ಹೊರ ಬಂದೇ ಬಿಟ್ರು ತ್ರಿವಿಕ್ರಮ್ - ಚೈತ್ರಾ.. ಬಿಗ್ ಬಾಸ್ 11 ರಲ್ಲೂ ಮರುಕಳಿಸಿತು ಸೀಸನ್ 10 ರಲ್ಲಿ ನಡೆದಿದ್ದ ಆ ಘಟನೆ! ಮನೆಮಂದಿಗೆ ರಾತ್ರೋ ರಾತ್ರಿ ಬಿಗ್ ಶಾಕ್!
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ 11ನೇ ವಾರ ಒಟ್ಟು 8 ಜನರು ನಾಮಿನೇಟ್ ಆಗಿದ್ದಾರೆ. ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಸಹ ಹೆಚ್ಚಾಗಿದೆ.
ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮಿನೇಟ್ ಆಗಿದ್ದಾರೆ.
ಚೈತ್ರಾ ಹಾಗೂ ತ್ರಿವಿಕ್ರಮ್ ಈ ವಾರ ಕಳಪೆ ಪಟ್ಟ ಪಡೆದು ಜೈಲುವಾಸದಲ್ಲಿದ್ದಾರೆ. ಈ ವೇಳೆ ಇಬ್ಬರೂ ಸೇರಿ ಬಿಗ್ ಪ್ಲಾನ್ ಮಾಡಿದ್ದಾರೆ.
ಈ ವಾರ ಗೋಲ್ಡ್ ಸುರೇಶ್ ಮನೆಯ ಕ್ಯಾಪ್ಟನ್ ಆಗಿದ್ದು, ಚೈತ್ರಾ ಮತ್ತು ತ್ರಿವಿಕ್ರಮ್ ಮಾಡಿದ ಈ ಕೆಲಸ ದೊಡ್ಡ ಶಾಕ್ ನೀಡಿದೆ.
ಚೈತ್ರಾ ಮತ್ತು ತ್ರಿವಿಕ್ರಮ್ ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ತಮಗೆ ಕಳಪೆ ಕೊಟ್ಟ ತಪ್ಪಗೆ ಮನೆಗೆ ಏನಾದರೂ ಶಿಕ್ಷೆ ಕೊಡಬೇಕು. ನೆಮ್ಮದಿಯಿಂದ ಮಾತ್ರ ಇರೋದಕ್ಕೆ ಬಿಡಲ್ಲ ಎಂದು ಚೈತ್ರಾ ಹೇಳಿದ್ದಾರೆ.
ಚೈತ್ರಾ ಅವರ ಈ ಮಾತಿಗೆ ತ್ರಿವಿಕ್ರಮ್ ಕೂಡ ಸಾಥ್ ನೀಡಿದ್ದಾರೆ. ಆಗಿದ್ದಾಗಲಿ ಬಾ ಹೊರಗೆ ಹೋಗೋಣ ಎಂದು ಜೈಲಿನಿಂದ ಆಚೆ ಬಂದಿದ್ದಾರೆ. ಇಬ್ಬರೂ ಕಂಬದ ಮಧ್ಯೆ ಹಾದು ಆಚೆ ಬಂದು ಕುಳಿತಿದ್ದಾರೆ.
ಬಿಗ್ ಬಾಸ್ ಮನೆಯ ಎಲ್ಲ ಕಂಟೆಸ್ಟಂಟ್‌ಗಳು ಮಲಗಿದ ಸಮಯದಲ್ಲಿ ಚೈತ್ರಾ ಮತ್ತು ತ್ರಿವಿಕ್ರಮ್ ಜೈಲಿನಿಂದ ಹೊರಗೆ ಬಂದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿಯೂ ಇಂಥದ್ದೇ ಘಟನೆ ನಡೆದಿತ್ತು. ವರ್ತೂರು ಸಂತೋಷ್ ಏನಾದರೂ ಹೊಸ ಇತಿಹಾಸ ನಿರ್ಮಿಸಲೇ ಬೇಕು ಎಂದು ಜೈಲಿನಿಂದ ಆಚೆ ಬಂದು ಕುಳಿತಿದ್ದರು.
ವರ್ತೂರು ಸಂತೋಷ್ ಅವರಿಗೆ ಆಚೆ ಬರಲು ಸ್ಫೂರ್ತಿ ತುಂಬಿದ್ದೇ ತುಕಾಲಿ ಸಂತು ಆಗಿದ್ದರು. ಕೊನೆಗೆ ವರ್ತೂರು ಸಂತೋಷ್ ಅವರಿಗೆ ಮತ್ತೊಂದು ದಿನ ಜೈಲು ಶಿಕ್ಷೆ ನೀಡಲಾಗಿತ್ತು.