಟರ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ಎದುರಿಸುತ್ತಿದ್ದಾರೆ.
"ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ, ತಂಡದ ಗೆಲುವಿಗಾಗಿ ಅಭಿಮಾನಿಗಳು ಸಾಯಬೇಕಾಯಿತು. 18 ಸೀಸನ್, ಜೆರ್ಸಿ ಸಂಖ್ಯೆ18, 11 ಸಾವು... ಈ ಗೆಲುವು ಶಾಪಗ್ರಸ್ತವಾಗಲಿದೆ. ದೇವರು ಕೂಡ ಈ ಗೆಲುವು ಸಂಭವಿಸಬೇಕೆಂದು ಬಯಸಲಿಲ್ಲವೇನೋ" ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ತಮ್ಮ ಹೀರೋಗಳನ್ನು ನೋಡಲು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಆಗಮಿಸಿದ ಸಾವಿರಾರು ಅಭಿಮಾನಿಗಳು ಹಿಂತಿರುಗಿದ್ದು ಮಡುಗಟ್ಟಿದ ದುಃಖದಿಂದ. ಸದ್ಯ ಈ ದುರಂತದ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕಿದೆ.
"ವಿರಾಟ್ ಕೊಹ್ಲಿ ಎಂದಿಗೂ ತನ್ನ ಮಕ್ಕಳ ಮುಖಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವುದಿಲ್ಲ. ಆದರೆ ನೀವು ನಿಮ್ಮ ಮಕ್ಕಳನ್ನು ಈ ಹುಚ್ಚು ಜನಸಂದಣಿಗೆ ಕರೆತಂದಿದ್ದೀರಾ? ವಿರಾಟ್‌ಗೆ ಅಭಿಮಾನಿ ಸಂಸ್ಕೃತಿಯ ಹುಚ್ಚು ತಿಳಿದಿದೆ. ಅವನು ತನ್ನ ಮಕ್ಕಳನ್ನು ಅದರಿಂದ ರಕ್ಷಿಸುತ್ತಾನೆ. ಆದರೆ ಅಭಿಮಾನಿಗಳು..." ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.
ಇನ್ನೊಂದೆಡೆ ಬಿಸಿಸಿಐ "ಇದು ನಮ್ಮ ಕಾರ್ಯಕ್ರಮವಾಗಿರಲಿಲ್ಲ" ಎಂದು ಹೇಳಿಕೊಂಡಿದೆ. ಇದರ ನಡುವೆ ಪೊಲೀಸರು ಜನಸಮೂಹವನ್ನು ದೂಷಿಸಿದರೆ, ಜನಸಮೂಹ ಪೊಲೀಸರನ್ನು ದೂಷಿಸುತ್ತಿದೆ. ಆದರೆ ಇದೆಲ್ಲದರ ಮಧ್ಯದಲ್ಲಿ, 11 ಕುಟುಂಬಗಳ ನೋವು ಕೇಳುವವರು ಯಾರು? ಎಂಬುದೇ ನೋವಿನ ಸಂಗತಿ
ಈಗ, ಸಾಮಾಜಿಕ ಮಾಧ್ಯಮದಲ್ಲಿ ಬಿಸಿಸಿಐ ಮೇಲೆ ಆರ್‌ಸಿಬಿಯನ್ನು ನಿಷೇಧಿಸಬೇಕೆಂದು ಒತ್ತಡ ಹಾಕಲಾಗುತ್ತಿದೆ. "ಇಂತಹ ಹುಚ್ಚು ಅಭಿಮಾನ ಇರುವವರೆಗೆ ಇಂತಹ ಘಟನೆಗಳು ಮುಂದುವರೆಯುತ್ತವೆ. ಆರ್‌ಸಿಬಿಯನ್ನು ನಿಷೇಧಿಸಿ" ಎಂದು ಬರೆಯುತ್ತಿದ್ದಾರೆ.
"ಆರ್‌ಸಿಬಿ ಗೆದ್ದರೂ ಸೋತರೂ ಪರವಾಗಿಲ್ಲ, ಅವರ ಅಭಿಮಾನಿಗಳಿಗೆ ಮಾತ್ರ ಕ್ರೇಜ್ ತರುತ್ತದೆ. ಕೆಲವರು ಇದನ್ನು ಕ್ರಿಕೆಟ್ ತಂಡವಲ್ಲ, ಒಂದು ಪಂಥ ಎಂದೂ ಕರೆಯುತ್ತಿದ್ದಾರೆ. ಇದು ಇನ್ನು ಮುಂದೆ ಉತ್ಸಾಹವಲ್ಲ; ಇದು ಅವ್ಯವಸ್ಥೆ. ಪಂದ್ಯಗಳು ಗಲಭೆಗಳಂತೆ ಭಾಸವಾಗುತ್ತವೆ, ಆಚರಣೆಗಳಂತೆ ಅಲ್ಲ" ಎಂದು ಒಬ್ಬರು ಪೋಸ್ಟ್ ಮಾಡಿದ್ದಾರೆ
ಮತ್ತೊಬ್ಬರು, "ಸಿಎಸ್‌ಕೆ ಅಥವಾ ಎಂಐ ಸೋತರೂ, ಈ ರೀತಿಯ ದುರಂತ ಎಂದಿಗೂ ಸಂಭವಿಸುವುದಿಲ್ಲ. ಕ್ರಿಕೆಟ್ ಮತ್ತೆ ಅಪರಾಧದ ಸ್ಥಳವಾಗುವ ಮೊದಲು ಆರ್‌ಸಿಬಿಯನ್ನು ನಿಷೇಧಿಸಬೇಕು" ಎಂದು ಹೇಳಿದ್ದಾರೆ