ಕಾಲೇಜಿನಲ್ಲಿ ಓದುತ್ತಿದ್ದಾಗ 1961ರಲ್ಲಿ ಎಸ್.ಎಂ.ಕೃಷ್ಣಾಗೆ ಪತ್ರ ಬರೆದಿದ್ದ ಅಮೇರಿಕಾ ಅಧ್ಯಕ್ಷ ಜಾನ್ ಎಫ್ ಕೆನಡಿ..! ಇಲ್ಲಿದೆ ಅಪರೂಪದ ಪತ್ರ..!
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜಾನ್ ಎಫ್. ಕೆನಡಿ ಅವರು ಎಸ್ ಎಂ ಕೃಷ್ಣ ಅವರಿಗೆ 1961 ರಲ್ಲಿ ವೈಯಕ್ತಿಕವಾಗಿ ಪತ್ರಬರೆದು ಧನ್ಯವಾದಗಳನ್ನು ತಿಳಿಸಿದಿದ್ದರು.ಅಮೆರಿಕಾದ ವಿಶ್ವವಿದ್ಯಾನಿಲಯವೊಂದರಲ್ಲಿ ಅಧ್ಯಯನ ಮಾಡುತ್ತಿದ್ದ ಅವರು ಅಲ್ಲಿ ಡೆಮಕ್ರಟಿಕ್ ಕ್ಲಬ್ನ ಸದಸ್ಯರಾಗಿದ್ದರು.
ಜಾನ್ ಎಫ್. ಕೆನಡಿ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತಮ್ಮ ಸಕ್ರೀಯವಾಗಿ ಎಸ್ ಎಂ ಕೃಷ್ಣ ಅವರು ಪಾಲ್ಗೊಂಡರು. ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಕೆನಡಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
ಜಾನ್ ಎಫ್. ಕೆನಡಿ ಅವರ ಪರ ನಡೆದ ಚುನಾವಣಾ ಪ್ರಚಾರದಲ್ಲಿ ಎಸ್ ಎಂ ಕೃಷ್ಣ ಅವರು ಪಾಲ್ಗೊಂಡರು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯನಾಗಿ ಕೃಷ್ಣ ಪಾಲ್ಗೊಂಡಿದ್ದರು. ಆ ಚುನಾವಣೆಯಲ್ಲಿ ಡೆಮಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಕೆನಡಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
ಎಸ್ ಎಂ ಕೃಷ್ಣ ಅವರು ತಮ್ಮ ಉನ್ನತ ಅಧ್ಯಯನದ ದಿನಗಳಲ್ಲಿ ಸುಮಾರು 3 ವರ್ಷಗಳ ಕಾಲ ಅಮೇರಿಕಾದಲ್ಲಿ ನೆಲೆಸಿದ್ದರು.ಆಗ ಅವರಿಗೆ ಅಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಯಕೆ ಅವರಲ್ಲಿತ್ತು. ಹೀಗಾಗಿ ಅವರು ಅಮೇರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಅಭ್ಯರ್ಥಿಯಾದ ಜಾನ್ ಎಫ್. ಕೆನಡಿ ಅವರ ಪರವಾಗಿ ಚುನಾವಣೆ ಕಾರ್ಯದಲ್ಲಿ ಕೃಷ್ಣ ಅವರು ತೊಡಿಸಿಕೊಂಡಿದ್ದರು.
ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ರಾಜ್ಯದ 16ನೇ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ ಅಷ್ಟೇ ಅಲ್ಲದೆ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ.