ಏಪ್ರಿಲ್ 1ರಿಂದ ಈ ಮೊಬೈಲ್ ಸಂಖ್ಯೆಗಳಲ್ಲಿ UPI ಕೆಲಸ ಮಾಡಲ್ಲ; ತಕ್ಷಣವೇ ಈ ಕೆಲಸ ಮಾಡಿ!!

Written ByPuttaraj K AlurUpdated byPuttaraj K Alur
Published: Mar 25, 2025, 02:07 PM IST|Updated: Mar 25, 2025, 02:07 PM IST

National Payments Corporation of India: ಈ ಬಗ್ಗೆ ನ್ಯಾಷನಲ್‌ ಪೇಮೆಂಟ್ಸ್‌ ಕರ್ಪೋರೇಷನ್‌ ಆಫ್‌ ಇಂಡಿಯಾ (NPCI) ಬ್ಯಾಂಕುಗಳ ಮತ್ತು ಯುಪಿಐ ಅಪ್ಲಿಕೇಶನ್‌ಗಳಿಗೆ ನಿಷ್ಕ್ರಿಯ ಮೊಬೈಲ್‌ ಸಂಖ್ಯೆಗಳನ್ನು ತಮ್ಮ ವ್ಯವಸ್ಥೆಯಿಂದ ತೆಗೆದುಹಾಕಲು ಸೂಚನೆ ನೀಡಿವೆ. 

UPI Transactions1/5

ನಿಮ್ಮ UPI ಬ್ಯಾಂಕ್ ಖಾತೆಯು ಸಕ್ರಿಯವಾಗಿಲ್ಲದ ಅಥವಾ ಕ್ಲೋಸ್‌ ಆಗಿರುವ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಆಗಿದ್ದರೆ ಇದರ ಬಗ್ಗೆ ನೀವು ಗಮನ ಹರಿಸಬೇಕು. ಮಾರ್ಗಸೂಚಿಗಳ ಪ್ರಕಾರ, ಏಪ್ರಿಲ್ 1ರಿಂದ ನಿಷ್ಕ್ರಿಯ ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ ಯುಪಿಐ ಖಾತೆಗಳು ಕಾರ್ಯನಿರ್ವಹಿಸುವುದಿಲ್ಲ.

UPI Transactions2/5

ಇದಕ್ಕಾಗಿ ನೀವು ನಿಮ್ಮ ಟೆಲಿಕಾಂ ಆಪರೇಟ‌ರ್ ಅನ್ನು ಸಂಪರ್ಕಿಸಿ ನಿಮ್ಮ ಮೊಬೈಲ್ ಸಂಖ್ಯೆ ಕ್ಲೋಸ್‌ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ನಿಮ್ಮ ಸಿಮ್ ನಿಷ್ಕ್ರಿಯಗೊಂಡಿಲ್ಲದಿದ್ದರೆ ಅದು ನಿಷ್ಕ್ರಿಯಗೊಳ್ಳದಂತೆ ನೀವು ನಿಮ್ಮ ಸಂಖ್ಯೆಯನ್ನು ಮತ್ತೆ ರೀಚಾರ್ಜ್ ಮಾಡಬಹುದು.

UPI Transactions3/5

ನಿಮ್ಮ ಸಂಖ್ಯೆ ನಿಷ್ಕ್ರಿಯವಾಗಿದ್ದರೆ ಅಥವಾ ಕ್ಲೋಸ್‌ ಆಗಿದ್ದರೆ ನೀವು ಬ್ಯಾಂಕ್ ಖಾತೆಯಲ್ಲಿ ಸಕ್ರಿಯ ಸಂಖ್ಯೆಯನ್ನು ನವೀಕರಿಸಬೇಕಾಗುತ್ತದೆ. ಹೆಚ್ಚಿನ ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ UPI ಖಾತೆಗಳಿಂದ ವಹಿವಾಟುಗಳಲ್ಲಿ ಸಮಸ್ಯೆ ಮತ್ತು ವಂಚನೆ ಆಗುತ್ತಿರುವುದನ್ನ ತಡೆಗಟ್ಟಲು NPCIಯ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

UPI Transactions4/5

ಮೊಬೈಲ್ ಸಂಖ್ಯೆ ನಿಷ್ಕ್ರಿಯ ಅಥವಾ ಸ್ವಿಚ್ ಆಫ್ ಆಗಿರುವುದರಿಂದ UPI ವಹಿವಾಟಿನಲ್ಲಿ ಸಮಸ್ಯೆ ಇರುತ್ತದೆ ಮತ್ತು ಸಿಸ್ಟಮ್ ಅನ್ನು ಸಹ ಅಪ್‌ಡೇಟ್‌ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಮೊಬೈಲ್‌ ಸಂಖ್ಯೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಕೂಡಲೇ ನೀವು ಟೆಲಿಕಾಂ ಆಪರೇಟರ್‌ಅನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು. 

UPI Transactions5/5

ಇಂದು ಪ್ರತಿದಿನವೂ ಹಲವು ರೀತಿಯಲ್ಲಿ ಸೈಬರ್‌ ವಂಚಕರು ಜನರನ್ನು ವಂಚಿಸುತ್ತಿದ್ದಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಜನರು ಈ ವಂಚಕರ ಜಾಲದಲ್ಲಿ ಸಿಲುಕಿ ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ. ಸೈಬರ್‌ ಕ್ರೈಂಗಳ ಹೆಚ್ಚಳ ಮತ್ತು ತಾಂತ್ರಿಕ ದೋಷಗಳನ್ನ ತಡೆಟ್ಟುವ ಉದ್ದೇಶದಿಂದ ಈ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು NPCI ತಿಳಿಸಿದೆ.