ಈ ದಿನದಂದು ತುಳಸಿ ಗಿಡ ನೆಟ್ಟರೇ ಒಲಿಯುವುದು ಅದೃಷ್ಟ! ಸದಾ ನೆಲೆಸುವಳು ಲಕ್ಷ್ಮಿ..

Written ByDeepa A Reddy
Published: Dec 19, 2025, 10:28 AM IST|Updated: Dec 19, 2025, 10:28 AM IST

Tulsi plant: ತುಳಸಿ ಗಿಡವನ್ನು ಈ ರೀತಿ ಪೂಜಿಸುವುದರಿಂದ, ಲಕ್ಷ್ಮಿಯ ಆಶಿರ್ವಾದ ನಿಮ್ಮ ಮೇಲಿರುತ್ತದೆ. 
 

1/10

Tulsi plant: ಬಹುತೇಕ ಪ್ರತಿಯೊಂದು ಹಿಂದೂ ಮನೆಯಲ್ಲೂ ತುಳಸಿ ಗಿಡವನ್ನು ಕಾಣಬಹುದು. ಈ ಗಿಡವನ್ನು ಪೂಜಿಸುವುದರಿಂದ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎನ್ನುವುದು ನಂಬಿಕೆ.  

2/10

ತುಳಸಿ ಗಿಡವನ್ನು ಶ್ರೀ ಮಹಾಲಕ್ಷ್ಮಿಯ ವಾಸಸ್ಥಾನ ಎಂದೂ ಹೇಳಲಾಗುತ್ತದೆ. ಪ್ರತಿದಿನ ದೀಪ ಪೂಜೆ ಮಾಡುವುದರಿಂದ ದೇವಿಯ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರುತ್ತದೆ ಎಂದು ಭಕ್ತರು ನಂಬುತ್ತಾರೆ.   

3/10

ವಾಸ್ತು ಪ್ರಕಾರ, ಗುರುವಾರದಂದು ಮನೆಯಲ್ಲಿ ತುಳಸಿ ಗಿಡ ನೆಡುವುದು ಶುಭವೆಂದು ಪರಿಗಣಿಸಲಾಗುತ್ತದೆ.   

4/10

ಗುರುವಾರವನ್ನು ಲಕ್ಷ್ಮಿವರಂ ಎಂದೂ ಕರೆಯಲಾಗುತ್ತದೆ. ತುಳಸಿ ಗಿಡವನ್ನು ಲಕ್ಷ್ಮಿ ದೇವಿಯ ವಾಸಸ್ಥಾನ ಎಂದೂ ಕೂ ಸಹ ಹೇಳಲಾಗುತ್ತದೆ.   

5/10

ಗುರುವಾರದಂದು ತುಳಸಿ ಗಿಡ ನೆಡುವುದು ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸಿದಂತೆ ಎಂದು ಜ್ಯೋತಿಷ್ಯದ ಪ್ರಕಾರ ನಂಬಲಾಗುತ್ತದೆ.   

6/10

ಶುಕ್ರವಾರದಂದು ಸಹ ತುಳಸಿ ಗಿಡವನ್ನು ನೆಡಬಹುದು. ಆದರೆ, ಬೆಳಗ್ಗೆ ಮಾತ್ರ  ಈ ಗಿಡವನ್ನು ನೆಡಬೇಕು ಎಂದು ಹೇಳಲಾಗುತ್ತದೆ.   

7/10

ತುಳಸಿ ಗಿಡಗಳನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಮಾತ್ರ ನೆಡಬೇಕು ಈ ದಿಕ್ಕುಗಳನ್ನು ನೆಡುವುದರಿಂದ ಮನೆಯಲ್ಲಿ ಸಂಪತ್ತು, ಐಶ್ವರ್ಯ ಹಾಗೂ ಲಕ್ಷ್ಮಿ ದೇವಿಯ ಆಶಿರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ.   

8/10

ತುಳಸಿ ಗಿಡಕ್ಕೆ ನೀರನ್ನು ಅರ್ಪಿಸುವ ವಿಚಾರದಲ್ಲಿಯೂ ಎಚ್ಚರದಿಂದಿರಬೇಕಾಗುತ್ತದೆ. ಬೆಳಗ್ಗಿನ ಜಾವ ಮಾತ್ರ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.  

9/10

ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಮುಟ್ಟಬಾರದು ಅಥವಾ ನೀರನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.  

10/10

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಇದನ್ನೂ ಜೀ ಕನ್ನಡ ನ್ಯೂಸ್‌ ಖಚಿತ ಪಡಿಸುವುದಿಲ್ಲ)