Tulsi Plant Remedies: ತುಳಸಿ ವೃಂದಾವನದ ಮೇಲೆ ಇವುಗಳಲ್ಲಿ ಯಾವುದಾದರೊಂದು ಚಿಹ್ನೆ ಬಿಡಿಸಿ... ಚಮತ್ಕಾರ ನೋಡಿ!
1. ತುಳಸಿ ಪಾತ್ರೆಯ ಮೇಲೆ ಕುಂಕುಮ-ಚಂದನದಿಂದ ತಿಲಕವನ್ನು ಹಚ್ಚುವುದು ಅತ್ಯಂತ ಮಂಗಳಕರವೆಂದು ಜ್ಯೋತಿಷಿಗಳು ಹೇಳುತ್ತಾರೆ. ತುಳಸಿ ಜೊತೆಗೆ, ಮಡಕೆಯ ಮೇಲೆ ಕೆಲ ಚಿಹ್ನೆಗಳು ಬಿಡಿಸುವುದರಿಂದ ಲಕ್ಷ್ಮಿ ದೇವಿಗೆ ಪ್ರಸನ್ನಳಾಗುತ್ತಾಳೆ ಮತ್ತು ಭಕ್ತಾದಿಗಳ ಮೇಲೆ ತನ್ನ ಕೃಪಾವೃಷ್ಟಿಯನ್ನೇ ಸುರಿಸುತ್ತಾಳೆ ಎನ್ನಲಾಗುತ್ತದೆ. ಮಡಕೆಯ ಮೇಲೆ ಕುಂಕುಮ ಚಂದನದ ತಿಲಕವನ್ನು ಅನ್ವಯಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸುಖ ಸಮೃದ್ಧಿ ಹರಿದು ಬರುತ್ತದೆ ಮತ್ತು ಮನೆಗೆ ಶ್ರೆಯೋಭಿವೃದ್ಧಿ ತರುತ್ತದೆ ಎನ್ನಲಾಗುತ್ತದೆ.
2. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿ ವೃಂದಾವನದ ಮೇಲೆ ಚಕ್ರ ಬಿಡಿಸುವುದರಿಂದ ವ್ಯಕ್ತಿಗೆ ಆರ್ಥಿಕ ಲಾಭ ದೊರೆಯುತ್ತದೆ ಮತ್ತು ದುರಾದೃಷ್ಟ ನಾಶವಾಗಿ ಅದೃಷ್ಟ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ತುಳಸಿಯ ಕುಂಡದ ಮೇಲೆ ಚಕ್ರ ರಚಿಸಿದರೆ, ಆರ್ಥಿಕ ಭಾಗ್ಯ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳು ದೂರಾಗುತ್ತವೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿ ವ್ಯಕ್ತಿಯ ಮನದಲ್ಲಿ ಶಾಂತಿ ನೆಲೆಸುತ್ತದೆ ಎನ್ನಲಾಗುತ್ತದೆ.
3. ಶಾಸ್ತ್ರಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಶಂಖ ಉದ್ಭವಿಸಿತ್ತು ಎನ್ನಲಾಗುತ್ತದೆ. ಇದನ್ನು ತಾಯಿ ಲಕ್ಷ್ಮಿಯ ಸಹೋದರ ಎಂದು ಕರೆಯಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಶಂಖವನ್ನು ಸಹ ಬಳಸಲಾಗುತ್ತದೆ. ತುಳಸಿ ವೃಂದಾವನದ ಮೇಲೆ ಶಂಖದ ಚಿತ್ತಾರ ರಚಿಸುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶಂಖದ ಶಬ್ದ ಇರುವ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ. ಇದರೊಂದಿಗೆ ಶ್ರೀವಿಷ್ಣು ತಾಯಿ ಲಕ್ಷ್ಮಿಯ ಜೊತೆಗೂಡಿ ವ್ಯಕ್ತಿಯ ಭವಿಷ್ಯವನ್ನು ಉತ್ತಮಗೊಳಿಸುತ್ತಾನೆ.
4. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಳಸಿ ಗಿಡದ ನಿಯಮಿತ ಪೂಜೆಯ ಜೊತೆಗೆ, ಮಡಕೆಯ ಮೇಲೆ ಸ್ವಸ್ತಿಕ ಚಿಹ್ನೆಯನ್ನು ರಚಿಸಿದರೆ, ತಾಯಿ ಲಕ್ಷ್ಮಿ ದೇವಿಯ ಕ್ರುಪಾಶಿರ್ವಾದ ಮನೆಯ ಮೇಲಿರುತ್ತದೆ. ಮಡಕೆಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಮಾಡುವ ಮೂಲಕ, ವಿಷ್ಣು ಹಾಗೂ ತಾಯಿ ಲಕ್ಷ್ಮಿ ಪ್ರಸನ್ನರಾಗುತ್ತಾರೆ ಎಂಬುದು ಧಾರ್ಮಿಕ ನಂಬಿಕೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)