RCB Stampede : 18 ವರ್ಷಗಳ ನಂತರ ಆರ್ಸಿಬಿ ಕಪ್ ಗೆದ್ದಿದೆ.. ಆದರೆ ಈ ಗೆಲುವು 11 ಅಮಾಯಕ ಜೀವಗಳ ಬಲಿ ಪಡೆಯಿತು. ಈ ಘೋರ ದುರಂತ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಸರ್ಕಾರ, ಕೆಸಿಎ, ಆರ್ಸಿಬಿ ಆಡಳಿತ ಮಂಡಳಿ ವಿರುದ್ದ ಜನಾಕ್ರೋಶ ವ್ಯಕ್ತವಾಗಿದೆ. ಇದರ ನಡುವೆ ಹೊಸ ಸುದ್ದಿಯೊಂದು ಸ್ಪೋಟಗೊಂಡಿದೆ.
1/6ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಆರ್ಸಿಬಿ 18 ವರ್ಷಗಳ ನಂತರ ಕಪ್ ಎತ್ತಿದೆ. ಆದರೆ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ ಗೆಲುವಿನ ನಗೆಯನ್ನೇ ಕಿತ್ತುಕೊಂಡಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರನ್ನು ಅಮಾನತು ಮಾಡಲಾಗಿದೆ..
2/6ಹೌದು.. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದ ದುರಂತದ ನಂತರ, ಆರ್ಸಿಬಿ ಮ್ಯಾನೇಜ್ಮೆಂಟ್, ಇವೆಂಟ್ ಆರ್ಗನೈಸರ್ ಆದ ಡಿಎನ್ಎ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲವು ಅಧಿಕಾರಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಬಂಧನಕ್ಕೆ (virat kohli arrest) ಆಗ್ರಹಿಸಿ ನೆಟ್ಟಿಗರು ಅಭಿಯಾನ ಶುರು ಮಾಡಿದ್ದಾರೆ.
3/618 ವರ್ಷಗಳ ಬಳಿಕ IPL ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿ ವಿಜಯೋತ್ಸವ ಆಚರಿಸಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಕಾಲ್ತುಳಿತ ಸಂಭವಿಸಿ 11 ಜನ ಅಭಿಮಾನಿಗಳು ಸಾವನ್ನಪ್ಪಿ 40 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
4/6ಇದರ ನಡುವೆ ಇದೀಗ, ಈ ಘಟನೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾರಣ ಅವರನ್ನು ಬಂಧಿಸಿ ಅಂತ ನೆಟ್ಟಿಗರು ಅಭಿಯಾನ ಪ್ರಾರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ #ARRESTKOHLI ಎಂಬ ಹೊಸ ಕ್ಯಾಂಪೇನ್ ಶುರುವಾಗಿದೆ. ಅಲ್ಲದೆ ಈ ಮಾತು ಕೇಳಿಬರಲು ಕಾರಣವೂ ಸಹ ಇದೆ..
5/6ಕಾಲ್ತುಳಿತದ ನಂತರ ವಿರಾಟ್ ತಮ್ಮ X ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದರು. ಅದಕ್ಕಿಂತ ಹೆಚ್ಚಿಗೆ ಏನೂ ಮಾತನಾಡಿಲ್ಲ. ಅಲ್ಲದೆ, ಅಭಿಮಾನಿಗಳ ಸಾವಿನ ನಡುವೆಯೂ ದೇಶ ತೊರೆದು ಲಂಡನ್ಗೆ ಹೋದರು.. ಇದೀಗ ಇದೇ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ..
6/6ಲಂಡನ್ಗೆ ಹೋಗಲು ವಿರಾಟ್ ಕೊಹ್ಲಿ ಸಂಭ್ರಮಾಚರಣೆಯನ್ನು ಗೆದ್ದ ಮರುದಿನವೇ ಆಯೋಜನೆ ಮಾಡುವಂತೆ ಆರ್ಸಿಬಿಗೆ ಒತ್ತಡ ಹೇರಿದರು ಎಂಬ ಮಾತು ಕೇಳಿ ಬರುತ್ತಿದೆ.. ಹೀಗಾಗಿ ಕಾಲ್ತುಳಿತಕ್ಕೆ ವಿರಾಟ್ ಕೊಹ್ಲಿನೇ ಕಾರಣ ಎನ್ನಲಾಗ್ತಿದೆ. ಅಷ್ಟೇ ಅಲ್ಲದೆ, ಪೊಲೀಸರು ಮನವಿ ಮಾಡಿದರೂ ಸಹ ಆರ್ಸಿಬಿ ಮ್ಯಾನೇಜ್ಮೆಂಟ್ ಕೇಳಲಿಲ್ಲವಂತೆ. ಕೊಹ್ಲಿ ಹಠದಿಂದಲೇ ವಿಜಯೋತ್ಸವ ಆಯೋಜಿಸಿತ್ತು ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ.