ತುಳಸಿಗೆ ಧಾರ್ಮಿಕ ಮಹತ್ವವಷ್ಟೇ ಅಲ್ಲ, ಆಯುರ್ವೇದದಲ್ಲಿಯೂ ಇದನ್ನು ಆರೋಗ್ಯಕ್ಕೆ ವರದಾನವೆಂದು ಪರಿಗಣಿಸಲಾಗಿದೆ.
Easy Way to Lower Blood Sugar: ಮಧುಮೇಹ ವೇಗವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದಕ್ಕೆ ಕೆಟ್ಟ ಜೀವನಶೈಲಿಯೇ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ.
1/8ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದನ್ನು ಕಡಿಮೆ ಮಾಡಲು ಔಷಧಿಗಳು ಮಾತ್ರವಲ್ಲದೆ ಅನೇಕ ಆಯುರ್ವೇದ ಪರಿಹಾರಗಳು ಸಹ ಸಹಾಯ ಮಾಡುತ್ತವೆ. ತುಳಸಿ ಶುಗರ್ ನಿಯಂತ್ರಿಸುವ ಆಯುರ್ವೇದ ಗಿಡಮೂಲಿಕೆಗಳಲ್ಲಿ ಒಂದಾಗಿದೆ.
2/8ತುಳಸಿ ಎಲೆಗಳು ಮಧುಮೇಹಿಗಳಲ್ಲಿ ಶುಗರ್ ನಿಯಂತ್ರಿಸಲು ಬಹಳ ಪರಿಣಾಮಕಾರಿ. ತುಳಸಿ ಎಲೆ ಚಹಾ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.
3/8ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಅಗಿದು ತಿನ್ನಬಹುದು. ಇದರಿಂದಲೂ ಬ್ಲಡ್ ಶುಗರ್ ಕಂಟ್ರೋಲ್ ನಲ್ಲಿರುತ್ತದೆ. ಪ್ರತಿನಿತ್ಯ ತಿನ್ನುತ್ತಿದ್ದರಂತೂ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.
4/8ತುಳಸಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಅನೇಕ ಸಂಶೋಧನೆಗಳಲ್ಲಿ ಬಹಿರಂಗವಾಗಿದೆ. ತುಳಸಿ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು, ಉರಿಯೂತ ನಿವಾರಕ, ಫೈಬರ್ ಮತ್ತು ಮಧುಮೇಹ ವಿರೋಧಿ ಗುಣಗಳು ಕಂಡುಬರುತ್ತವೆ.
5/8ತುಳಸಿ ಎಲೆಗಳು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತವೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ತುಳಸಿ ಎಲೆಗಳನ್ನು ಅಗಿಯುವುದರಿಂದ ಮಧುಮೇಹ, ಕೆಮ್ಮು, ಆಸ್ತಮಾ, ಶೀತ ಮತ್ತು ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
6/8ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ಹೆಚ್ಚಾದಾಗ ತುಳಸಿ ಎಲೆಯನ್ನು ಚೆನ್ನಾಗಿ ಕಿವುಚಿ ಅದರ ವಾಸನೆ ತೆಗೆದುಕೊಳ್ಳಬಹುದು. ಇದರಿಂದಲೂ ಶುಗರ್ ನಿಯಂತ್ರಣಕ್ಕೆ ಬರುವುದು. ಅಲ್ಲದೇ ತುಳಸಿ ನೀರನ್ನು ಸಹ ಕುಡಿಯಬಹುದು.
7/8ತುಳಸಿ ಎಲೆಗಳನ್ನು ಚೆನ್ನಾಗಿ ಕಿವುಚಿ ಮೂಸಿದರೆ ಸಾಕು ಬ್ಲಡ್ ಶುಗರ್ ಕೂಡಲೇ ನಿಯಂತ್ರಣಕ್ಕೆ ಬರುತ್ತದೆ. ಇದು ಶುಗರ್ ಮಟ್ಟವನ್ನು ತಕ್ಷಣವೇ ನಾರ್ಮಲ್ ತರಲುಸಹಾಯಕವಾಗಿದೆ.
8/8ಗಮನಿಸಿ: ಈ ಮೇಲಿನ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಸಂಗತಿಗಳನ್ನು ಆಧರಿಸಿದೆ. ಯಾವುದೇ ಅಂಶಗಳನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯುವುದು ಅವಶ್ಯಕ. Z Kannada News ಯಾವ ರೀತಿಯಲ್ಲೂ ಹೊಣೆಯಲ್ಲ.