ಕಡುಬಡವರಿಗೂ ಕೈಗೆಟುಕುವ ಬೆಲೆಗೆ ಸಿಗುತ್ತೆ ಚಿನ್ನ? ಅಮೆರಿಕದ ಬಡ್ಡಿದರ ಇಳಿಕೆ ಪರಿಣಾಮ ಬಂಗಾರದ ಬೆಲೆಯಲ್ಲಿ ಭಾರೀ ಬದಲಾವಣೆ

us fed rate cut: ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಇಳಿಕೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಚಲನವಲನ ತಂದಿದ್ದು, ಭಾರತದಲ್ಲೂ ಚಿನ್ನ–ಬೆಳ್ಳಿ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ.
 

1 /7

us fed rate cut: ಅಮೆರಿಕದ ಸೆಂಟ್ರಲ್ ಬ್ಯಾಂಕಾದ ಫೆಡರಲ್ ರಿಸರ್ವ್ ತನ್ನ ಬಡ್ಡಿದರವನ್ನು 25 ಮೂಲಾಂಕಗಳಷ್ಟು ಕಡಿಮೆ ಮಾಡಿ, 3.75–4.00 ಶೇಕಡಿಯಿಂದ 3.50–3.75 ಶೇಕಡಿಗೆ ತಂದಿದೆ. ಈ ನಿರ್ಧಾರ ನಿರೀಕ್ಷಿತವಾಗಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿಯೇ ಹೊಸ ಚರ್ಚೆ ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಬಡ್ಡಿದರ ಇಳಿದಾಗ ಡಾಲರ್ ದುರ್ಬಲಗೊಳ್ಳುತ್ತದೆ, ಇದರಿಂದ ಚಿನ್ನ–ಬೆಳ್ಳಿಯಂತಹ ಸುರಕ್ಷಿತ ಹೂಡಿಕೆಗಳ ಬೇಡಿಕೆ ಹೆಚ್ಚುವುದು ಸಹಜ.  

2 /7

ಫೆಡರಲ್ ರಿಸರ್ವ್ ಅಧ್ಯಕ್ಷ ಜಿರೋಮ್ ಪೋವೆಲ್ ಹಣದುಬ್ಬರ ನಿಯಂತ್ರಣದಲ್ಲಿದೆ ಎಂದು ಸಮಾಧಾನ ವ್ಯಕ್ತಪಡಿಸಿದರೂ, ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಏರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಸರ್ಕಾರ ಉದ್ಯೋಗ ದತ್ತಾಂಶವನ್ನು ತಿರುಚುತ್ತಿರುವ ಸಾಧ್ಯತೆ ಇದೆ ಎಂದು ಅವರು ಸೂಚಿಸಿದ್ದರಿಂದ, ಮಾರುಕಟ್ಟೆಯಲ್ಲಿ ಹೊಸ ಅನುಮಾನಗಳು ಮೂಡಿವೆ. ಪೇರೋಲ್ ವೃದ್ಧಿ ಮೈನಸ್‌ನಲ್ಲಿರಬಹುದು ಎಂಬ ಊಹಾಪೋಹ ಹೆಚ್ಚುತ್ತಿದೆ.  

3 /7

ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿರುವುದು ನಿಜವಾದರೆ, ಮುಂದಿನ ಸಭೆಗಳಲ್ಲಿ ಫೆಡ್ ಮತ್ತಷ್ಟು ಬಡ್ಡಿದರ ಕಡಿತಕ್ಕೆ ಮುಂದಾಗಬಹುದು. ಜೊತೆಗೆ ಪೋವೆಲ್ ಅವರ ಅಧಿಕಾರಾವಧಿ ಮುಗಿಯುತ್ತಿರುವುದರಿಂದ, ಮುಂದಿನ ಅಧ್ಯಕ್ಷರು ದರ ಕಡಿತಕ್ಕೆ ಹೆಚ್ಚು ಒಲವು ತೋರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2026ರಲ್ಲಿ ಮತ್ತೊಂದು ಬಡ್ಡಿದರ ಇಳಿಕೆ ಸಂಭವಿಸುವ ಸಾಧ್ಯತೆಯಿದೆ.  

4 /7

ಅಮೆರಿಕದ ಬಡ್ಡಿದರ ಇಳಿಕೆ ಭಾರತದ ಮಾರುಕಟ್ಟೆಗೆ ನೇರವಾಗಿ ದೊಡ್ಡ ಪರಿಣಾಮ ಬೀರುವುದಿಲ್ಲ. ಆದರೆ, ಇದರ ಪರಿಣಾಮವಾಗಿ ಡಾಲರ್ ದುರ್ಬಲಗೊಳ್ಳುವುದು ಖಚಿತವಾಗಿದೆ. ಡಾಲರ್ ಮೌಲ್ಯ ಕುಗ್ಗಿದಾಗ ಚಿನ್ನ–ಬೆಳ್ಳಿ ಬೆಲೆಗಳು ಸಾಮಾನ್ಯವಾಗಿ ಏರಿಕೆ ಕಾಣುತ್ತವೆ. ಹೂಡಿಕೆದಾರರು ಸುರಕ್ಷಿತ ಹೂಡಿಕೆ ಕಡೆಗೆ ಮುಖಮಾಡುವುದರಿಂದ ಚಿನ್ನದ ಮೌಲ್ಯ ಮತ್ತಷ್ಟು ಏರುವ ಸಾಧ್ಯತೆ ಇದೆ.  

5 /7

ಚಿನ್ನ–ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಕಾಣುವುದಾದರೂ, ಭಾರತಕ್ಕೆ ಹೆಚ್ಚಿನ ಪರಿಣಾಮ ಬೀರುವುದು ಬಡ್ಡಿದರಕ್ಕಿಂತಲೂ ಭಾರತ–ಅಮೆರಿಕ ಟ್ರೇಡ್ ಡೀಲ್. ಈ ಒಪ್ಪಂದ ಯಶಸ್ವಿಯಾದರೆ, ಭಾರತಕ್ಕೆ ವಿಧಿಸಲಾದ ಟ್ಯಾರಿಫ್‌ಗಳು ಶೇಕಡಾ 20ರಿಂದ ಕಡಿಮೆಯಾಗಬಹುದು. ಇದರಿಂದ ಭಾರತೀಯ ಮಾರುಕಟ್ಟೆಗೆ ಹೊಸ ಶಕ್ತಿ ಸಿಗುತ್ತದೆ.  

6 /7

ಟ್ರೇಡ್ ಡೀಲ್ ಇರುವುದು ಭಾರತೀಯ ಹೂಡಿಕೆದಾರರಿಗೆ ದೊಡ್ಡ ಸುದ್ದಿ. ಒಪ್ಪಂದ ಅನುಕೂಲಕರವಾಗಿದ್ದರೆ, ಮಾರುಕಟ್ಟೆ ಜಿಗಿಯುವ ಸಾಧ್ಯತೆ ಹೆಚ್ಚಿದೆ. ನೇರ ಹೂಡಿಕೆ, IT-ರಫ್ತು, ತಯಾರಿಕಾ ವಲಯ ಸೇರಿದಂತೆ ಹಲವು ಕ್ಷೇತ್ರಗಳು ಲಾಭ ಕಾಣುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ವಾರಗಳಲ್ಲಿ ಮಾರುಕಟ್ಟೆ ಟ್ರೇಡ್ ಡೀಲ್ ಘೋಷಣೆಗಾಗಿ ಕಾಯುತ್ತಿರುವುದು ಸ್ಪಷ್ಟ.  

7 /7

ಒಟ್ಟಿನಲ್ಲಿ, ಅಮೆರಿಕದ ಬಡ್ಡಿದರ ಇಳಿಕೆ ಡಾಲರ್ ದುರ್ಬಲಗೊಳ್ಳಲು ಕಾರಣವಾಗಿದ್ದು, ಚಿನ್ನ–ಬೆಳ್ಳಿ ಬೆಲೆಗಳ ಏರಿಕೆಗೆ ದಾರಿಯಾಗಿದೆ. ಆದರೆ, ಭಾರತಕ್ಕೆ ನಿಜವಾದ ಬದಲಾವಣೆ ತರಲಿರುವ ಸಂಗತಿ ಭಾರತ–ಅಮೆರಿಕ ವ್ಯಾಪಾರ ಒಪ್ಪಂದವೇ. ಮಾರುಕಟ್ಟೆ ಈಗ ಆ ಘೋಷಣೆಯತ್ತ ಕಣ್ಣುಹಾಯಿಸಿದೆ.