ಆಭರಣ ರಫ್ತಿಗೆ ಟ್ರಂಪ್‌ ಅಡ್ಡಗಾಲು..! ಚಿನ್ನದ ಬೆಲೆ ಕಡಿಮೆಯಾದ್ರೂ ಖರೀದಿಸೋದು ಅಸಾಧ್ಯ,

Trump Tariffs Hit Indian Jewellery Exports: ಅಕ್ಟೋಬರ್ ತಿಂಗಳಲ್ಲಿ ಭಾರತೀಯ ರತ್ನ–ಆಭರಣ ರಫ್ತಿಗೆ ಭಾರೀ ಹೊಡೆತ ಬಿದ್ದಿದೆ. ಚಿನ್ನದ ಬೆಲೆ ಏರಿಕೆ ಮತ್ತು ಟ್ರಂಪ್ ಸುಂಕಗಳಿಂದ ಜಾಗತಿಕ ಬೇಡಿಕೆ ಕುಸಿದು, ಆಭರಣ ವಲಯಕ್ಕೆ ದೊಡ್ಡ ಶಾಕ್‌ ಬಂದಿದೆ.
 

1 /6

Trump Tariffs Hit Indian Jewellery Exports: ಅಕ್ಟೋಬರ್ ತಿಂಗಳಲ್ಲಿ ಭಾರತೀಯ ರತ್ನಗಳು ಮತ್ತು ಆಭರಣ ರಫ್ತು ದಾರಿತಪ್ಪಿದೆ. ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿದ ಪರಿಣಾಮ ಮತ್ತು ಅಮೆರಿಕದ ಟ್ರಂಪ್ ವಿಧಿಸಿದ ಹೊಸ ಸುಂಕಗಳ ಹೊಡೆತದಿಂದ ದೇಶದ ಆಭರಣ ರಫ್ತು ಶೇ.31 ರಷ್ಟು ಕುಸಿದಿದೆ. ಇದರಿಂದ ಆಭರಣ ಪ್ರಿಯರಿಗೆ ಮತ್ತು ಕೈಗಾರಿಕೆಗೆ ದೊಡ್ಡ ಆತಂಕ ಉಂಟಾಗಿದೆ.  

2 /6

ಜಿಎಜಿಇಪಿಸಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ 2025ರಲ್ಲಿ ಭಾರತದ ರತ್ನ–ಆಭರಣ ರಫ್ತು $2168.05 ಮಿಲಿಯನ್‌ (₹19,172 ಕೋಟಿ) ಆಗಿದ್ದು, ಕಳೆದ ವರ್ಷದ ಇದೇ ಅವಧಿಯ $3122 ಮಿಲಿಯನ್‌ಗಿಂತ ದೊಡ್ಡ ಕುಸಿತ ಕಂಡಿದೆ. ಹಬ್ಬದ ಮುನ್ನವೇ ಬೇಡಿಕೆ ಪೂರೈಕೆಗೊಂಡಿದ್ದರಿಂದ ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣ ಕಡಿಮೆಯಾಗಿದೆ ಎಂದು ಜಿಎಜಿಇಪಿಸಿ ಅಧ್ಯಕ್ಷ ಕಿರಿತ್ ಬನ್ಸಾಲಿ ತಿಳಿಸಿದ್ದಾರೆ.  

3 /6

ವಜ್ರ ರಫ್ತು ಈ ಬಾರಿ ಹೆಚ್ಚು ಕುಸಿತ ಕಂಡಿದೆ. ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳ ರಫ್ತು ಶೇ.26.97 ರಷ್ಟು ಕಡಿಮೆಯಾಗಿ $1,025.99 ಮಿಲಿಯನ್‌ಗೆ ಇಳಿದಿದೆ. ಲ್ಯಾಬ್‌ನಲ್ಲಿ ಬೆಳೆದ ವಜ್ರಗಳ ರಫ್ತು ಕೂಡ ಶೇ.34.90 ರಷ್ಟು ಕುಸಿತವಾಗಿದೆ. ವಜ್ರ ವಲಯದಲ್ಲಿ ಜಾಗತಿಕ ಬೇಡಿಕೆ ಕುಂದಿರುವುದು ಮತ್ತು ಅಮೆರಿಕ ಮಾರುಕಟ್ಟೆಯ ನಿಧಾನಗತಿಯೇ ಪ್ರಮುಖ ಕಾರಣಗಳೆಂದು ತಜ್ಞರು ಹೇಳಿದ್ದಾರೆ.  

4 /6

ಚಿನ್ನದ ಆಭರಣ ರಫ್ತಿನಲ್ಲೂ ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ. ಅಕ್ಟೋಬರ್‌ನಲ್ಲಿ ಚಿನ್ನದ ಆಭರಣ ರಫ್ತು ಶೇ.28.4 ರಷ್ಟು ಇಳಿದು $850 ಮಿಲಿಯನ್‌ಗೆ ತಲುಪಿದೆ. ಚಿನ್ನದ ಬೆಲೆ ಜಾಗತಿಕವಾಗಿ ಹೆಚ್ಚಾಗಿರುವುದರಿಂದ ವಿದೇಶಿ ಖರೀದಿದಾರರು ಭಾರತೀಯ ಆಭರಣದಿಂದ ದೂರ ಉಳಿಯುತ್ತಿರುವುದು ಕಂಡುಬರುತ್ತಿದೆ.  

5 /6

ಬಣ್ಣದ ರತ್ನಗಳು ಮತ್ತು ಬೆಳ್ಳಿ ಆಭರಣಗಳ ರಫ್ತೂ ಕುಸಿತಕ್ಕೊಳಗಾಗಿವೆ. ಏಪ್ರಿಲ್‌–ಅಕ್ಟೋಬರ್ ಅವಧಿಯಲ್ಲಿ ಬಣ್ಣದ ರತ್ನ ರಫ್ತು ಶೇ.3.21ರಷ್ಟು ಇಳಿದಿದ್ದು, ಅಕ್ಟೋಬರ್‌ನಲ್ಲಿ ಬೆಳ್ಳಿ ಆಭರಣ ರಫ್ತು ಶೇ.16ರಷ್ಟು ಕುಸಿತ ಕಂಡಿದೆ. ಇದು ಆಭರಣ ವಲಯದ ಒಟ್ಟಾರೆ ಚಟುವಟಿಕೆಯಲ್ಲಿ ಮಂದಗತಿಯನ್ನು ತೋರಿಸುತ್ತದೆ.  

6 /6

ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಬೇಡಿಕೆಯ ಪರಿಣಾಮ ರಫ್ತು ಪುನಃ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಉದ್ಯಮಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಚೀನಾ ಮಾರುಕಟ್ಟೆಯ ಚೇತರಿಕೆಯೂ ರಫ್ತಿಗೆ ನೆರವಾಗಬಹುದು ಎನ್ನಲಾಗಿದೆ.