Vipreet RajYoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಿಪರೀತ ರಾಜಯೋಗವು ಅತ್ಯಂತ ಶುಭ ಯೋಗಗಳಲ್ಲಿ ಒಂದಾಗಿದೆ.
1/6ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಸುಮಾರು 104ವರ್ಷಗಳ ಬಳಿಕ ಜೂನ್ 2025ರಲ್ಲಿ ವಿಶೇಷ ಗ್ರಹಗಳ ಸಂಯೋಗದಿಂದ ಅಪರೂಪದ ವಿಪರೀತ ರಾಜಯೋಗ ನಿರ್ಮಾಣವಾಗುತ್ತಿದೆ.
2/6ವಿಪರೀತ ರಾಜಯೋಗ ಪ್ರಭಾವದಿಂದಾಗಿ ನಾಲ್ಕು ರಾಶಿಯವರ ಬದುಕಿನಲ್ಲಿ ಕಷ್ಟಗಳು ದೂರಾಗಿ ಸುಖ, ಸಂತೋಷ, ಅಪಾರ ಧನ-ಸಂಪತ್ತು ಹರಿದು ಬರಲಿದ್ದು ರಾಜವೈಭೋಗದ ಜೀವನವನ್ನು ನಡೆಸುವರು ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
3/6ವಿಪರೀತ ರಾಜಯೋಗದ ಫಲವಾಗಿ ಈ ರಾಶಿಯವರಿಗೆ ನ್ಯಾಯಾಲಯ ಪ್ರಕರಣಗಳಲ್ಲಿ ಜಯ ಪ್ರಾಪ್ತಿಯಾಗಲಿದೆ. ವೃತ್ತಿಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ದೊರೆತು, ಕಂಡ ಕನಸೆಲ್ಲಾ ನನಸಾಗುವ ಕಾಲ.
4/6ವಿಪರೀತ ರಾಜಯೋಗದ ಪ್ರಭಾವದಿಂದ ಈ ರಾಶಿಯವರಿಗೆ ಹಿಂದಿನ ಹೂಡಿಕೆಗಳಿಂದ ಬಂಪರ್ ಆದಾಯ ಬರಲಿದೆ. ಸಾಲಭಾದೆಯಿಂದ ಪರಿಹಾರ ದೊರೆಯುವುದು. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವುವು. ವೃತ್ತಿಪರರಿಗೆ ಬಡ್ತಿ, ಉನ್ನತ ಅಧಿಕಾರ ಪಡೆಯುವ ಅವಕಾಶಗಳಿವೆ.
5/6ವಿಪರೀತ ರಾಜಯೋಗವು ಈ ರಾಶಿಯವರಿಗೆ ವಿದೇಶ ವ್ಯವಹಾರದಿಂದ ನಿರೀಕ್ಷೆಗೂ ಮೀರಿದ ಆದಾಯವನ್ನು ನೀಡಲಿದೆ. ದಿಢೀರ್ ಧನಲಾಭದಿಂದ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದ್ದು ಭಾರೀ ಕೀರ್ತಿ, ಯಶಸ್ಸನ್ನು ಗಳಿಸುವಿರಿ.
6/6ವಿಪರೀತ ರಾಜಯೋಗದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಬಡ್ತಿ, ವೇತನ ಹೆಚ್ಚಳದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹಿಂದೆ ಮಾಡಿದ ಹೂಡಿಕೆಗಳಿಂದ ಭರ್ಜರಿ ಲಾಭವಾಗಲಿದ್ದು ಸ್ವಂತ ಮನೆ, ಭೂಮಿ ಖರೀದಿ ಯೋಗವಿದೆ. ವೈವಾಹಿಕ ಬದುಕು ಆಹ್ಲಾದಕರವಾಗಿರುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.