ಯುಗಾದಿ ಭವಿಷ್ಯ 2025: ಬೇವು-ಬೆಲ್ಲದ ಹಬ್ಬ ದ್ವಾದಶ ರಾಶಿಗಳಿಗೆ ಏನು ಫಲ ನೀಡಲಿದೆ... ಯಾರಿಗೆ ಸಿಹಿ-ಯಾರಿಗೆ ಕಹಿ

Ugadi Bhavishya: ಹಿಂದೂ ಧರ್ಮದಲ್ಲಿ, ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 30, 2025ರ ಭಾನುವಾರ ಯುಗಾದಿ ಹಬ್ಬದ ಆಚರಣೆ ಇರಲಿದೆ. ಹಿಂದೂ ಹೊಸ ವರ್ಷವು ಯಾರ ಬಾಳಲ್ಲಿ ಸಿಹಿ ತರಲಿದೆ. ಯಾರಿಗೆ ಕಹಿ ಉಣಿಸಲಿದೆ ತಿಳಿಯಿರಿ. 

Ugadi Horoscope: ಹಿಂದೂ ಪಂಚಾಂಗದ ಪ್ರಕಾರ, ಯುಗಾದಿ ಹಬ್ಬವನ್ನು ನೂತನ ನಾಮ ಸಂವತ್ಸರ, ಹಿಂದೂ ಹೊಸವರ್ಷವಾಗಿ ಆಚರಿಸಲಾಗುತ್ತದೆ. ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲ ತಿನ್ನುವ ಪ್ರತೀತಿ ಇದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /13

ಹಿಂದೂ ಪಂಚಾಂಗದ ಪ್ರಕಾರ, 30 ಮಾರ್ಚ್ 2025ರಂದು ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭವಾಗಲಿದೆ. ಹಿಂದೂಗಳ ಹೊಸ ವರ್ಷ ಎಂದು ಪರಿಗಣಿಸಲಾಗಿರುವ ಯುಗಾದಿ ಹಬ್ಬದ ಸಂದರ್ಭದಲ್ಲೇ ಕರ್ಮಫಲದಾತ ಶನಿ ಮಹಾತ್ಮ ಸಂಚರಿಸಲಿದ್ದಾರೆ. 2025ರ ಯುಗಾದಿ ಹಬ್ಬದಿಂದ ಯಾರ ಬಾಳಲ್ಲಿ ಸಿಹಿ ಹೆಚ್ಚಾಗಲಿದೆ. ಯಾರಿಗೆ ಕಹಿ ಇರಲಿದೆ ಇಲ್ಲಿದೆ ಯುಗಾದಿ 2025ರ ದ್ವಾದಶ ರಾಶಿಗಳ ಫಲಾಫಲ. 

2 /13

ಗುರುವು ವೃಷಭ ರಾಶಿಯಲ್ಲಿ ಸಂಚರಿಸುವಾಗ ಶುಭದಾಯಕನಾಗಿದ್ದು ಆರೋಗ್ಯ ಸುಧಾರಣೆ,  ಕೀರ್ತಿ ವೃದ್ಧಿ, ವ್ಯಾಪಾರ, ವ್ಯವಹಾರಗಳಲ್ಲಿ ಧನಲಾಭ, ಧರ್ಮ ಕಾರ್ಯಾಸಕ್ತಿ ಬಂಧು ಮಿತ್ರ ಸಹಾಯ, ವಸ್ತ್ರಾಭರಣ ಪ್ರಾಪ್ತಿ, ಶುಭಕಾರ್ಯ ಯತ್ನ ಸಫಲ ಮೊದಲಾದ ಫಲಗಳುಂಟಾಗುವುವು. ಗುರು ಮಿಥುನ ಮತ್ತು ಕಟಕ ರಾಶಿಗಳಲ್ಲಿ ಸಂಚರಿಸುವಾಗ ಮನಸ್ಸಿಗೆ ನಾನಾ ಚಿಂತೆ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಬಂಧು ಮಿತ್ರರ ನಡುವೆ ಭಿನ್ನಾಭಿಪ್ರಾಯ, ವಿರೋಧಿಗಳಿಂದ ಕಿರುಕುಳ, ಕುಟುಂಬದಲ್ಲಿ ಅಹಿತಕರ ವಾತಾವರಣ ಮೊದಲಾದ ಫಲಗಳು , ಯತ್ನ ಕಾರ್ಯಗಳಲ್ಲಿ ವಿಘ್ನ, ಬಂಧುಮಿತ್ರ ವಿರೋಧಗಳು ಬರುವ ಸಾಧ್ಯತೆ ಇದೆ. 

3 /13

ಗುರುವು ವೃಷಭ ಮತ್ತು ಕಟಕ ರಾಶಿಯಲ್ಲಿ ಸಂಚರಿಸುವಾಗ ಅಶುಭದಾಯಕನಾಗಿರುವುದರಿಂದ ಮನಸ್ಸಿಗೆ ಚಿಂತೆ, ಅಧಿಕ ತಿರುಗಾಟ, ವ್ಯಾಪಾರ ಉದ್ಯೋಗಗಳಲ್ಲಿ ಅಲ್ಪ ಪ್ರಗತಿ, ಬಂಧು ಮಿತ್ರ ವಿರೋಧ, ಕೃಷಿಯಲ್ಲಿ ಅಲ್ಪ ಪ್ರಗತಿ, ಮೊದಲಾದ ಫಲಗಳು ಕಂಡು ಬಂದರೂ, ಗುರುವು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಶುಭದಾಯಕನಾಗಿರುವುದರಿಂದ ಆರೋಗ್ಯ ಸುಧಾರಣೆ, ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ, ವಸ್ತ್ರಾಭರಣ ಪ್ರಾಪ್ತಿ, ಶುಭ ಕಾರ್ಯಯತ್ನ ಸಫಲ ಮೊದಲಾದ ಫಲಗಳು ಕಾಣಬರುತ್ತವೆ. ಶನಿಯು ಮೀನರಾಶಿಯಲ್ಲಿ ಸಂಚರಿಸುವಾಗ ಶುಭದಾಯಕನಾಗಿದ್ದು, ಸರ್ಕಾರಿ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಸ್ಥಿರಾಸ್ತಿ ಸಂಪಾದನೆ, ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ, ಧನಲಾಭಗಳುಂಟಾಗುತ್ತವೆ

4 /13

ಗುರುವು ವೃಷಭ ಮತ್ತು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಅಶುಭ ಫಲದಾಯಕರಾಗಿದ್ದು ಸ್ಥಳ ಬದಲಾವಣೆ, ಪ್ರಯಾಣದಲ್ಲಿ ವಿಘ್ನ, ಮನಸ್ಸಿಗೆ ಚಿಂತೆ, ವೃಥಾ ಧನವ್ಯಯ, ಮಿತ್ರರಿಂದ ವಂಚನೆ, ಕೈ ಹಾಕಿದ ಕೆಲಸ ಕಾರುಗಳಲ್ಲಿ ತೊಂದರೆ ಮೊದಲಾದ ಫಲಗಳುಂಟಾಗುವುವು. ಗುರುವು ಕಟಕ ರಾಶಿಯಲ್ಲಿ ಸಂಚರಿಸುವಾಗ ಆರೋಗ್ಯ ಸುಧಾರಣೆ, ವ್ಯಾಪಾರ ವ್ಯವಹಾರಗಳಲ್ಲಿ ಧನಲಾಭ, ಧರ್ಮ ಕಾರ್ಯಾಸಕ್ತಿ, ವಸ್ತ್ರಾಭರಣ ಪ್ರಾಪ್ತಿ, ಶುಭಕರ ಯತ್ನ ಸಫಲ ಮೊದಲಾದ ಶುಭಫಲಗಳು ಕಾಣಬರುತ್ತವೆ. ಶನಿಯು ಮೀನ ರಾಶಿಯಲ್ಲಿ ಸಂಚರಿಸುವಾಗ ದುಷ್ಟ ಜನರಿಂದ ತೊಂದರೆ, ಉದ್ಯೋಗಗಳಲ್ಲಿ ಅಭಿವೃದ್ಧಿ ಕುಂಠಿತ, ಕಾರ್ಯ ಸಾಧನೆಗಾಗಿ ಅಧಿಕ ತಿರುಗಾಟ, ಮನಸ್ಸಿಗೆ ಬೇಸರ, ಕುಟುಂಬದಲ್ಲಿ ಅನಾರೋಗ್ಯ ಮೊದಲಾದ ಫಲಗಳುಂಟಾಗುವುವು.. 

5 /13

ಗುರುವು ವೃಷಭ ರಾಶಿಯಲ್ಲಿ ಸಂಚರಿಸುವಾಗ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ಬಂಧು ಮಿತ್ರ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಸತ್ಕರಾಸಕ್ತಿ ಮೊದಲಾದ ಶುಭ ಫಲಗಳುಂಟಾಗುವುವು. ಗುರುವು ಮಿಥುನ ಮತ್ತು ಕಟಕ ರಾಶಿಯಲ್ಲಿ ಸಂಚರಿಸುವಾಗ ಅಶುಭಫಲದಾಯಕರಾಗಿದ್ದು ವೃಥಾ ಧನವ್ಯಯ, ವ್ಯಾಪಾರ ಉದ್ಯೋಗಗಳಲ್ಲಿ ಅಲ್ಪ ಪ್ರಗತಿ, ಬಂಧುಮಿತ್ರ ವಿರೋಧ, ಸ್ಥಳ ಬದಲಾವಣೆ, ಪ್ರಯಾಣದಲ್ಲಿ ತೊಂದರೆ ಮೊದಲಾದ ಫಲಗಳು ಕಂಡು ಬರುವುವು. ಶನಿಯು ಮೀನರಾಶಿಯಲ್ಲಿ ಸಂಚರಿಸುವಾಗ ಕುಟುಂಬದಲ್ಲಿ ಅನಾರೋಗ್ಯ, ಸರ್ಕಾರಿ ಸಂಬಂಧವಾದ ವ್ಯವಹಾರಗಳಲ್ಲಿ ಅಪಜಯ, ಆರ್ಥಿಕ ಪರಿಸ್ಥಿತಿಯಿಂದ ಋಣ ಬಾಧೆ, ದುಷ್ಟ ಜನರಿಂದ ಕಿರುಕುಳ, ವ್ಯಾಪಾರದಲ್ಲಿ ನಷ್ಟ, ಅಧಿಕ ಖರು ಮೊದಲಾದ ಅಶುಭಫಲಗಳು ಕಾಣಬರುತ್ತವೆ.

6 /13

ಗುರುವು ವೃಷಭ ರಾಶಿ ಮತ್ತು ಕಟಕ  ರಾಶಿಯಲ್ಲಿ ಸಂಚರಿಸುವಾಗ ಅಶುಭಫಲದಾಯಕರಾಗಿದ್ದು ಕೃಷಿಯಲ್ಲಿ ಅಲ್ಪ ಫಲ, ಮನಸ್ಸಿಗೆ ನಾನಾ ರೀತಿಯ ಚಿಂತೆ,  ಕಾರ್ಯ ಸಾಧನೆಗಾಗಿ ತಿರುಗಾಟ, ವ್ಯಾಪಾರ, ವ್ಯವಹಾರಗಳಲ್ಲಿ ಸಾಧಾರಣ ಲಾಭ, ಬಂಧು ಮಿತ್ರರಲ್ಲಿ ಅಸಹಕಾರ, ಸ್ಥಳ ಬದಲಾವಣೆ ಮೊದಲಾದ ಫಲಗಳುಂಟಾಗುವುವು. ಮಿಥುನ ರಾಶಿಯಲ್ಲಿ ಗುರುವು ಸಂಚರಿಸುವಾಗ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಯತ್ನ ಕಾರ್ಯಾನುಕೂಲ, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ವಿವಾಹಾದಿ ಮಂಗಳ ಕಾವ್ಯಗಳು ನಡೆಯುವಿಕೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಮೊದಲಾದ ಶುಭಫಲಗಳು ಕಾಣಬರುತ್ತವೆ. ಶನಿಯು ಮೀನ ರಾಶಿಯಲ್ಲಿ ಸಂಚರಿಸುವಾಗ ಅಶುಭದಾಯಕನಾಗಿದ್ದು ವ್ಯಾಪಾರ, ವ್ಯವಹಾರಗಳಲ್ಲಿ ತೊಂದರೆ, ಸರ್ಕಾರಿ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ವಿಘ್ನ, ಬಂಧು ಮಿತ್ರರಿಂದ ಅವಮಾನ, ಹಣದ ಅಡಚಣೆ, ಅನಾರೋಗ್ಯಗಳುಂಟಾಗುತ್ತವೆ.

7 /13

ವೃಷಭ ಮತ್ತು ಕಟಕ ರಾಶಿಯಲ್ಲಿ ಗುರುವು ಸಂಚರಿಸುವಾಗ ಶುಭಫಲದಾಯಕನಾಗಿದ್ದು ವ್ಯಾಪಾರ, ವ್ಯವಹಾರಗಳಲ್ಲಿ ಧನಲಾಭ, ಕುಟುಂಬದಲ್ಲಿ ಸೌಖ್ಯ, ಆರೋಗ್ಯ ಸುಧಾರಣೆ, ಬಂಧುಮಿತ್ರ ಸಹಾಯ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಫಲ, ಶುಭಕಾರಗಳು ನಡೆಯುವಿಕೆ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ ಮೊದಲಾದ ಫಲಗಳುಂಟಾಗುತ್ತವೆ. ಗುರುವು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಮನಸ್ಸಿಗೆ ಚಿಂತೆ, ತಿರುಗಾಟ, ಅಧಿಕ ಖರ್ಚು, ವ್ಯವಹಾರಗಳಲ್ಲಿ ಅಡಚಣೆ ಮೊದಲಾದ ಅಶುಭ ಫಲಗಳು ಕಂಡುಬರುತ್ತವೆ. ಶನಿಯು ಮೀನ ರಾಶಿಯಲ್ಲಿ ಸಂಚರಿಸುವಾಗ ವ್ಯರ್ಥ ಧನಹಾನಿ, ಅನಾರೋಗ್ಯ, ಪರಸ್ಥಳ ವಾಸ, ಮನಸ್ಸಿಗೆ ಬೇಸರ, ಸರ್ಕಾರಿ ಕೆಲಸ ಕಾರಗಳಲ್ಲಿ ವಿಘ್ನ, ವಿರೋಧಿಗಳಿಂದ ತೊಂದರೆ ಮೊದಲಾದ ಫಲಗಳು ಕಾಣಬರುತ್ತವೆ.

8 /13

ಗುರುವು ವೃಷಭ ಮತ್ತು ಕಟಕ ರಾಶಿಗಳಲ್ಲಿ ಸಂಚರಿಸುವಾಗ ಅಶುಭದಾಯಕನಾಗಿದ್ದು ಚೋರಾಗ್ನಿಭೀತಿ, ಬಂಧುಮಿತ್ರ ವಿರಸ, ದುಷ್ಟ ಜನರ ಸಹವಾಸ, ಅನಾರೋಗ್ಯ, ಮನಸ್ಸಿಗೆ ಚಿಂತೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ವ್ಯಾಪಾರ, ವ್ಯವಹಾರಗಳಲ್ಲಿ ಅಲ್ಪ ಪ್ರಗತಿ, ಅಧಿಕ ಖರ್ಚು ಮೊದಲಾದ ಫಲಗಳು ಉಂಟಾಗುವುವು. ಗುರುವು ಮಿಥುನ ರಾಶಿಯಲ್ಲಿ ಸಂಚರಿಸುವಾಗ ವ್ಯಾಪಾರ, ವ್ಯವಹಾರಗಳಲ್ಲಿ ಧನಲಾಭ, ಕುಟುಂಬದಲ್ಲಿ ಸೌಖ್ಯ, ಆರೋಗ್ಯ ಸುಧಾರಣೆ, ಬಂಧು ಮಿತ್ರ ಸಹಾಯ, ಪುಣ್ಯಕ್ಷೇತ್ರ ದರ್ಶನ, ಶುಭ ಕಾರ್ಯಗಳು ನಡೆಯುವಿಕೆ ಮೊದಲಾದ ಶುಭಫಲಗಳನ್ನು ಕಾಣಬಹುದು. ಶನಿಯು ಮೀನ ರಾಶಿಯಲ್ಲಿ ಸಂಚರಿಸುವಾಗ ಶುಭ ಫಲದಾಯಕನಾಗಿದ್ದು, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ವ್ಯಾಪಾರದಲ್ಲಿ ಲಾಭ, ಕೃಷಿಯಲ್ಲಿ ಅಭಿವೃದ್ಧಿ, ಸರ್ಕಾರಿ, ಕೋರು ವ್ಯವಹಾರ ಗಳಲ್ಲಿ ಅಭಿವೃದ್ಧಿ ಮೊದಲಾದ ಫಲಗಳುಂಟಾಗುತ್ತವೆ.

9 /13

ವೃಷಭ ಮತ್ತು ಕಟಕ ರಾಶಿಗಳಲ್ಲಿ ಗುರುವು ಸಂಚರಿಸುವಾಗ ಉತ್ತಮ ಫಲದಾಯಕನಾಗಿದ್ದು ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಾನುಕೂಲ, ಕುಟುಂಬ ಸೌಖ್ಯ, ಶುಭ ಕಾರ್ಯಯತ್ನ ಸಫಲ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಪುಣ್ಯಕ್ಷೇತ್ರ ದರ್ಶನ, ಸತ್ಕರಾಸಕ್ತಿ ಮೊದಲಾದುವುಗಳು ಕಾಣಬರುತ್ತವೆ. ಮಿಥುನರಾಶಿಯಲ್ಲಿ ಗುರು ಸಂಚರಿಸುವಾಗ ಬಂಧುಮಿತ್ರರ ನಡುವೆ ವಿರಸ, ಅನಾರೋಗ್ಯ, ಮನಸ್ಸಿಗೆ ಚಿಂತೆ ಮೊದಲಾದ ಅಶುಭಫಲಗಳುಂಟಾಗುವುವು. ಶನಿಯು ಮೀನರಾಶಿಯಲ್ಲಿ ಸಂಚರಿಸುವಾಗ ಸರ್ಕಾರಿ ಸಂಬಂಧವಾದ ಕೆಲಸ ಕಾರ್ಯಗಳಲ್ಲಿ ವಿಘ್ನ, ಜಂಟಿ ವ್ಯವಹಾರಗಳಲ್ಲಿ ಅಪಜಯ, ದುಷ್ಟ ಜನ ಸಹವಾಸದಿಂದ ತೊಂದರೆ, ಧನಹಾನಿ ಮೊದಲಾದ ಅಶುಭ ಫಲಗಳನ್ನು ಅನುಭವಿಸಬೇಕಾಗಿ ಬರುವುದು.

10 /13

ಗುರುವು ವೃಷಭ, ಕಟಕ ರಾಶಿಗಳಲ್ಲಿರುವಾಗ ಅಶುಭದಾಯಕನಾಗಿದ್ದು, ಹಣದ ಅಡಚಣೆ ಬಂಧು ಮಿತ್ರ ನಡುವೆ ಮನಸ್ತಾಪ, ಅನಾರೋಗ್ಯ, ದುಷ್ಟಜನರ ಸಹವಾಸ, ಕೆಲಸ ಕಾರ್ಯಗಳಲ್ಲಿ ವಿಘ್ನಗಳುಂಟಾಗುವುವು. ಮಿಥುನ ರಾಶಿಯಲ್ಲಿ ಗುರು ಸಂಚರಿಸುವಾಗ ಕುಟುಂಬದಲ್ಲಿ ಸೌಖ್ಯ, ಅಲ್ಪ ಉದ್ಯೋಗದಲ್ಲಿ ಪ್ರಗತಿ, ಯತ್ನ ಕಾರ್ಯಾನುಕೂಲ, ಶುಭಕಾರ್ಯಗಳು ಜರುಗುವುವು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಮೊದಲಾದ ಶುಭಫಲಗಳನ್ನು ನಿರೀಕ್ಷಿಸಬಹುದು. ಶನಿಯು ಮೀನ ರಾಶಿಯಲ್ಲಿ ಸಂಚರಿಸುವಾಗ ಅಶುಭನಿದ್ದು ಯತ್ನ ಕಾರ್ಯಗಳಲ್ಲಿ ವಿಘ್ನ, ಸೇವಕ ವರದಿಂದ ತೊಂದರೆ, ಬಂಧುಮಿತ್ರ ವಿರೋಧ, ಮನಸ್ಸಿಗೆ ವ್ಯಥೆ, ಅನಾರೋಗ್ಯ ಮೊದಲಾದ ಫಲಗಳುಂಟಾಗುವುವು.

11 /13

ಗುರುವು ವೃಷಭ ಮತ್ತು ಕಟಕ ರಾಶಿ ಯಲ್ಲಿರುವಾಗ ಶುಭಫಲದಾಯಕರಾಗಿದ್ದು, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ಬಂಧುಮಿತ್ರರಿಂದ ಸಹಾಯ, ಸಜ್ಜನ ಸಹವಾಸದಿಂದ ಕೀರ್ತಿ, ಸತ್ಕರಾಸಕ್ತಿ, ಕುಟುಂಬ ಸೌಖ್ಯ, ಧನಾಗಮ, ಶುಭ ಕಾರ್ಯಯತ್ನ ಸಫಲ, ಮನಸ್ಸಿಗೆ ನೆಮ್ಮದಿ ಮೊದಲಾದ ಫಲಗಳನ್ನು ಕಾಣಬಹುದು. ಮಿಥುನ ರಾಶಿಯಲ್ಲಿ ಗುರುವು ಸಂಚರಿಸುವಾಗ ಹಣದ ಅಡಚಣೆ, ಬಂಧು ಮಿತ್ರ ಮನಸ್ತಾಪ, ಅನಾರೋಗ್ಯಗಳು ಕಾಣಬರುತ್ತವೆ. ಶನಿಯು ಮೀನ ರಾಶಿಯಲ್ಲಿರುವಾಗ ಶುಭದಾಯಕನಾಗಿದ್ದು ವ್ಯಾಪಾರ, ಉದ್ಯೋಗಗಳಲ್ಲಿ ಪ್ರಗತಿ, ಸ್ಥಿರಾಸ್ತಿ ಸಂಪಾದನೆ, ಯತ್ನ ಕಾರ್ಯಾನುಕೂಲ, ಸೇವಕ ವರ್ಗದಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಮೊದಲಾದ ಫಲಗಳನ್ನು ನಿರೀಕ್ಷಿಸಬಹುದು.

12 /13

ವೃಷಭ, ಕಟಕ ರಾಶಿಗಳಲ್ಲಿ ಗುರು ಸಂಚರಿಸುವಾಗ ವ್ಯಾಪಾರದಲ್ಲಿ ಸಾಧಾರಣ ಲಾಭ, ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ತೊಂದರೆ, ಮನಸ್ಸಿಗೆ ಚಿಂತೆ, ವ್ಯಥಾ ಮನಸ್ತಾಪ, ಅನಾರೋಗ್ಯ  ಫಲಗಳುಂಟಾಗುವುವು. ಗುರುವು ಮಿಥುನ ರಾಶಿಯಲ್ಲಿ ಸಂಚರಿಸುವಾಗ ಶುಭದಾಯಕನಾಗಿದ್ದು ಆರೋಗ್ಯ ಸುಧಾರಣೆ, ಸಜ್ಜನ ಸಹವಾಸ, ಧನಾಗಮ, ಕುಟುಂಬದಲ್ಲಿ ಉತ್ತಮವಾದ ವಾತಾವರಣ, ವ್ಯಾಪಾರ, ವ್ಯವಹಾರದಲ್ಲಿ  ಲಾಭವಾಗಲಿದೆ. ಶನಿ ಮೀನ ರಾಶಿಯಲ್ಲಿ  ಸಂಚರಿಸುವಾಗ ಅಶುಭದಾಯಕನಾಗಿದ್ದು ಸಲ್ಲದ ಅಪವಾದ, ದಾಯಾದಿ ಕಲಹ, ವೃಥಾ ತಿರುಗಾಟ, ವ್ಯಾಪಾರ, ಉದ್ಯೋಗಗಳಲ್ಲಿ ನಷ್ಟ ಮೊದಲಾದ ಫಲಗಳುಂಟಾಗುವುವು.

13 /13

ವೃಷಭ, ಮಿಥುನ ರಾಶಿಗಳಲ್ಲಿ ಗುರುವು ಸಂಚರಿಸುವಾಗ ಅಶುಭನಾಗಿದ್ದು, ಮನಸ್ಸಿಗೆ ನಾನಾ ರೀತಿಯ ಚಿಂತೆ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಬಂಧು-ಮಿತ್ರರ ನಡುವೆ ಮನಸ್ತಾಪ, ವೃಥಾ ತಿರುಗಾಟ, ಅಧಿಕಾರಿಗಳಿಂದ ತೊಂದರೆ ಮೊದಲಾದ ಫಲಗಳು ಕಾಣಬರುತ್ತವೆ. ಗುರುವು ಕಟಕ ರಾಶಿಯಲ್ಲಿರುವಾಗ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ಸಜ್ಜನ ಸಹವಾಸ, ಕುಟುಂಬದಲ್ಲಿ ನೆಮ್ಮದಿ, ಧನಾಗಮ, ಯತ್ನ ಕಾರ್ಯಾನುಕೂಲ ಮೊದಲಾದ ಶುಭಫಲಗಳನ್ನು ಕಾಣಬಹುದು. ಶನಿಯು ಮೀನ ರಾಶಿಯಲ್ಲಿ ಸಂಚರಿಸುವಾಗ ಅಶುಭನಾಗಿದ್ದು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಘ್ನ, ಬಂಧು ಮಿತ್ರ ವಿರೋಧ, ಸ್ತ್ರೀ ಸಂಬಂಧವಾದ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ವ್ಯಾಪಾರ, ಉದ್ಯೋಗಗಳಲ್ಲಿ ನಷ್ಟ, ವೃಥಾ ತಿರುಗಾಟ ಮೊದಲಾದ ಫಲಗಳನ್ನು ಅನುಭವಿಸಬೇಕಾದಿತು. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.