Shukra Gochar Phala: ಜ್ಯೋತಿಷ್ಯ ಶಾಸ್ತ್ರದಲ್ಲಿ ಧನಕಾರಕ ಎಂತಲೇ ಬಣ್ಣಿಸಲಾಗುವ ಶುಕ್ರ ಗ್ರಹವು ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ರಾಶಿ ಪರಿವರ್ತನೆ ಹೊಂದಲಿದೆ.
Shukra Dese: ವೈದಿಕ ಜ್ಯೋತಿಷ್ಯದ ಪ್ರಕಾರ, ಶುಕ್ರ ಶೀಘ್ರದಲ್ಲೇ ಮಂಗಳನ ರಾಶಿಚಕ್ರ ಚಿಹ್ನೆಗೆ ಕಾಲಿಡಲಿದ್ದಾನೆ. ಇದರಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎನ್ನಲಾಗುತಿದೆ.
1/6ಜ್ಯೋತಿಷ್ಯದಲ್ಲಿ ಧನ, ಸಂಪತ್ತು, ಐಶ್ವರ್ಯ, ಪ್ರೀತಿ, ವಾತ್ಸಲ್ಯ, ಸುಖ-ಸೌಕರ್ಯಗಳ ಅಂಶ ಎನ್ನಲಾಗುವ ಶುಕ್ರ ಗ್ರಹ ನವೆಂಬರ್ 26, 2025ರಂದು ಮಂಗಳನ ರಾಶಿಚಕ್ರವಾದ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಡಿಸೆಂಬರ್ 19ರವರೆಗೂ ಅದೇ ರಾಶಿಯಲ್ಲಿ ನೆಲೆಸಲಿದ್ದಾನೆ.
2/6ವೃಶ್ಚಿಕ ರಾಶಿಗೆ ಶುಕ್ರನ ಪ್ರವೇಶವಾಗುತ್ತಿದ್ದಂತೆ ನಾಲ್ಕು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಇದರಿಂದಾಗಿ ರಾತ್ರೋ ರಾತ್ರಿ ಅವರ ಲಕ್ ಬದಲಾಗಲಿದ್ದು ಜೀವನದಲ್ಲಿ ಕಷ್ಟಗಳಿಂದ ಪರಿಹಾರ ದೊರೆತು ಸುಖದ-ಸುಪ್ಪತ್ತಿಗೆಯಲ್ಲೇ ಜೀವನ ಸಾಗಿಸುವರು ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವೆಂದು ತಿಳಿಯೋಣ...
3/6ವೃಷಭ ರಾಶಿಯ ಅಧಿಪತಿಯೂ ಆಗಿರುವ ಶುಕ್ರ ಮಂಗಳನ ರಾಶಿಯಲ್ಲಿ ಚಲಿಸುವುದರಿಂದ ಈ ರಾಶಿಯವರ ಬದುಕಿನಲ್ಲಿ ಸಾಕಷ್ಟು ಆಯಾಮಗಳಲ್ಲಿ ಧನಾತ್ಮಕ ಫಲಗಳು ದೊರೆಯಲಿವೆ. ಈ ಅವಧಿಯಲ್ಲಿ ಕೆಲಸ ಕಾರ್ಯಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಲಿದ್ದು ದೀರ್ಘ ಸಮಯದ ಯೋಜನೆಗಳಲ್ಲಿ ಅಪಾರ ಯಶಸ್ಸನ್ನು ಗಳಿಸುವಿರಿ. ವೈವಾಹಿಕ ಬದುಕಿನಲ್ಲಿ ಪ್ರೀತಿ, ವಾತ್ಸಲ್ಯ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಆಹ್ಲಾದಕರ ಸಮಯವನ್ನು ಆನಂದಿಸುವಿರಿ.
4/6ಶುಕ್ರ ಸಂಚಾರದಿಂದ ಈ ರಾಶಿಯವರ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಪ್ರೇಮ ಸಂಬಂಧಗಳು ಗಾಢಗೊಳ್ಳಲಿದ್ದು, ಮದುವೆಗೆ ಮನೆಯವರ ಸಮ್ಮತಿಯೂ ಸಿಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಾಗಲಿದ್ದು ಪ್ರಮುಖ ಕೆಲಸಗಳಲ್ಲಿ ಆಪ್ತರ ಸಂಪೂರ್ಣ ಬೆಂಬಲ ದೊರೆಯಲಿದೆ. ಹೆಜ್ಜೆ ಹೆಜ್ಜೆಗೂ ಅದೃಷ್ಟ ಕೈ ಹಿಡಿಯಲಿದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ.
5/6ಸ್ವ ರಾಶಿಯಲ್ಲಿ ಶುಕ್ರ ಸಂಚಾರವು ಈ ರಾಶಿಯವರಿಗೆ ಪ್ರತಿ ಹೆಜ್ಜೆಗೂ ಅನುಕೂಲಕರ ಪರಿಸ್ಥಿತಿಯನ್ನು ನಿರ್ಮಿಸಲಿದೆ. ನಿಮ್ಮ ಕೆಲಸಗಳಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲ ಇರಲಿದ್ದು ಪ್ರಮುಖ ಕೆಲಸಗಳಲ್ಲಿ ಉನ್ನತ ಸ್ಥಾನಮಾನ ಗಳಿಸುವಿರಿ. ವ್ಯವಹಾರದಲ್ಲಿ ಪ್ರಗತಿ, ವೃತ್ತಿಯಲ್ಲಿ ಅನಿರೀಕ್ಷಿತ ಲಾಭವನ್ನು ಕಾಣುವಿರಿ. ಅವಿವಾಹಿತರಿಗೆ ವಿವಾಹಯೋಗ, ಪ್ರಯಾಣದಿಂದ ಭಾರೀ ಪ್ರಯೋಜನವಾಗಲಿವೆ.
6/6ಶುಕ್ರ ರಾಶಿ ಬದಲಾವಣೆಯು ಈ ರಾಶಿಯವರಿಗೆ ಹೂಡಿಕೆಯಿಂದ ಅಧಿಕ ಲಾಭವನ್ನು ನೀಡಲಿದೆ. ವೃತ್ತಿ ರಂಗದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯುವಿರಿ. ಸಂಪತ್ತು ವ್ರುದ್ಧಿಯಾಗಲಿದ್ದು ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವುವು. ವ್ಯವಹಾರದಲ್ಲಿ ಭಾರೀ ಪ್ರಗತಿಯ ಅವಕಾಶಗಳು ಸಿಗಲಿವೆ. ಒಟ್ಟಾರೆಯಾಗಿ ನಿಮ್ಮ ಬದುಕೇ ಬಂಗಾರವಾಗುವ ಸಮಯ ಇದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.