ಫೇಸ್ ಟ್ಯಾನಿಂಗ್ ತೆಗೆದುಹಾಕಲು ತುಂಬಾ ಲಾಭದಾಯಕ ಪದಾರ್ಥಗಳಿವು
ನಿಮ್ಮ ಮುಖವನ್ನು ಸನ್ ಟ್ಯಾನ್‌ನಿಂದ ರಕ್ಷಿಸಲು ನಿಮಗೆ ಯಾವುದೇ ದುಬಾರಿ ಪ್ರಾಡಕ್ಟ್ ಬೇಕಿಲ್ಲ. ಕೇವಲ ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳಿಂದ ನೀವು ಟ್ಯಾನ್‌ನಿಂದ ಸುಲಭ ಪರಿಹಾರ ಪಡೆಯಬಹುದು. ಅಂತಹ ಮನೆಮದ್ದುಗಳೆಂದರೆ...
ಟ್ಯಾನಿಂಗ್ ಹೋಗಲಾಡಿಸಲು ಕಡಲೆಹಿಟ್ಟು ಮತ್ತು ಅರಿಶಿನವನ್ನು ಹಸಿ ಹಾಲಿನಲ್ಲಿ ಬೇರೆಸಿ ಫೇಸ್ ಪ್ಯಾಕ್ ಅನ್ವಯಿಸಿ. 15 ನಿಮಿಷಗಳ ಬಳಿಕ ಮುಖ ತೊಳೆಯಿರಿ.
ಆಲೂಗಡ್ಡೆ ರಸವು ಉತ್ತಮ ಬ್ಲೀಚಿಂಗ್ ಗುಣಗಳಿಂದ ಸಮೃದ್ಧವಾಗಿದೆ. ಆಲೂಗಡ್ಡೆ ಸಿಪ್ಪೆ ತೆಗೆದು ಅದನ್ನು ಸ್ಲೈಸ್ ಮಾಡಿ ಮುಖಕ್ಕೆ ಅನ್ವಯಿಸಿ. 10 ನಿಮಿಷಗಳ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುವುದರಿಂದ ಕ್ರಮೇಣ ಸ್ಕಿನ್ ಟ್ಯಾನಿಂಗ್ ನಿಂದ ಪರಿಹಾರ ಪಡೆಯಬಹುದು.
ಕೇಸರಿ ಮತ್ತು ಹಾಲು ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ತಿಳಿದೇ ಇದೆ. ಚಿಟಿಕೆ ಕೇಸರಿಯನ್ನು 3 ಚಮಚ ಹಾಲಿನೊಂದಿಗೆ ಬೆರೆಸಿ ಹತ್ತಿ ಉಂಡೆಯ ಸಹಾಯದಿಂದ ಇದನ್ನು ಮುಖಕ್ಕೆ ಲೇಪಿಸಿ. ರಾತ್ರಿಯಿಡೀ ಹಾಗೇ ಬಿಟ್ಟು ಬೆಳಿಗ್ಗೆ ಮುಖ ತೊಳೆಯಿರಿ. ಮೂರ್ನಾಲ್ಕು ದಿನ ಹೀಗೆ ಮಾಡಿದರೆ ಟ್ಯಾನ್ ತೆಗೆದುಹಾಕಿ ನಿಮ್ಮ ಮುಖದ ಕಾಂತಿಯನ್ನು ಮರಳಿ ಪಡೆಯಬಹುದು.
ಟ್ಯಾನ್ ಹೆಚ್ಚಾಗಿದ್ದರೆ ನೀವು ಅಕ್ಕಿಹಿಟ್ಟಿನಲ್ಲಿ ಹಾಲನ್ನು ಬೆರೆಸಿ ಅದನ್ನು ಮುಖಕ್ಕೆ ಲೇಪಿಸಿ 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ಟ್ಯಾನಿಂಗ್ ರಿಮೂವ್ ಮಾಡಬಹುದು.
ಕಳೆತ ಪರಂಗಿ ಹಣ್ಣನ್ನು ಮುಖಕ್ಕೆ ನೇರವಾಗಿ ಅನ್ವಯಿಸಿ ಮಸಾಜ್ ಮಾಡುವುದರಿಂದ ಫೇಸ್ ಟ್ಯಾನಿಂಗ್ ಅನ್ನು ಸುಲಭವಾಗಿ ತೆಗೆದುಹಾಕಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.