ಸ್ಟೋನ್ ಕರಗಿಸುವುದರ ಜೊತೆಗೆ ಕಿಡ್ನಿಯ ಗಂಭೀರ ಕಾಯಿಲೆಗಳನ್ನು ಬುಡದಿಂದಲೇ ನಿರ್ನಾಮ ಮಾಡುತ್ತದೆ ಈ ತರಕಾರಿ ! ಒಮ್ಮೆ ಸೇವಿಸಿ ನೋಡಿ

Written ByRanjitha R KUpdated byRanjitha R K
Published: Jun 12, 2025, 04:09 PM IST|Updated: Jun 12, 2025, 04:09 PM IST

ಬೆಂಗಳೂರು : ಕಿಡ್ನಿ ಸಮಸ್ಯೆಯನ್ನು ಹೋಗಲಾಡಿಸಲು ಅಡುಗೆ ಮನೆಯಲ್ಲಿಯೇ ಸಿಗುವ ಕೆಲವು ಮನೆ ಮದ್ದನ್ನು ಬಳಸಬಹುದು. ಈ ಪದಾರ್ಥಗಳು ಕಿಡ್ನಿ ಸ್ಟೋನ್ ಕರಗಿಸುವುದರಿಂದ ಹಿಡಿದು, ಗಂಭೀರ ಕಾಯಿಲೆಗಳಿಂದ ಕೂಡಾ ಕಿಡ್ನಿಯನ್ನು ಸುರಕ್ಷಿತವಾಗಿ ಇರಿಸುತ್ತದೆ. 

Remedy o prevent kidney problem1/7

ಕಿಡ್ನಿ ಆರೋಗ್ಯಕ್ಕೆ ಮನೆ ಮದ್ದು

ಸೋರೆಕಾಯಿ : ಸೋರೆಕಾಯಿಯಲ್ಲಿ ಅತಿ ಹೆಚ್ಚು  ನೀರಿನ ಪ್ರಮಾಣವಿರುತ್ತದೆ.  ತುಂಬಿರುತ್ತದೆ.ಇದು ದೇಹದಲ್ಲಿನ ತ್ಯಾಜ್ಯವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮೂತ್ರಪಿಂಡಗಳ ಆರೋಗ್ಯ ಕಾಪಾಡಲು ಇದು ಬೆಸ್ಟ್ ಆಹಾರ.   

Remedy o prevent kidney problem2/7

ಕಿಡ್ನಿ ಆರೋಗ್ಯಕ್ಕೆ ಮನೆ ಮದ್ದು

ಕೊತ್ತಂಬರಿ ಸೊಪ್ಪು :ಸಾಮಾನ್ಯವಾಗಿ ಆಹಾರದ ರುಚಿ ಮತ್ತು ಘಮ ಹೆಚ್ಚಿಸಲು  ಕೊತ್ತಂಬರಿ ಸೊಪ್ಪನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಇದು ಕಿಡ್ನಿಯನ್ನು ಶುದ್ಧೀಕರಿಸುವ ಶಕ್ತಿಯನ್ನು ಹೊಂದಿದೆ.   

Remedy o prevent kidney problem3/7

ಕಿಡ್ನಿ ಆರೋಗ್ಯಕ್ಕೆ ಮನೆ ಮದ್ದು

ಕೆಂಪು ದ್ರಾಕ್ಷಿ :  ಸಿಹಿ, ರಸಭರಿತವಾಗಿರುವ  ಕೆಂಪು ದ್ರಾಕ್ಷಿ ಮೂತ್ರಪಿಂಡಗಳ ಆರೋಗ್ಯಕ್ಕೆ ಸಂಜೀವಿನಿ ಇದ್ದಂತೆ. ಕೆಂಪು ದ್ರಾಕ್ಷಿಗಳು ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು, ಇವು ಮೂತ್ರಪಿಂಡದ ಕೋಶಗಳನ್ನು ರಕ್ಷಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

Remedy o prevent kidney problem4/7

ಕಿಡ್ನಿ ಆರೋಗ್ಯಕ್ಕೆ ಮನೆ ಮದ್ದು

ಹೂಕೋಸು : ಕಡಿಮೆ  ಪೊಟ್ಯಾಸಿಯಮ್ ತ್ತು ಅಧಿಕ ಫೈಬರ್  ಹೊಂದಿರುವ ತರಕಾರಿ ಹೂ ಕೋಸು. ಇದು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. 

Remedy o prevent kidney problem5/7

ಕಿಡ್ನಿ ಆರೋಗ್ಯಕ್ಕೆ ಮನೆ ಮದ್ದು

ಬಾರ್ಲಿನೀರು : ಬಾರ್ಲಿನೀರು ಕಿಡ್ನಿ ಆರೋಗ್ಯಕ್ಕೆ ಒಂದು ಪರಿಣಾಮಕಾರಿಯಾದ ಮನೆಮದ್ದಾಗಿದೆ. ಇದು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಮೂತ್ರ ವರ್ಧಕವಾಗಿದ್ದು ಕಿಡ್ನಿ ಸ್ಟೋನ್ ಅನ್ನು ಕಿಡ್ನಿಯಿಂದ ಹೊರ ಹಾಕಲು ಸಹಾಯ ಮಾಡುತ್ತದೆ.

Remedy o prevent kidney problem6/7

ಕಿಡ್ನಿ ಆರೋಗ್ಯಕ್ಕೆ ಮನೆ ಮದ್ದು

ಅರಿಶಿನ : ಒಂದು ಸಣ್ಣ ಚಿಟಿಕೆ ಅರಿಶಿನವು ಅಡುಗೆಗೆ ಬಣ್ಣವನ್ನು ನೀಡುವುದರೊಂದಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅರಿಶಿನವು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡದ ಕೋಶಗಳನ್ನು ಹಾನಿಯಿಂದ ಸುರಕ್ಷಿತವಾಗಿರಿಸುತ್ತದೆ. 

Remedy o prevent kidney problem7/7

ಕಿಡ್ನಿ ಆರೋಗ್ಯಕ್ಕೆ ಮನೆ ಮದ್ದು

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.