ಈ ಕನ್ನಡದ ನಟಿಯ ಜೊತೆ ಡೇಟಿಂಗ್‌ ಮಾಡಿದ್ರು ವಿರಾಟ್‌ ಕೊಹ್ಲಿ! ಈಕೆ ಈಗ ಕಾಂಟ್ರವರ್ಸಿ ಕ್ವೀನ್‌

Written ByPuttaraj K Alur
Published: Sep 23, 2025, 09:04 AM IST|Updated: Sep 23, 2025, 09:04 AM IST

Virat Kohli Dating History: ರನ್‌ ಮಷಿನ್‌ ಖ್ಯಾತಿಯ ವಿರಾಟ್ ಕೊಹ್ಲಿಯ ಗರ್ಲ್‌ಫ್ರೆಂಡ್‌ಗಳ ಲಿಸ್ಟ್‌ನಲ್ಲಿ ಕನ್ನಡ ನಟಿ, ಬಿಗ್ ಬಾಸ್ 9ರ ಸುಂದರಿ ಕೂಡ ಇದ್ದಾರೆ. ಒಂದು ಸಮಯದಲ್ಲಿ ಈ ಜೋಡಿಯ ನಡುವಿನ ರಹಸ್ಯ ಸಂಬಂಧದ ಸುದ್ದಿ ಸಖತ್ ವೈರಲ್ ಆಗಿತ್ತು. ಆ ಸುಂದರಿ ಯಾರು? ಈ ಜೋಡಿಯ ಸಂಬಂಧ ಎಷ್ಟು ನಿಜ? ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

1/5

ಶೀಘ್ರವೇ ಕನ್ನಡದಲ್ಲಿ ಬಿಗ್ ಬಾಸ್ 12ನೇ ಸೀಸನ್ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಭಾಗವಹಿಸಿದ ಸ್ಪರ್ಧಿಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಗಾಳಿಸುದ್ದಿಗಳು ಹರಿದಾಡುತ್ತಿವೆ. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಿಗ್ ಬಾಸ್ ಬ್ಯೂಟಿ ಸಂಜನಾ ಜೊತೆ ಡೇಟ್ ಮಾಡಿದ್ದರಾ? ಅನ್ನೋ ವಿಷಯ ಸಖತ್‌ ಸೌಂಡ್‌ ಮಾಡುತ್ತಿದೆ. ಸಂಜನಾ ವಿರಾಟ್ ಕೊಹ್ಲಿಯ ಗರ್ಲ್‌ಫ್ರೆಂಡ್‌ಗಳ ಲಿಸ್ಟ್‌ನಲ್ಲಿದ್ದರಾ? ಇದರ ಅಸಲಿ ಸತ್ಯವೇನು ಗೊತ್ತಾ?

2/5

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅನೇಕರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆಂದು ಗಾಳಿಸುದ್ದಿಗಳು ಹರಿದಾಡಿದ್ದವು. ಕೊಹ್ಲಿ ನಟಿಯರೊಂದಿಗೆ ಕಾಣಿಸಿಕೊಂಡಾಗಲೆಲ್ಲಾ ಅವರ ಸಂಬಂಧದ ಬಗ್ಗೆ ವ್ಯಾಪಕ ಸುದ್ದಿಯಾಗುತ್ತಿತ್ತು. ಕೊಹಲ್ಲಿ ಮದುವೆಗೂ ಮುನ್ನ ಅನೇಕರೊಂದಿಗೆ ಡೇಟಿಂಗ್‌ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಕೊಹ್ಲಿ ಗರ್ಲ್‌ಫ್ರೆಂಡ್‌ಗಳ ಲಿಸ್ಟ್‌ ದೊಡ್ಡದಿದೆ. ಕೊಹ್ಲಿ ಡೇಟ್‌ ಮಾಡಿದ ಗರ್ಲ್‌ಫ್ರೆಂಡ್‌ಗಳ ಲಿಸ್ಟ್‌ನಲ್ಲಿ ಬಿಗ್‌ ಬಾಸ್‌ ಬ್ಯೂಟಿ ಸಂಜನಾ ಗಲ್ರಾನಿ ಕೂಡ ಒಬ್ಬರು.

3/5

ಒಮ್ಮೆ ಐಪಿಎಲ್ ಸಮಯದಲ್ಲಿ ವಿರಾಟ್ ಕೊಹ್ಲಿ ನಾಯಕಿ ಸಂಜನಾ ಗಲ್ರಾನಿ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿತ್ತು. ಆರ್‌ಸಿಬಿ ಪಂದ್ಯಗಳ ಸಮಯದಲ್ಲಿ ಸಂಜನಾ ಕ್ರೀಡಾಂಗಣದಲ್ಲಿ ತಂಡಕ್ಕೆ ಚೀಯರ್‌ಅಪ್‌ ಮಾಡ್ತಿದ್ದರು. 2011ರ ಐಪಿಎಲ್ ಸಮಯದಲ್ಲಿ ಈ ನಟಿ ಪಂದ್ಯದ ಸಮಯದಲ್ಲಿ ಮೈದಾನಕ್ಕೆ ಬಂದು ಆರ್‌ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಂಡು ತಂಡಕ್ಕೆ ಸಪೋರ್ಟ್‌ ಮಾಡಿದ್ದರು. ಆ ಸಮಯದಲ್ಲಿ ತಂಡದಲ್ಲಿ ಯುವ ಆಟಗಾರನಾಗಿದ್ದ ವಿರಾಟ್ ಕೊಹ್ಲಿ ಅವರೊಂದಿಗೆ ಸಂಜನಾ ಸ್ವಲ್ಪ ಪರಿಚಿತರ ರೀತಿಯಲ್ಲಿ ಮಾತನಾಡುತ್ತಿರುವುದು ಕಂಡುಬಂದಿತ್ತು.

4/5

ಕೊಹ್ಲಿ ಜೊತೆಗೆ ಕ್ರೀಡಾಂಗಣದಲ್ಲಿ ಸಂಜನಾ ಕಾಣಿಸಿಕೊಂಡಿದ್ದೇ ತಡ ಈ ಜೋಡಿಯ ನಡುವೆ ಸಂಬಂಧವಿದೆ ಅನ್ನೋ ವದಂತಿಗಳಿಗೆ ಕಾರಣವಾಗಿತ್ತು. ವಿಜಯ್ ಮಲ್ಯ ಆಯೋಜಿಸಿದ್ದ ಪಾರ್ಟಿಯಲ್ಲಿ ಸಂಜನಾ ವಿರಾಟ್ ಕೊಹ್ಲಿಯನ್ನ ಭೇಟಿಯಾಗಿದ್ದರು. ನಂತರ ಇಬ್ಬರೂ ಡೇಟಿಂಗ್ ಪ್ರಾರಂಭಿಸಿದರು ಎಂಬ ಸುದ್ದಿ ವೈರಲ್ ಆಯಿತು. ಇದರ ನಂತರ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದು ಸಂಜನಾ ಗಲ್ರಾನಿ - ವಿರಾಟ್ ಕೊಹ್ಲಿ ಡೇಟಿಂಗ್ ವದಂತಿಗಳಿಗೆ ಪೂರ್ಣವಿರಾಮ ಹಾಕಿತು. ಮತ್ತೊಂದೆಡೆ ಸಂಜನಾ ಕೂಡ ಈ ವದಂತಿಗಳನ್ನ ನಿರಾಕರಿಸಿದರು, ಕೊಹ್ಲಿ ತನಗೆ ಕೇವಲ ಸ್ನೇಹಿತ ಎಂದು ಹೇಳಿಕೊಂಡಿದ್ದರು.

5/5

ಸಂಜನಾ ಬಳಿಕ ವಿರಾಟ್‌ ಕೊಹ್ಲಿ ಹೆಸರು ಮಿಲ್ಕಿ ಬ್ಯೂಟಿ ತಮನ್ನಾ ಜೊತೆಗೆ ಥಳುಕು ಹಾಕಿಕೊಂಡಿತ್ತು. ಆ ಸಮಯದಲ್ಲಿ ಕೊಹ್ಲಿ ನಟಿ ತಮನ್ನಾ ಜೊತೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ದೇಶದಾದ್ಯಂತ ಚರ್ಚೆ ನಡೆದಿತ್ತು. 2012ರಲ್ಲಿ ಈ ಜೋಡಿ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ನಂತರ ಇಬ್ಬರೂ ಕೆಲವು ವರ್ಷಗಳ ಕಾಲ ಡೇಟಿಂಗ್‌ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಕೊಹ್ಲಿ ಮತ್ತು ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಹರಡಿದ್ದವು.