Vamana Movie: ವಾಮನ...ನಟ ಧನ್ವಿರ್ ನಟನೆಯ ಸಿನಿಮಾ. ಮುದ್ದುರಾಕ್ಷಸಿ ಹಾಡು ಬಿಡುಗಡೆಯಾದ ಬಳಿಕ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ದ ಸಿನಿಮಾ. ಇದೀಗ ಮೊನ್ನೆಯಷ್ಟೇ ತಾಯಿ ಸೆಂಟಿಮೆಂಟಿರೋ ಹಾಡೊಂದು ರಿಲೀಸ್ ಆಗಿದ್ದು ಭರ್ಜರಿ ಕಿಕ್ ಕೊಟ್ಟಿದೆ.
Vamana Movie: ವಾಮನ...ನಟ ಧನ್ವಿರ್ ನಟನೆಯ ಸಿನಿಮಾ. ಮುದ್ದುರಾಕ್ಷಸಿ ಹಾಡು ಬಿಡುಗಡೆಯಾದ ಬಳಿಕ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ದ ಸಿನಿಮಾ. ಇದೀಗ ಮೊನ್ನೆಯಷ್ಟೇ ತಾಯಿ ಸೆಂಟಿಮೆಂಟಿರೋ ಹಾಡೊಂದು ರಿಲೀಸ್ ಆಗಿದ್ದು ಭರ್ಜರಿ ಕಿಕ್ ಕೊಟ್ಟಿದೆ.
ಮತ್ತೊಂದು ಸಖತ್ ಮ್ಯಾಟರ್ ಏನಪ್ಪಾ ಅಂದ್ರೆ ಮಾರ್ಚ್ 27ಕ್ಕೆ ವಾಮನ ಸಿನಿಮಾದ ಟ್ರೇಲರ್ ರಿಲೀಸ್ ಆಗುತ್ತಿದೆ.
ಟ್ರೇಲರ್ ರಿಲೀಸ್ ಮಾಡುತ್ತಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಬೆಂಗಳೂರಿನ ಪ್ರಸನ್ನ ಥೀಯೇಟರ್ ನಲ್ಲಿ ಟ್ರೇಲರ್ ರಿಲೀಸ್ ಇವೆಂಟ್ ಏರ್ಪಡಿಸಲಾಗಿದೆ.
ದರ್ಶನ್ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಧನ್ವಿರ್ ನಟನೆಯ ವಾಮನ ಸಿನಿಮಾದ ಟ್ರೀಲರ್ ರಿಲೀಸ್ ಮಾಡುತ್ತಿದ್ದಾರೆ ದರ್ಶನ್. ದರ್ಶನ್ ಇದೀಗ ಧನ್ವಿರ್ ಬೆನ್ನಿಗೆ ನಿಂತಿದ್ದಾರೆ. ದರ್ಶನ್ ಕಷ್ಟದ ಸಮಯದಲ್ಲಿ ಧನ್ವಿರ್ ಆನೆಬೆಂಬಲ ನೀಡಿದ್ದರು.
ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಶಂಕರ್ ರಾಮನ್ ವಾಮನ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಏಕ್ ಲವ್ ಯಾ, ಯುಐ ಮತ್ತು ಬಾನದಾರಿಯಲ್ಲಿ ಚಿತ್ರಗಳ ಪಾತ್ರಗಳಿಗೆ ಹೆಸರುವಾಸಿಯಾದ ರೀಷ್ಮಾ ನಾಣಯ್ಯ ಧನ್ವೀರ್ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆಆರ್ ಪೇಟೆ ಮತ್ತು ಕಾಕ್ರೋಚ್ ಸುಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಭೂಷಣ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ ಮತ್ತು ಮಹೇಂದ್ರ ಸಿಂಗ್ ಅವರ ಛಾಯಾಗ್ರಹಣವಿದೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.