Vastu Tips: ವೃತ್ತಿಯಲ್ಲಿ ಪ್ರಗತಿ ಹೊಂದಲು ಮನೆಯ ಈ ಸ್ಥಳದಲ್ಲಿ ಅಕ್ವೇರಿಯಂ ಇರಿಸಿ

Wed, 09 Feb 2022-2:08 pm,

ವಾಸ್ತು ಶಾಸ್ತ್ರದ ಪ್ರಕಾರ, ಆಗ್ನೇಯ ದಿಕ್ಕನ್ನು ಅಕ್ವೇರಿಯಂ ಇಡಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನೆಯ ಈ ದಿಕ್ಕಿನಲ್ಲಿ ಅಕ್ವೇರಿಯಂ ಇಡುವುದರಿಂದ ಸಮೃದ್ಧಿ ಬರುತ್ತದೆ. ಇದಲ್ಲದೆ, ಸಂಪತ್ತು ಹೆಚ್ಚಾಗುತ್ತದೆ. 

ಮನೆಯ ಪೂರ್ವ ಮತ್ತು ಉತ್ತರ ಮೂಲೆಯಲ್ಲಿ ಅಕ್ವೇರಿಯಂ ಇಡುವುದರಿಂದ ವೃತ್ತಿಯಲ್ಲಿ ಪ್ರಗತಿಯಾಗುತ್ತದೆ. ಜೀವನದಲ್ಲಿ ಸಂತೋಷದ ಜೊತೆಗೆ ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ.   

ಫೆಂಗ್ ಶೂಯಿ ಸಲಹೆಗಳ ಪ್ರಕಾರ, ಅಕ್ವೇರಿಯಂನಲ್ಲಿ ಒಂದು ಕಪ್ಪು ಮೀನು ಮತ್ತು 8-9 ಕಿತ್ತಳೆ ಮೀನುಗಳು ಇರಬೇಕು. ಇದಲ್ಲದೆ, ಅಕ್ವೇರಿಯಂನಲ್ಲಿ ಗೋಲ್ಡನ್ ಬಣ್ಣದ ಮೀನುಗಳನ್ನು ಹೊಂದಿರುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಫೆಂಗ್ ಶೂಯಿ ಸಲಹೆಗಳ ಪ್ರಕಾರ, 8 ಕೆಂಪು ಮತ್ತು ಒಂದು ಕಪ್ಪು ಮೀನುಗಳನ್ನು ಅಕ್ವೇರಿಯಂನಲ್ಲಿ ಇಡುವುದರಿಂದ ಮನೆಯಲ್ಲಿ ಸಂತೋಷ, ಶಕ್ತಿ ಮತ್ತು ಅದೃಷ್ಟದ ಹರಿವು ಹೆಚ್ಚಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ಅಕ್ವೇರಿಯಂ ಅನ್ನು ಮಲಗುವ ಕೋಣೆ ಅಥವಾ ಅಡುಗೆಮನೆಯಲ್ಲಿ ಇಡಬಾರದು. ಇದನ್ನು ಹೊರತುಪಡಿಸಿ, ಅಕ್ವೇರಿಯಂ ಅನ್ನು ಮನೆಯ ಮಧ್ಯದಲ್ಲಿ ಇಡಬಾರದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link